ANIWAS ಸುಂಕದಕಟ್ಟೆ , ಅಧ್ಯಕ್ಷರಾಗಿ ಉಬೈದುಲ್ಲಾ ಸೌದಿ ಅರೇಬಿಯಾ ಮತ್ತು ಕಾರ್ಯದರ್ಶಿಯಾಗಿ ನಿಯಾಜ್ NRS ಅಬುಧಾಬಿ ನೇಮಕ

ಸುಂಕದಕಟ್ಟೆ(ವಿಶ್ವಕನ್ನಡಿಗ ನ್ಯೂಸ್): ನಮ್ಮೂರಿನಿಂದ ಉದ್ಯೋಗ ನಿಮಿತ್ತ ಪ್ರವಾಸಿ ಲೋಕಕ್ಕೆ ಬಂದಂತಹ ವಿವಿಧ ದೇಶಗಳಲ್ಲಿ ದುಡಿಯುತ್ತಿರುವವರಿಂದ ಧಾರ್ಮಿಕ , ರಾಜಕೀಯ , ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಬಡ ನಿರ್ಗತಿಕರ ಪರ ನಿಲ್ಲಲು ಹಾಗು ನಿಸ್ವಾರ್ಥ ಸೇವೆ ಗೆಯ್ಯಲು ರೂಪೀಕರಿಸಿದಂತಹ ಪ್ರಾವಾಸಿ ಒಕ್ಕೂಟವಾಗಿದೆ “ಅಲ್ ನಸ್ರ್ ಇಂಡಿಯನ್ ಓವರ್ಸೀಸ್ ವೆಲ್ಫೇರ್ ಅಸೋಸಿಯೇಷನ್ , ಸುಂಕದಕಟ್ಟೆ (ANIWAS ).

ANIWAS ತನ್ನೆರೆಡು ವರ್ಷದಲ್ಲಿ ಬಡ ನಿರ್ಗತಿಕರ ಕಣ್ಣೀರೊರೆಸುವಿಕೆ , ವಿಧವೆಯರ ಪಾಲನೆ, ಬಡ ಹಾಗು ಮಧ್ಯಮ ವರ್ಗದವರಿಗೆ COVID ೧೯, ಪ್ರಯುಕ್ತ ಕಿಟ್ ವಿತರಣೆ , ಬಡ ಕುಟುಂಬಗಳಿಗೆ ರಂಝಾನ್ ಕಿಟ್ ವಿತರಣೆ , ಸಮಿತಿ ಸದಸ್ಯರಿಗೆ ಅವಶ್ಯಕತೆ ಬಂದಾಗ ಸಾಲ ನೀಡಿ ಸಹಾಯ ಮಾಡುವಿಕೆ, ಅನಾರೋಗ್ಯಕ್ಕೆ ತುತ್ತಾದವರ ಚಿಕಿತ್ಸೆಗೆ ಸಹಾಯ ಹಸ್ತ . ಬಡ ಹೆಣ್ಣು ಮಕ್ಕಳ ವಿವಾಹಕ್ಕೆ ಧನ ಸಹಾಯ , ಊರ ಮಕ್ಕಳಿಗೆ ಸಾಂಸ್ಕೃತಿಕ ಸ್ಪರ್ಧಾ ಕಾರ್ಯಕ್ರಮ , ಮಹಿಳೆಯರಿಗೆ ಪ್ರಬಂಧ ಸ್ಪರ್ಧೆ , ಊರಿನ ಶಾಲೆಯ ನೀರಿನ ವ್ಯವಸ್ಥೆಗೆ ಸಹಾಯ ಇನ್ನೂ ಹಲವಾರು ಸಮಾಜಮುಖಿ ಕೆಲಸಗಳನ್ನು ಮಾಡಿದೆ.

ಅಲ್ ನಸ್ರ್ ಇಂಡಿಯನ್ ಓವರ್ಸೀಸ್ ವೆಲ್ಫೇರ್ ಅಸೋಸಿಯೇಷನ್ ಸುಂಕದಕಟ್ಟೆ ಇದರ ಎರಡನೇ ವಾರ್ಷಿಕ ಮಹಾಸಭೆಯು ದಿನಾಂಕ 29 ಆಗಸ್ಟ್ 2020 ರಂದು ಗೌರವಾಧ್ಯಕ್ಷರಾದ ಹನೀಫ್ ಹಾಜಿ ಮಕ್ಕ ಇವರ ನೇತೃತ್ವದಲ್ಲಿ ANIWAS ಸುಂಕದಕಟ್ಟೆ ಇದರ ಅಧೀಕೃತ WhatsApp ಗ್ರೂಪ್ನಲ್ಲಿ ನಡೆಯಿತು.

ಹೊಸ ಸಮೀತಿಯ ಸದಸ್ಯರು :
ಅಧ್ಯಕ್ಷರು : ಉಬೈದುಲ್ಲಾ ಆದಂ KSA
ಉಪಾಧ್ಯಕ್ಷರು: ಸಲೀಂ S.A ಕತಾರ್
ನೌಫಾಲ್ ಆದಂ KSA
ಮುಖ್ಯ ಕಾರ್ಯದರ್ಶಿ : ನಿಯಾಜ್ NRS, AbuDhabi
ಸಹ ಕಾರ್ಯದಸರ್ಶಿ : ಅಸದುಲ್ಲಾ, Dubai
ಖಜಾಂಜಿ – ಸಲಾಂ P.S Qatar
ಪತ್ರಿಕಾ ಕಾರ್ಯದರ್ಶಿ : ಜಾಬಿರ್ ಹಂಝ, OMAN
ಸಂಘಟನಾ ಕಾರ್ಯದರ್ಶಿ : Abdul Kunghi SDS, KSA
ಸಂಚಾಲಕರು : ಸಫಿಯುಲ್ಲಾ ಇದ್ರೀಸ್
ಲೆಕ್ಕ ಪರಿಶೋಧಕರು : ಲತೀಫ್ ಫೈಝಿ OMAN

ಇಂಡಿಯನ್ ಕೋ-ಒರ್ಡಿನೇಟರ್ಸ್ಗಳಾಗಿ ಅಶ್ರಫ್ ಇಂಡಿಯಾ, ಫಾರೂಕ್ ಅಲ್ ರಬೀಹ್
ಸದಸ್ಯರುಗಳಾಗಿ ಅಶ್ರಫ್ ಸಲಾಲ, ಇಬ್ರಾಹಿಂ ಪೂಂಜಾಲಕಟ್ಟೆ UAE, ರಶೀದ್ ಕುವೈಟ್, ಹಾರಿಸ್ ಇಬ್ರಾಹಿಂ KSA,  ಹರ್ಷದ್ S.B UAE, ಸಂಶುದ್ದೀನ್ S.B UAE,  ಮುಸ್ತಫಾ ವಳಚ್ಚಿಲ್ UAE, ಸಿರಾಜ್ KSA ಇವರುಗಳು ಆಯ್ಕೆಯಾಗಿದ್ದಾರೆ.

    Leave Your Comment

    Your email address will not be published.*

    Open chat
    1
    ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...