ಗೂನಡ್ಕ ತಹ್ಲೀಲ್ ಮಜ್ಲಿಸ್, ಬೇಕಲ್ ಉಸ್ತಾದರ ಆರೋಗ್ಯ ಮತ್ತು ನಾಡಿನ ಕ್ಷೇಮಕ್ಕಾಗಿ ವಿಶೇಷ ಪ್ರಾರ್ಥನೆ

ಗೂನಡ್ಕ(ವಿಶ್ವಕನ್ನಡಿಗ ನ್ಯೂಸ್): ಸುನ್ನೀ ಯುವಜನ ಸಂಘ ಎಸ್ ವೈ ಎಸ್, ಸುನ್ನೀ ಸ್ಟುಡೆಂಟ್ಸ್ ಫೆಡರೇಷನ್ ಎಸ್ ಎಸ್ ಎಫ್, ಸುನ್ನೀ ಬಾಲ ಸಂಘ ಎಸ್ ಬಿ ಎಸ್ ಗೂನಡ್ಕ ಇವುಗಳ ಸಂಯುಕ್ತ ಆಶ್ರಯದಲ್ಲಿ ಇತ್ತೀಚೆಗೆ ನಮ್ಮನ್ನಗಲಿದ ಮುಹಮ್ಮದ್ ಹನೀಫ್ ಗೂನಡ್ಕ ಅವರಿಗೆ ತಹ್ಲೀಲ್ ಮತ್ತು ಪ್ರತ್ಯೇಕ ಪ್ರಾರ್ಥನಾ ಸಂಗಮವು ಸ್ಥಳೀಯ ಖತೀಬ್ ಮುಹಮ್ಮದ್ ಅಲಿ ಸಖಾಫಿ ಮಾದಾಪುರ ರವರ ನೇತೃತ್ವದಲ್ಲಿ ಎಸ್ ವೈ ಎಸ್ ಸದಸ್ಯ ಮುನೀರ್ ಪ್ರಗತಿ ಯವರ ನಿವಾಸದಲ್ಲಿ ನಡೆಯಿತು.ಎಸ್ ವೈ ಎಸ್ ಅಧ್ಯಕ್ಷ ಅಬ್ದುಲ್ ಲತೀಫ್ ಸಖಾಫಿ ಗೂನಡ್ಕ ಉದ್ಬೋದನೆ ನಡೆಸಿದರು.

ಈ ಸಂದರ್ಭ ಅನಾರೋಗ್ಯ ಪೀಡಿತರಾಗಿ ವಿಶ್ರಾಂತಿಯಲ್ಲಿರುವ ಖಾಝಿ ಬೇಕಲ್ ಉಸ್ತಾದರ ಶೀಘ್ರ ಚೇತರಿಕೆ ಮತ್ತು ಪೂರ್ಣ ಆರೋಗ್ಯಕ್ಕಾಗಿ, ನಾಡಿನ ಕ್ಷೇಮಕ್ಕಾಗಿ ವಿಶೇಷ ಪ್ರಾರ್ಥನೆ ನಡೆಸಲಾಯಿತು.

ಗೂನಡ್ಕ ಜಮಾಅತ್ ಉಪಾಧ್ಯಕ್ಷ ಅಶ್ರಫ್ ಏ ಟಿ,ಪ್ರಧಾನ ಕಾರ್ಯದರ್ಶಿ ಅಬೂಸಾಲಿ ಪಿ ಕೆ, ಅಲ್ ಅಮೀನ್ ವೆಲ್ಫೇರ್ ಎಸೋಸಿಯೇಶನ್ ಅಧ್ಯಕ್ಷ ಮುಹಮ್ಮದ್ ಕುಂಞ್ಞಿ ಗೂನಡ್ಕ,ಎಸ್ ವೈ ಎಸ್ ಪದಾಧಿಕಾರಿಗಳಾದ ಮುಹಮ್ಮದ್ ಹನೀಫ್ ಝೈನಿ,ಎಸ್ ಎಂ ಅಬ್ದುಲ್ಲ, ಉಮ್ಮರ್ ಪಿ ಎ, ಎಸ್ ಎಸ್ ಎಫ್ ಪದಾಧಿಕಾರಿಗಳಳಾದ ಸಿದ್ದೀಖ್ ಗೂನಡ್ಕ, ಹಾರಿಸ್ ಇಜಾಸ್ ಎಸ್ ಬಿ ಎಸ್ ಅಧ್ಯಕ್ಷ ನಿಹ್ಮತುಲ್ಲಾ ಇಸ್ಹಾಖ್ ಮುಂತಾದವರು ಹಾಗೂ ಹಿತೈಷಿಗಳು ಉಪಸ್ಥಿತರಿದ್ದರು.

    Leave Your Comment

    Your email address will not be published.*

    ಚಾಟ್ ಮಾಡಿ
    1
    VK News Official Chat
    ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...