ಬಾಬರಿ ಮಸೀದಿ ಧ್ವಂಸ ಪ್ರಕರಣದ ಎಲ್ಲಾ 32 ಆರೋಪಿಗಳು ಖುಲಾಸೆ

ಧ್ವಂಸ ಪ್ರಕರಣ ಪೂರ್ವ ನಿಯೋಜಿತ ಕೃತ್ಯವಾಗಿರಲಿಲ್ಲ ಆದೇಶ ನೀಡಿದ ಕೋರ್ಟ್.!

ಲಕ್ನೋ (ವಿಶ್ವ ಕನ್ನಡಿಗ ನ್ಯೂಸ್):1992,ಡಿಸೆಂಬರ್ 6 ರಂದು ಅಯೋಧ್ಯೆಯ ಬಾಬರಿ ಮಸೀದಿಯನ್ನು ಹಾಡು ಹಗಲೇ ಧ್ವಂಸ ಮಾಡಲಾಗಿತ್ತು.ಸಾವಿರಾರು ಕರಸೇವಕರ ದಂಡು ಬಾಬರಿ ಮಸೀದಿಯ ಗುಮ್ಮಟವನ್ನು ಸೇರಿ ಮಸೀದಿಯನ್ನು ಕೆಡವಿ ಹಾಕಿದ್ದರು.ಇದರ ವಿಚಾರಣೆ ನಡೆಸುತ್ತಿದ್ದ ಲಕ್ನೋದ ವಿಶೇಷ ನ್ಯಾಯಾಲಯ ತನ್ನ ಅಂತಿಮ ತೀರ್ಪನ್ನು ನೀಡಿದ್ದು, ಬಿಜೆಪಿಯ ಹಿರಿಯ ನಾಯಕ ಲಾಲ್ ಕೃಷ್ಣ ಅಡ್ವಾಣಿ,ಮುರಳಿ ಮನೋಹರ ಜೋಶಿ,ಉಮಾ ಭಾರತಿ,ಸಾಧ್ವಿ ರಿತುಂಬರಾ,ಕಲ್ಯಾಣ್ ಸಿಂಗ್ ಸೇರಿದಂತೆ ಎಲ್ಲಾ 32 ಆರೋಪಿಗಳನ್ನು ಖುಲಾಸೆ ಮಾಡಿದೆ.

ಸಿಬಿಐ ನ್ಯಾಯಾಧೀಶರಾದ ಎಸ್.ಕೆ ಯಾದವ್ ಸೆಪ್ಟೆಂಬರ್ 16 ರಂದು ಎಲ್ಲಾ 32 ಆರೋಪಿಗಳಿಗೆ ಕೋರ್ಟ್ ಮುಂದೆ ತೀರ್ಪಿನ ದಿನ ಹಾಜರಾಗುವಂತೆ ಆದೇಶಿಸಿತ್ತು.ಧ್ವಂಸಕ್ಕೂ ಮೊದಲು ನಡೆಸಿದ್ದ ರಥ ಯಾತ್ರೆಯ ನೇತೃತ್ವ ವಹಿಸಿದ ಲಾಲ್ ಕೃಷ್ಣ ಅಡ್ವಾಣಿ,ದೇಶದಾದ್ಯಂತ ಸಂಚಲನ ಮೂಡಿಸಿದ್ದರು.

ಈ ಆದೇಶದಿಂದ ನಾವು ಸಂತುಷ್ಟರಾಗಿದ್ದೇವೆ,ಎಲ್ಲವೂ ರಾಮಮಂದಿರದ ನಿರ್ಮಾಣಕ್ಕೆ ಹಾದಿಯಾಗಿತ್ತು.ಜೈಶ್ರೀ ರಾಮ್.ಪ್ರಕರಣದಲ್ಲಿ ನಮ್ಮ ಪರವಾಗಿ ವಾದಿಸಿದ ನ್ಯಾಯವಾದಿಗಳಿಗೆ ಧನ್ಯವಾದಗಳು.
-ಮುರಳಿ ಮನೋಹರ್ ಜೋಷಿ

ಸಂಪಾದಕರು,
ವಿಶ್ವ ಕನ್ನಡಿಗ ನ್ಯೂಸ್

  Leave Your Comment

  Your email address will not be published.*

  ಚಾಟ್ ಮಾಡಿ
  1
  VK News Official Chat
  ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...