ಜೆದ್ದಾ(wwwvknews.in): ಉಮ್ರಾ ಸೇವೆಯ ಪುನರಾರಂಭವು ಮುಂದಿನ ದಿನಗಳಲ್ಲಿ ಪ್ರಾರಂಭವಾಗಲಿದ್ದು, ಆರಂಭಿಕ ಹಂತದಲ್ಲಿ ಸೀಮಿತ ಸಂಖ್ಯೆಯ ದೇಶೀಯ ಯಾತ್ರಾರ್ಥಿಗಳಿಗೆ ಮಾತ್ರ ಉಮ್ರಾ ನಿರ್ವಹಿಸಲು ಅವಕಾಶವಿದೆ ಎಂದು ಒಕಾಜ್ / ಸೌದಿ ಗೆಜೆಟ್ ಮೂಲಗಳಿಂದ ತಿಳಿದು ಬಂದಿದೆ.
ಸೌದಿ ಅರೇಬಿಯಾದ ಒಳಗಿರುವ ಪ್ರಜೆಗಳು ಹಾಗೂ ವಿದೇಶಿಗಳು ಕೆಲವು ನಿಯಮಗಳು ಮತ್ತು ಷರತ್ತುಗಳನ್ನು ಪೂರೈಸಿದಲ್ಲಿ ತೀರ್ಥಯಾತ್ರೆ ಮಾಡಲು ಅನುಮತಿಸಲಾಗುವುದು. ಪ್ರತೀ ಯಾತ್ರಾರ್ಥಿಯೂ ಕರೋನವೈರಸ್ ಪರೀಕ್ಷೆ ನಡೆಸಿ ‘ನೆಗೆಟಿವ್’ ವೈದ್ಯಕೀಯ ಪ್ರಮಾಣಪತ್ರವನ್ನು ತಮ್ಮೊಂದಿಗೆ ಕೊಂಡೊಯ್ಯುವುದು ಕಡ್ಡಾಯವಾಗಿರುತ್ತದೆ. ಕರೋನವೈರಸ್ ಮುನ್ನೆಚ್ಚರಿಕೆ ಕ್ರಮಗಳು ಮತ್ತು ತಡೆಗಟ್ಟುವ ಪ್ರೋಟೋಕಾಲ್ಗಳಿಗೆ ಅನುಗುಣವಾಗಿ ಉಮ್ರಾಗೆ ಅವಕಾಶ ಕಲ್ಪಿಸಲಾಗುವುದು. ಈ ನಿಟ್ಟಿನಲ್ಲಿ ಹಜ್ ಮತ್ತು ಉಮ್ರಾ ಸಚಿವಾಲಯವು ಶೀಘ್ರದಲ್ಲೇ ನಿಯಮಗಳು ಮತ್ತು ಷರತ್ತುಗಳನ್ನು ಪ್ರಕಟಿಸಲಿದೆ ಎಂದು ಮೂಲಗಳು ತಿಳಿಸಿವೆ. ಪ್ರತಿ ಯಾತ್ರಿಕರು ಕೂಡ ತಮ್ಮ ಉಮ್ರಾ ಯಾತ್ರೆಯ ದಿನಾಂಕ ಮತ್ತು ಸಮಯವನ್ನು ನಿರ್ದಿಷ್ಟಪಡಿಸುವ ಮೊಬೈಲ್ ಅಪ್ಲಿಕೇಶನ್ ಡೌನ್ ಲೋಡ್ ಮಾಡಿಕೊಂಡಿರಬೇಕಾಗುತ್ತದೆ ಮತ್ತು ಉಮ್ರಾ ನಿಯಮಗಳು ಮತ್ತು ಷರತ್ತುಗಳನ್ನು ಪೂರೈಸುವವರಿಗೆ ಮಾತ್ರ ಉಮ್ರಾ ನಿರ್ವಹಿಸಲು ಅನುಮತಿಯನ್ನು ಸಂಬಂಧಪಟ್ಟ ಅಧಿಕಾರಿಗಳು ನೀಡುತ್ತಾರೆ ಎಂದು ಮೂಲವು ದೃಢ ಪಡಿಸಿದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.