Injustice

ಅನ್ಯಾಯ

Injustice

(www.vknews.com) :

ಹೆಜ್ಜೆ ಹೆಜ್ಜೆಗೂ ಭ್ರಷ್ಟಾಚಾರ
ಜಗದಲಿ ರೋಸಿಹೋದ
ಆನಾಥ ಮನಸ್ಸುಗಳಲ್ಲಿ ಸಿಟ್ಟು
ನಾಳೆಯೋ ನಾಳಿದ್ದೋ…
ಮುಕ್ತಿಯ ಕನಸು.

ಕ್ರಾಂತಿಯ ಕನಸು ಭ್ರಮೆ
ಪ್ರಕೃತಿಯೂ ಮೂಕ
ಏನಾಗುವುದೋ ಈ ಬನದ ಭವಿಷ್ಯ
ಪ್ರತಿಯೊಂದು ಕೊಂಬೆಯ ಮೇಲೆ
ಕುಳಿತಿದೆ ವಿಷಸರ್ಪ
ಆದರೂ
ಕತ್ತಲೆಯ ಹಾದಿಯಲ್ಲಿ
ಆಸೆ ಆಕಾಂಕ್ಷೆಗಳ ದೀಪ
ಎದುರಾಗುವ ಪ್ರತಿ ನೆರಳಲ್ಲೂ
ನ್ಯಾಯಕ್ಕಾಗಿ ಹುಡುಕಾಟ.

– Zabiulla Khan

    Leave Your Comment

    Your email address will not be published.*

    ಚಾಟ್ ಮಾಡಿ
    1
    VK News Official Chat
    ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...