ಪ್ರೊಟೆಕ್ಟರ್ ಜನರಲ್ ಆಫ್ ಇಮಿಗ್ರೆಂಟ್ಸ್ ರನ್ನು ಭೇಟಿ ಮಾಡಿ ಸಚಿವಾಲಯದ ಮಧ್ಯಪ್ರವೇಶಕ್ಕೆ ಮನವಿ ಸಲ್ಲಿಸಿದ ಡಾ.ಆರತಿ ಕೃಷ್ಣ


ದೆಹಲಿ(ವಿಶ್ವ ಕನ್ನಡಿಗ ನ್ಯೂಸ್): ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಪ್ರೊಟೆಕ್ಟರ್ ಜನರಲ್ ಆಫ್ ಇಮಿಗ್ರೆಂಟ್ಸ್(ವಲಸಿಗರ ಸಂರಕ್ಷಣಾ ಜನರಲ್) ಆಗಿರುವ ಯೋಗೇಶ್ವರ್ ಸಂಘ್ವಾನ್ ರನ್ನು ಕರ್ನಾಟಕ ಸರಕಾರದ ಮಾಜಿ ಅನಿವಾಸಿ ಫಾರಂ ನ ಉಪಾಧ್ಯಕ್ಷೆ ಹಾಗು ಕೋವಿಡ್ ಕಾಲದಲ್ಲಿ ಅನಿವಾಸಿಗಳ ಆಪದ್ಭಾಂದವರಾಗಿ ಕಾರ್ಯ ನಿರ್ವಹಿಸಿರುವ ಡಾ.ಆರತಿ ಕೃಷ್ಣರವರು ದೆಹಲಿಯಲ್ಲಿ ಭೇಟಿ ಮಾಡಿ ಮಾತುಕತೆ ನಡೆಸಿದರು.

ವಿವಿಧ ಏಜೆನ್ಸಿಗಳು ವಿವಿಧ ದೇಶಗಳಲ್ಲಿ ಆಯ್ಕೆ ಮಾಡಿ,ಬಳಿಕ ಕೋವಿಡ್ ಕಾರಣದಿಂದ ಅತಂತ್ರರಾಗಿರುವ ವಿವಿಧ ಸ್ತರಗಳ ಉದ್ಯೋಗವಕಾಶಿಗಳ ಭವಿಷ್ಯದ ಬಗ್ಗೆ-ಅವರ ಸಮಸ್ಯೆಗಳ ಬಗ್ಗೆ ಚರ್ಚಿಸಿದರು.ಪ್ರೊಟೆಕ್ಟರ್ ಜನರಲ್ ಆಫ್ ಇಮಿಗ್ರೆಂಟ್ ಆಫೀಸ್ ನಲ್ಲಿ ನೋದಾಯಿಸಿದ್ದಾಗ್ಯೂ ಇವರ ಭವಿಷ್ಯ ತೂಗುಯ್ಯಾಲೆಯಲ್ಲಿದ್ದು,ಇದಕ್ಕಾಗಿ ಅಗತ್ಯವಿರುವ ಮೊತ್ತವನ್ನು ದಾಖಲಿಸಿದ ಬಳಿಕವೂ ಕೆಲಸ ಸಿಗುವ ಸಾಧ್ಯತೆಗಳು ಕ್ಷೀಣಿಸಿರುವುದು ಅವರನ್ನು ಆತಂಕದಲ್ಲಾಗಿಸಿರುವ ಬಗ್ಗೆ ಸಮಗ್ರವಾಗಿ ವಿವರಿಸಿದರು.ಹೊರದೇಶದಲ್ಲಿ ಅತಂತ್ರರಾಗಿರುವ ಹಲವರು ವಂದೇ ಭಾರತ್ ಮಿಷನ್-ವಿಶೇಷ ವಿಮಾನಗಳ ಮೂಲಕ ಸ್ವದೇಶಕ್ಕೆ ಆಗಮಿಸಿದ್ದರೂ ಇನ್ನುಳಿದ ಸಾವಿರಾರು ಮಂದಿಗೆ ಅಗತ್ಯ ನೆರವಿನ ಅನಿವಾರ್ಯದ ಬಗ್ಗೆ ಮನವಿ ಮಾಡಿದರು.

ಸಂಪಾದಕರು,
ವಿಶ್ವ ಕನ್ನಡಿಗ ನ್ಯೂಸ್

    Leave Your Comment

    Your email address will not be published.*

    Open chat
    1
    ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...