ಜೆದ್ದಾ(www.Vknews.in): ಅಕ್ಟೋಬರ್ 4 ರಿಂದ ಸೀಮಿತ ಸಂಖ್ಯೆಯ ದೇಶಿಯ ವಾಸಿಗಳಿಗೆ ಉಮ್ರಾ ಕರ್ಮ ನೆರವೇರಿಸಲು ಸೌದಿ ಅರೇಬಿಯಾ ಸರಕಾರ ಅವಕಾಶ ನೀಡಲಿದ್ದು, ಉಮ್ರಾ ನೆರವೇರಿಸಲಿಚ್ಚಿಸುವವರು ಅಪೇಕ್ಷೆ ಸಲ್ಲಿಸುವ ‘ಐತಮರ್ನಾ’ ಮೊಬೈಲ್ ಆ್ಯಪ್ ನಾಳೆಯಿಂದ (ಸೆಪ್ಟೆಂಬರ್ 27) ಸ್ಮಾರ್ಟ್ ಫೋನ್ ಗಳಲ್ಲಿ ಲಭ್ಯವಾಗಲಿದೆ.
‘ಐತಮರ್ನಾ’ ಮೂಲಕ ಶರತ್ತುಗಳ ಅನ್ವಯ ಅಪೇಕ್ಷೆ ಸಲ್ಲಿಸಿದ ಸೀಮಿತ ಸಂಖ್ಯೆಯ ಯಾತ್ರಾರ್ಥಿಗಳಿಗೆ ಉಮ್ರಾ ನಿರ್ವಹಿಸಲು ಅವಕಾಶ ಕಲ್ಪಿಸಲಾಗುವುದು. ಪ್ರತೀ ಯಾತ್ರಾರ್ಥಿಗೂ ಉಮ್ರಾ ಪೂರ್ತಿಗೊಳಿಸಲು 3 ತಾಸುಗಳ ಕಾಲಾವಕಾಶ ನೀಡಲಾಗುವುದು. ಈ 3 ತಾಸುಗಳ ಅವಧಿಯಲ್ಲಿ ಯಾತ್ರಾರ್ಥಿಯು ಕಅಬಾ ತವಾಫ್ ನಿರ್ವಹಿಸಿ ಸಫಾ ಹಾಗೂ ಮರ್ವಾಗಳ ನಡುವಿನ ಕರ್ಮವನ್ನೂ ಕೂಡ ಪೂರ್ತಿಗೊಳಿಸಿ ಮಕ್ಕಾದಿಂದ ನಿರ್ಗಮಿಸಬೇಕಾಗುತ್ತದೆ. ಮೊಬೈಲ್ ಆ್ಯಪ್ ಮೂಲಕ ಉಮ್ರಾ ಅಪೇಕ್ಷೆ ಸಲ್ಲಿಸುವ ಕ್ರಮ ವಿಧಾನಗಳನ್ನು ಮುಂದೆ ತಿಳಿಯಲಾಗುವುದೆಂದು ಉಮ್ರಾ ಹಾಗೂ ಹಜ್ ಮಂತ್ರಾಲಯ ತಿಳಿಸಿದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.