ದಾರುಲ್ ಹಿಕ್ಮಾ – ಜಿಸಿಸಿ ಸಮಿತಿ ಪ್ರಥಮ ವಾರ್ಷಿಕೋತ್ಸವ ಹಾಗೂ ಪ್ರಾರ್ಥನಾ ಸಂಗಮ

ಬೆಳ್ಳಾರೆ(ವಿಶ್ವಕನ್ನಡಿಗ ನ್ಯೂಸ್): ಬೆಳ್ಳಾರೆ ದಾರುಲ್ ಹಿಕ್ಮ ಎಜುಕೇಶನ್ ಸೆಂಟರ್ ಇದರ ಜಿಸಿಸಿ ಸಮಿತಿಯ ವಾರ್ಷಿಕೋತ್ಸವ ಹಾಗೂ ಪ್ರಾರ್ಥನಾ ಸಂಗಮ ಕಾರ್ಯಕ್ರಮ 04 ಸೆಪ್ಟೆಂಬರ್ 2020ರಂದು ಝೂಮ್ ಮೂಲಕ ನಡೆಸಲಾಯಿತು.

ಕೇಂದ್ರ ಸಮಿತಿ ಅಧ್ಯಕ್ಷರಾದ ಹಸ್ಸನ್ ಸಖಾಫಿ ಬೆಳ್ಳಾರೆಯವರ ದುಆದೊಂದಿಗೆ ಆರಂಭಿಸಿದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಸಿಸಿ ಸಮಿತಿ ಅಧ್ಯಕ್ಷರಾದ ಜನಾಬ್ ಝೈನುದ್ದೀನ್ ಹಾಜಿ ಬೆಳ್ಳಾರೆಯವರು ನೆರವೇರಿಸಿದರು.

ಕಾರ್ಯಕ್ರದಲ್ಲಿ ಮೊದಲ ಹಂತವಾಗಿ ಇಖ್ಬಾಲ್ ಮದನಿ ಒಮಾನ್, ಅಬ್ದುಲ್ ಕಯ್ಯೂಮ್ ಜಾಲ್ಸೂರ್ ಹಾಗೂ ಇರ್ಶಾದ್ ಮುಸ್ಲಿಯಾರ್ ಬೆಳ್ಳಾರೆಯವರ ಬುರ್ದಾ ಆಲಾಪಣೆ ನಡೆಯಿತು. ನಂತರ ಸಂಸ್ಥೆಯ ಇಂಗ್ಲಿಷ್ ಮೀಡಿಯಾ ವಿದ್ಯಾರ್ಥಿ ಮುಹಮ್ಮದ್ ಶರೀಫ್ ಕಟ್ಟತ್ತಾರ್ ರವರು ಕಿರಾಅತ್ ವಾಚಿಸಿದರು. ಜಿಸಿಸಿ ಸಮಿತಿ ಸಮಿತಿ ಪ್ರ.ಕಾರ್ಯದರ್ಶಿ ಸಾಲಿ ಬೆಳ್ಳಾರೆಯವರು ಕಾರ್ಯಕ್ರಮದಲ್ಲಿ ಭಾಗಿಯಾದವರಿಗೆ ಸ್ವಾಗತ ಹೇಳಿದರು.

ಅಲ್-ಮದೀನತುಲ್ ಮುನವ್ವರ ಮೂಡಡ್ಕ ಸಂಸ್ಥೆಯ ಜನರಲ್ ಮ್ಯಾನೇಜರ್ ಅಶ್ರಫ್ ಸಖಾಫಿ ಮಾಡಾವು ಉಸ್ತಾದರು ಉದ್ಘಾಟನೆ ಮಾಡಿದ ಕಾರ್ಯಕ್ರದಲ್ಲಿ, ದಾರುಲ್ ಹಿಕ್ಮಾ ಕೇಂದ್ರ ಸಮಿತಿ ಪ್ರ.ಕಾರ್ಯದರ್ಶಿ ಉಮ್ಮರ್ ಸಖಾಫಿ, ತಲಕ್ಕಿ ಉಸ್ತಾದರು ಸಂಸ್ಥೆಯ ಪರಿಚಯವನ್ನು ಮಾಡಿದರು.

ಅಬ್ದುಲ್ ರಹಿಮಾನ್ ದಾರಿಮಿ ಕೂಟಂಪಾರ ಉಸ್ತಾದರು ಮುಖ್ಯ ಪ್ರಭಾಷಣ ಮಾಡಿದ ಕಾರ್ಯಕ್ರಮದಲ್ಲಿ ಕೆಸಿಎಫ್ ಅಂತರ್ರಾಷ್ಟ್ರೀಯ ಸಮಿತಿಯ ಅಧ್ಯಕ್ಷರಾದ ಡಾ| ಶೇಖ್ ಬಾವ ಮಂಗಳೂರು ರವರು ನೂತನವಾಗಿ ರಚನೆಯಾದ UAE ರಾಷ್ಟ್ರೀಯ ಸಮಿತಿಯನ್ನು ಹಾಗೂ ದಾರುಲ್ ಹಿಕ್ಮಾ ಕೇಂದ್ರ ಸಮಿತಿ ಅಧ್ಯಕ್ಷರಾದ ಹಸ್ಸನ್ ಸಖಾಫಿ ಬೆಳ್ಳಾರೆಯವರು ನೂತನ GCC ಸಮಿತಿಯನ್ನು ಘೋಷಣೆ ಮಾಡಿದರು.

ಮುಖ್ಯ ಅತಿಥಿಯಾಗಿ ಆಗಮಿಸಿದ ಅಸ್ಸಯ್ಯಿದ್ ಶಿಹಾಬುದ್ದೀನ್ ಅಲ್-ಬುಖಾರಿ ಕಡಲುಂಡಿ ತಂಙಳ್ ರವರು ನಸೀಹತ್ ಹೇಳಿ ತಹ್’ಲೀಲ್ ಸಮರ್ಪಣೆ ಹಾಗೂ ದುಆ ನಡೆಸಿದರು. ಕಾರ್ಯಕ್ರಮದ ಕೊನೆಯಲ್ಲಿ GCC ಸಮಿತಿಯ ನೂತನ ಅಧ್ಯಕ್ಷರಾದ ಯೂಸುಫ್ ಮುಸ್ಲಿಯಾರ್ ಚೆನ್ನಾರ್ ರವರು ಧನ್ಯವಾದ ಹೇಳಿ
ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು.
ಈ ಕಾರ್ಯಕ್ರಮವನ್ನು
ಅಬ್ದುಲ್ ಸಲಾಂ ಎನ್ಮೂರ್ ಜಿದ್ದಾ ನಿರೂಪಿಸಿದರು.

ಸದ್ರಿ ಕಾರ್ಯಕ್ರಮದಲ್ಲಿ ಕೆಸಿಎಫ್ ಅಂತರ್ರಾಷ್ಟ್ರೀಯ ಸಮಿತಿ ಪ್ರ.ಕಾರ್ಯದರ್ಶಿ ಖಮರುದ್ದೀನ್ ಗೂಡಿನಬಳಿ, ಫೈನಾನ್ಷಿಯಲ್‌ ಕಂಟ್ರೋಲರ್ ಅಬ್ದುಲ್ ಹಮೀದ್ ಸಅದಿ ಈಶ್ವರಮಂಗಳ, ಇಹ್’ಸಾನ್ ಇಲಾಖೆಯ ಅಧ್ಯಕ್ಷರಾದ ಅಬೂಬಕ್ಕರ್ ಹಾಜಿ ರೈಸ್ಕೋ, ಕೆಸಿಎಫ್ ಸೌದಿ ರಾಷ್ಟ್ರೀಯ ಸಮಿತಿ ಅಧ್ಯಕ್ಷರಾದ ಡಿಪಿ ಯೂಸುಫ್ ಸಖಾಫಿ ಬೈತಾರ್, ದಾರುಲ್‌ ಹಿಕ್ಮ ಸೌದಿ ರಾಷ್ಟ್ರೀಯ ಸಮಿತಿ ಅಧ್ಯಕ್ಷರಾದ ರಶೀದ್ ಹಾಜಿ ಬೇಳ್ಳಾರೆ, ಜಲೀಲ್ ನಿಝಾಮಿ UAE, ಅಬ್ದುಲ್ ಸತ್ತಾರ್ ಸಖಾಫಿ ಬೆಳ್ಳಾರೆ, ಕೊಂಬಳಿ ಝುಹ್’ರಿ, ದಾವೂದ್ ಮಾಸ್ಟರ್ ಪಂಜ, ಅಬ್ದುಲ್ಲಾ ಹಾಜಿ ಅಂಚಿನಡ್ಕ, ಝಕರಿಯ್ಯಾ ಪಂಜ, ಹನೀಫ್ ಮುಸ್ಲಿಯಾರ್ ಎಣ್ಮೂರು, ಹಸೈನಾರ್ ಅಮಾನಿ ಅಬುಧಾಬಿ, ಅಯ್ಯೂಬ್ ಕೋಡಿ ಒಮಾನ್ ಹಾಗೂ ಇತರ ನೇತಾರರು, ಹಿತೈಷಿಗಳು ಹಾಜರಾಗಿದ್ದರು ಎಂದು ಸಂಘಟಕರು ತಿಳಿಸಿರುತ್ತಾರೆ.

  Leave Your Comment

  Your email address will not be published.*

  ಚಾಟ್ ಮಾಡಿ
  1
  VK News Official Chat
  ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...