(www.vknews.com) :
ಇದೊಂದು ಲಿಪಿಯೋ,
ಕಪಿ ಚೇಷ್ಟೆಯ ಬಣ್ಣನೇಯೋ,
ಇದು ವರ್ಣಮಾಲೆಯೋ,
ಭಾಷೆಯ ಕಗ್ಗೊಲೆಯೋ,
ಇದು ಕೈಬರಹವೋ,
ಅಲ್ಲ ಅಧುನಿಕ ತಂತ್ರಜ್ಣಾಣದ ಪರಿಕಲ್ಪನೇವೋ,
ಕಲಿಯಲು ಬೇಕು ವನವಾಸ,
ಬರೆಯಲು ಪಡಬೇಕು ಹರಸಾಹಸ.
ಅವನೇನನ್ನೋ ಗೀಚಿದ,
ಮೆದುಳಿಲ್ಲದವರಿಗೆ ವರ್ಣಿಸಿದ,
ಹೆಸರುಗಳಿಸಬೇಕೆಂಬ ಹಂಬಲ,
ಪಡೆದ ಅಕಾಡಮಿಯ ಬೆಂಬಲ,
ಬ್ಯಾರಿಗಳಿಗೆಂದೆ ಹೇಳಿದ,
ಅವರಿಂದಲೇ ಉಗುಳಿಸಿದ,
ಬ್ಯಾರಿಗಳನ್ನು ಮುಂದಿಟ್ಟು,
ಬ್ಯಾರ(ಹೆಸರು) ಮಾಡುವೇನೆಂಬ ಪಟ್ಟು.
ಈ ಅಕಾಡೆಮಿಯಿರುವುದು ಬ್ಯಾರಿಗಳಿಂದ, ಬ್ಯಾರಿಗಳಿಗಾಗಿ, ಬ್ಯಾರಿಗಳಿಗೋಸ್ಕರ,
ಅದರೆ ಅದರೊಳಗಿರುವುದೆಲ್ಲ ಪಡೆವ ತವಕದಲ್ಲಿ ಪ್ರಶಸ್ತಿ ಪುರಸ್ಕಾರಗಳಿಗೋಸ್ಕರ.
ನಾಚಿಕೆಯೂ ಇಲ್ಲ,
ಮಾನ ಮರ್ಯಾದೇಯೂ ಇಲ್ಲ,
ಅತ್ತ ಭಾಷೆಯೂ ಇಲ್ಲ,
ಇತ್ತ ಆಕಾಡಮಿಯೂ ಇಲ್ಲ,
ಅಶ್ಫಾಕ್ ಎ. ಕಾರ್ನಾಡ್,