ಗಾಲಿ ಕುರ್ಚಿಗಳ ಹಸ್ತಾಂತರ ಮತ್ತು ವಿವಿಧ ಸಮಾಜಸೇವಕರಿಗೆ ಸನ್ಮಾನ ಕಾರ್ಯಕ್ರಮ.

(www.vknews.com) : ಕೆದಂಬಾಡಿ ಪರಿಸರ ವ್ಯಾಪ್ತಿಯಲ್ಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಜಾತಿ-ಮತ ಭೇದವಿಲ್ಲದೆ ಹಲವಾರು ಸಮಾಜಸೇವಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಬೈಲ್ ಬ್ರದರ್ಸ್ ಆರ್ಟ್ಸ್ & ಸ್ಪೋರ್ಟ್ಸ್ ಕ್ಲಬ್ (ರಿ), ಕೆದಂಬಾಡಿ ಇದರ ವತಿಯಿಂದ ನಾಳೆ ಸೆಪ್ಟೆಂಬರ್ 27-09-2020 ಆದಿತ್ಯವಾರ ಬೆಳಿಗ್ಗೆ 11 ಗಂಟೆಗೆ ಸರಿಯಾಗಿ ಅರ್ಹ ಬಡ ರೋಗಿಗಳಿಗೆ ವಿತರಿಸುವ ಸಲುವಾಗಿ ಮಂಗಳೂರಿನ ಪ್ರತಿಷ್ಠಿತ MNG ಫೌಂಡೇಶನ್ ಸಂಸ್ಥೆಗೆ ಗಾಲಿ ಕುರ್ಚಿಗಳ ಹಸ್ತಾಂತರ ಮತ್ತು ವಿವಿಧ ‌ಕ್ಷೇತ್ರಗಳಲ್ಲಿ ನಿರಂತರವಾಗಿ ಸಮಾಜಸೇವೆಯಲ್ಲಿ ಗುರುತಿಸಿದ ಆಯ್ದ ಸಮಾಜಸೇವಕರಿಗೆ ಸನ್ಮಾನಿಸುವ ಕಾರ್ಯಕ್ರಮವು ರಹ್ಮಾನಿಯಾ ಜುಮಾ ಮಸೀದಿ ಹತ್ತಿರವಿರುವ ಬೈಲ್ ಬ್ರದರ್ಸ್ ಆರ್ಟ್ಸ್ & ಸ್ಪೋರ್ಟ್ಸ್ ಕ್ಲಬ್ (ರಿ) ಕೆದಂಬಾಡಿ ಇದರ ಕಛೇರಿಯಲ್ಲಿ ಗಣ್ಯ ಅಥಿತಿಗಳ ಉಪಸ್ಥಿತಿಯಲ್ಲಿ ಜರುಗಲಿದೆ ಎಂದು ಕ್ಲಬ್ ನ ಪದಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಶ್ವ ಕನ್ನಡಿಗ ನ್ಯೂಸ್

    Leave Your Comment

    Your email address will not be published.*

    Open chat
    1
    ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...