ಬಂಟ್ವಾಳ ಪುರಸಭಾ ಚುನಾಯಿತ ಪ್ರತಿನಿಧಿಗಳಿಗೆ ಅಧಿಕಾರಿ ನೀಡಿ : ಮಾಜಿ ಸಚಿವ ರೈ ನೇತೃತ್ವದ ನಿಯೋಗ ಆಗ್ರಹ

ಬಂಟ್ವಾಳ, ಸೆ. 19, 2020 (ವಿಶ್ವಕನ್ನಡಿಗ ನ್ಯೂಸ್) : ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಹಾಗೂ ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ವತಿಯಿಂದ ಮಾಜಿ ಸಚಿವ ಬಿ ರಮಾನಾಥ ರೈ ಅವರ ನೇತೃತ್ವದಲ್ಲಿ ಬಂಟ್ವಾಳ ಪುರಸಭೆಯಲ್ಲಿ ಚುನಾಯಿತ ಜನ ಪ್ರತಿನಿಧಿಗಳನ್ನು ಕಡೆಗಣಿಸಲಾಗುತ್ತಿದೆ ಎಂದು ಆರೋಪಿಸಿ ಹಾಗೂ ಜನ ಪ್ರತಿನಿಧಿಗಳಿಗೆ ಅಧಿಕಾರ ನೀಡುವಂತೆ ಆಗ್ರಹಿಸಿ ಆಡಳಿತಾಧಿಕಾರಿಗೆ ಶನಿವಾರ ಮನವಿ ಸಲ್ಲಿಸಲಾಯಿತು.
ಸ್ಥಳೀಯ ಶಾಸಕರು ಕಾಂಗ್ರೆಸ್ ಪಕ್ಷದ ಸದಸ್ಯರ ವಾರ್ಡ್‍ನಲ್ಲಿ ಅಭಿವೃದ್ದಿ ಕಡೆಗಣಿಸಿದ್ದು, ನಿರ್ಮಲ ಬಂಟ್ವಾಳ ಯೋಜನೆಯಡಿ ತ್ಯಾಜ್ಯ ನಿರ್ವಹಣೆ ಸಂಪೂರ್ಣ ಸ್ಥಗಿತಗೊಂಡಿದೆ. ಕುಡಿಯುವ ನೀರು ಒದಗಿಸುವಲ್ಲಿ ಸಂಪೂರ್ಣ ವಿಫಲವಾಗಿ 2 ತಿಂಗಳು ನೀರಿನ ಬಿಲ್ಲು 90 ರೂಪಾಯಿ ಇದ್ದು, ಪುರಸಭೆಯ ಅವ್ಯವಸ್ಥೆಯಿಂದ 2 ತಿಂಗಳ ಕುಡಿಯುವ ನೀರಿನ ಬಿಲ್ಲು 2 ಸಾವಿರದಿಂದ 3 ಸಾವಿರಕ್ಕೆ ಏರಿಕೆಯಾಗಿದೆ. ಇದು ಸಾರ್ವಜನಿಕರಿಗೆ ತುಂಬಲಾರದ ಹೊರೆಯಾಗಿದೆ ಎಂದು ಮನವಿಯಲ್ಲಿ ವಿವರಿಸಲಾಗಿದೆ.
ಈ ಸಂದರ್ಭ ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅದ್ಯಕ್ಷ ಬೇಬಿ ಕುಂದರ್, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅದ್ಯಕ್ಷ ಸುಧೀಪ್ ಕುಮಾರ್ ಶೆಟ್ಟಿ, ಜಿ.ಪಂ. ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ತಾ.ಪಂ. ಉಪಾಧ್ಯಕ್ಷ ಬಿ ಎಂ ಅಬ್ಬಾಸ್ ಅಲಿ, ಪುರಸಭಾ ಸದಸ್ಯರುಗಳಾದ ಗಂಗಾಧರ ಪೂಜಾರಿ, ಅಬೂಬಕ್ಕರ್ ಸಿದ್ದೀಕ್ ಗುಡ್ಡೆಅಂಗಡಿ, ಲೋಲಾಕ್ಷ ಶೆಟ್ಟಿ, ಮುಹಮ್ಮದ್ ನಂದರಬೆಟ್ಟು, ಜೆಸಿಂತಾ ಡಿ’ಸೋಜ, ಗಾಯತ್ರಿ ಪ್ರಕಾಶ್, ಲುಕ್ಮಾನ್ ಬಿ.ಸಿ.ರೋಡು, ಮುಹಮ್ಮದ್ ಶರೀಫ್ ಶಾಂತಿಅಂಗಡಿ, ವಾಸು ಪೂಜಾರಿ, ಪ್ರಮುಖರಾದ ಜಗದೀಶ್ ಕೊಯಿಲ, ಪದ್ಮನಾಭ ರೈ, ಚಿತ್ತರಂಜನ್ ಶೆಟ್ಟಿ, ಮದುಸೂಧನ್ ಶೆಣೈ, ಪದ್ಮಸ್ಮಿತ್, ಅಮ್ಮು ಅರಬಿಗುಡ್ಡೆ, ವೆಂಕಪ್ಪ ಪೂಜಾರಿ, ರಪೀಕ್ ಪಲ್ಲಮಜಲು, ವಿನೋದ್‍ರಾಜ್ ಕೊಯಿಲ ಮೊದಲಾದವರು ಉಪಸ್ಥಿತರಿದ್ದರು.

ಪ್ರಧಾನ ವರದಿಗಾರರು,
ವಿಶ್ವ ಕನ್ನಡಿಗ ನ್ಯೂಸ್

    Leave Your Comment

    Your email address will not be published.*

    Open chat
    1
    ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...