ಜೆದ್ದಾ(www.vknews.in): 2020 ರ ಅಕ್ಟೊಬರ್ 4 ರಿಂದ ಸೀಮಿತ ಸಂಖ್ಯೆಯ ದೇಶೀಯ ಯಾತ್ರಾರ್ಥಿಗಳಿಗೆ ಉಮ್ರಾ ಕರ್ಮ ನೆರವೇರಿಸಲು ಹಾಗೂ ಎರಡು ಪವಿತ್ರ ಮಸೀದಿಗಳಿಗೆ ಭೇಟಿ ನೀಡಲು ಅವಕಾಶ ಕಲ್ಪಿಸುವುದಾಗಿ ಸೌದಿ ಅರೇಬಿಯಾ ಘೋಷಿಸಿದೆ ಎಂದು ಸೌದಿ ಪತ್ರಿಕಾ ಸಂಸ್ಥೆ ಮಂಗಳವಾರ ಆಂತರಿಕ ಸಚಿವಾಲಯದ ಹೇಳಿಕೆಯನ್ನು ಉಲ್ಲೇಖಿಸಿ ವರದಿ ಮಾಡಿದೆ. ಉಮ್ರಾ ಸೇವೆಯನ್ನು ಮೂರು ಹಂತಗಳಾಗಿ ಪುನರಾರಂಭಿಸಲು ತೀರ್ಮಾನಿಸಲಾಗಿದೆ.
ಅಕ್ಟೊಬರ್ 4ರಿಂದ ಪ್ರಾರಭವಾಗುವ ಮೊದಲ ಹಂತದಲ್ಲಿ ಒಂದು ದಿನದಲ್ಲಿ ಸೌದಿ ಅರೇಬಿಯಾದ ಒಳಗಿನಿಂದ ಒಟ್ಟು 6,000 ಯಾತ್ರಿಕರಿಗೆ ಉಮ್ರಾ ನಿರ್ವಹಿಸಲು ಅವಕಾಶ ನೀಡಲಾಗುವುದು. ಅಕ್ಟೊಬರ್ 18ರಿಂದ ಆರಭವಾಗುವ ಎರಡನೇ ಹಂತದಲ್ಲಿ, 15,000 ದೇಶೀಯ ಯಾತ್ರಿಕರು ಒಂದು ದಿನದಲ್ಲಿ ಉಮ್ರಾವನ್ನು ನೆರವೇರಿಸಬಹುದು. ನವೆಂಬರ್ 1 ರಿಂದ ಆರಂಭವಾಗುವ ಮೂರನೇ ಹಂತದಲ್ಲಿ ಸೌದಿ ಅರೇಬಿಯಾದ ಒಳಗಿನಿಂದ ಮತ್ತು ವಿದೇಶಗಳಿಂದ ಆಗಮಿಸುವ ಸೀಮಿತ ಸಂಖ್ಯೆಯ ಯಾತ್ರಾರ್ಥಿಗಳಿಗೆ ಉಮ್ರಾ ಆಚರಣೆಗಳನ್ನು ಮಾಡಲು ಅವಕಾಶ ನೀಡಲಾಗುವುದೆಂದು ಸೌದಿ ಆಂತರಿಕ ಸಚಿವಾಲಯದ ಪ್ರಕಟಣೆ ತಿಳಿಸಿದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.