ಸೆಪ್ಟಂಬರ್ (ಕವನ)

ಕವನ : (www.vknews.com)

ನವಮಾಸ ಬಂದಿದೆ
ಹೊಸ ವಸಂತವನೆ ತಂದಿದೆ
ನಡೆ ಮೆಲ್ಲಗೆ , ನುಡಿ ಮೆತ್ತಗೆ
ಗುಣು ಗುಣಿಸುತಲಿ ನೀ ಸಾಗು

ನೋವುಗಳು ಮರೆಯಾಗಲಿ
ನಲಿವುಗಳು ಜತೆಗಿರಲಿ
ಬದುಕ ಕಟ್ಟುವ ಕನಸುಗಳು ಬಾನಂಗಳದೆತ್ತರಕ್ಕೇರಲಿ

ಅದೃಷ್ಟವು ಮೇಳೈಸಿ
ಭಾಗ್ಯಗಳು ಬಳಿ ಬರಲಿ
ಗಗನ ಚುಂಬಿಸೋ ಭರದಲ್ಲಿ
ಪಾದಗಳು ಭೂತಾಯಿಯ ಕಡೆಗಣಿಸದಿರಲಿ

ಮನಸುಗಳು ಕಾಮನಬಿಲ್ಲಾಗಿ
ಬಾವನೆಗಳು ಬಾನಾಡಿಗಳಾಗಿ
ಸದಾ ನಗುವೆಂಬ ಹಸಿಗೂಸು
ತುಟಿಯ ತೊಟ್ಟಿಲಲಿ ತೂಗುತ್ತಿರಲಿ

ಇಬ್ಬನಿಯ ಮಳೆ ಹನಿಯಲಿ
ಕಾರ್ಯಕಲ್ಪದ ಹೂವರಳಲಿ
ದುಂಬಿಗಳ ಝೇಂಕಾರವೋ, ಹಕ್ಕಿಗಳ ಚಿಲಿಪಿಲಿಯೋ
ಮಧುರ ಸಂಗೀತವಾಗಿ ಮುದ ನೀಡಲಿ

ಸೊಕ್ಕು ಛಲಕ್ಕಿರಲಿ, ಒಪ್ಪು ಗುಣಕ್ಕಿರಲಿ
ಬಿಂಕ-ಬಿನ್ನಾಣಗಳು ಬಯಕೆಗಳಿಗಿರಲಿ
ನಯವಿನಯರು ಜತೆಗಿರಲಿ
ಗುರಿ ಸಾಗುವ ಭರದಲ್ಲಿ
ಮನ ಸವೆದ ಹಾದಿಯನ್ನೆಂದೂ ಮರೆಯದಿರಲಿ.

– ಹಫ್ಸಾ ಬಾನು ಬೆಂಗಳೂರು

 

ವಿಶ್ವ ಕನ್ನಡಿಗ ನ್ಯೂಸ್

  Leave Your Comment

  Your email address will not be published.*

  ಚಾಟ್ ಮಾಡಿ
  1
  VK News Official Chat
  ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...