ಕುವೈತ್ ಆಡಳಿತಗಾರ ಶೇಖ್ ಸಬಾ ಅಲ್ ಅಹ್ಮದ್ ಅಲ್ ಸಬಾ ವಿಧಿವಶ

ಕುವೈತ್(ವಿಶ್ವಕನ್ನಡಿಗ ನ್ಯೂಸ್): ಕುವೈತ್ ಆಡಳಿತಗಾರ ಶೇಖ್ ಸಬಾ ಅಲ್ ಅಹ್ಮದ್ 91 ನೇ ವಯಸ್ಸಿನಲ್ಲಿ ನಿಧನರಾದರು ಎಂದು ಅಮಿರಿ ದಿವಾನ್ ಉಪ ಮಂತ್ರಿ ಶೇಖ್ ಅಲಿ ಅಲ್ ಜರ್ರಾ ಅಲ್ ಸಬಾ ಇಂದು ಕುವೈತ್ ಟಿವಿಯಲ್ಲಿ ಪ್ರಕಟಿಸಿದ್ದಾರೆ.

ಶೇಖ್ ಸಬಾ 2006 ರಿಂದ ಕುವೈತ್ ಅನ್ನು ಆಳಿದರು ಮತ್ತು 50 ವರ್ಷಕ್ಕಿಂತಲೂ ಹೆಚ್ಚು ಕಾಲ ವಿದೇಶಾಂಗ ನೀತಿಯನ್ನು ನಡೆಸಿದ್ದಾರೆ.

ಜುಲೈ 18 ರಂದು ವೈದ್ಯಕೀಯ ತಪಾಸಣೆಗಾಗಿ ಆಸ್ಪತ್ರೆಗೆ ದಾಖಲಿಸಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಯುನೈಟಡ್ ಸ್ಟೇಟ್ ನಲ್ಲಿ ಚಿಕಿತ್ಸೆ ನಡೆಸಲಾಗಿದೆ. ಇಂದು ಅವರು ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದು ಬಂದಿದೆ.

    Leave Your Comment

    Your email address will not be published.*

    Open chat
    1
    ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...