ಬೆಳ್ತಂಗಡಿ ತಾಲೂಕು ಸಮಸ್ತ ಸಂಘಟನೆಗಳ ನಿಯೋಗ ದ ಕ ಖಾಝಿ ತ್ವಾಖ ಉಸ್ತಾದರ ಭೇಟಿ

ಬೆಳ್ತಂಗಡಿ(ವಿಶ್ವಕನ್ನಡಿಗ ನ್ಯೂಸ್): ಸಮಸ್ತ ಮೊಹಲ್ಲಗಳ ಧಾರ್ಮಿಕ ಮತ್ತು ಶೈಕ್ಷಣಿಕ ಸಬಲೀಕರಣ ಹಾಗೂ ಮುಸ್ಲಿಂ ಸಮಾಜದ ಪ್ರಸಕ್ತ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಬಗ್ಗೆ ಕಾರ್ಯಯೋಜನೆಯನ್ನು ರೂಪಿಸಲು ಬೇಕಾದ ಸಮೀತಿಗಳನ್ನು ರಚಿಸುವ ಬಗ್ಗೆ ಸಲಹೆಗಳನ್ನು ಪಡೆಯುವ ಸಲುವಾಗಿ ತಾಲೂಕಿನ ಸಮಸ್ತ ಸಂಘಟನೆಗಳ ಪ್ರತಿನಿಧಿಗಳ ನಿಯೋಗ ದ ಕ ಖಾಝಿ ತ್ವಾಖ ಉಸ್ತಾದರನ್ನು ದಾರುನ್ನೂರ್ ಎಜುಕೇಷನ್ ಸೆಂಟರ್ ನಲ್ಲಿ ಭೇಟಿಯಾದರು.

ಉಸ್ತಾದರ ಸಲಹೆಯಂತೆ ಬೆಳ್ತಂಗಡಿ ತಾಲೂಕಿನ ವ್ಯಾಪ್ತಿಯಲ್ಲಿರುವ ಸಮಸ್ತ ಉಲಮಾ ಉಮರಾ ನಾಯಕರ ಸಮಗ್ರವಾದ ಒಂದು ಸಮೀತಿಯನ್ನು ಬಹು ಖಾಝಿಯವರ ನೇತ್ರತ್ವದಲ್ಲಿ ರೂಪಿಕರಿಸಿ ಕೇಂದ್ರದ ನಿರ್ದೇಶ ಪ್ರಕಾರ ಬೇಕಾದ ಸಲಹೆ ಸೂಚನೆಗಳನ್ನು ಪಾಲಿಸಿ ಮುನ್ನಡೆಯಬೇಕೆಂದು ತೀರ್ಮಾನಿಸಲಾಯಿತು.ಆ ಪ್ರಯುಕ್ತ ಅಕ್ಟೋಬರ್ ಒಂಬತ್ತರಂದು ಮಧ್ಯಾಹ್ನ ಮೂರು ಗಂಟೆಗೆ ತಾಲೂಕಿನ ಸಮಸ್ತದ ಮೊಹಲ್ಲಗಳ ಜಮಾಅತ್ ಪ್ರತಿನಿಧಿಗಳು,ಉಲಮಾ ಉಮರಾ ನಾಯಕರುಗಳು,ಸ್ಥಳೀಯ ಖತೀಬರುಗಳು ಮತ್ತು ಸಮಸ್ತ ಉಪ ಸಮೀತಿಗಳ ನಾಯಕರುಗಳ ಸಭೆಯನ್ನು ಕರೆದು ಸಮಾಜದ ಧಾರ್ಮಿಕ ,ಶೈಕ್ಷಣಿಕ ಮತ್ತು ಇತರ ವಿಷಯಗಳ ಬಗ್ಗೆ ಚರ್ಚಿಸಿ ಸಮೀತಿಯನ್ನು ರೂಪಿಕರಿಸಲು ತೀರ್ಮಾನಿಸಲಾಯಿತು.

ಈ ಸಂಧರ್ಭದಲ್ಲಿ ಸುನ್ನೀ ಮಹಲ್ ಫೆಡರೇಷನ್ ಕಾರ್ಯದರ್ಶಿ ಸೆಂಟ್ರಲ್ ಕಮೀಟಿಯ ಮುಹಮ್ಮದ್ ಹನೀಫ್ ಹಾಜಿ,ದಾರುನ್ನೂರಿನ ಕಾರ್ಯದರ್ಶಿ ರಝಾಕ್ ಹಾಜಿ,ಫಕೀರಬ್ಬ ಮಾಸ್ಟರ್, ಮುಖ್ಯ ಶಿಕ್ಷರಾದ ಹುಸೈನ್ ರಹ್ಮಾನಿ,ವ್ಯವಸ್ಥಾಪಕರಾದ ಅಬ್ದುಲ್ ಹಕೀಂ ಉಪಸ್ಥಿತರಿದ್ದರು.ನಿಯೋಗದಲ್ಲಿ ಬೆಳ್ತಂಗಡಿ ಉಲಮಾ ಒಕ್ಕೂಟದ ಅಧ್ಯಕ್ಷರಾದ ಮೂಸಾ ದಾರಿಮಿ ಕಕ್ಕಿಂಜೆ,ಎಸ್ ಕೆ ಎಸ್ ಎಸ್ ಎಫ್ ಬೆಳ್ತಂಗಡಿ ವಲಯ ಅಧ್ಯಕ್ಷರಾದ ನಝೀರ್ ಅಝ್ಹರಿ,ಕಾರ್ಯದರ್ಶಿ ರಿಯಾಝ್ ಫೈಝಿ,ಕೋಶಾಧಿಕಾರಿ ಹಕೀಂ ಬಂಗೇರುಕಟ್ಟೆ,ಬೆಳ್ತಂಗಡಿ ರೇಂಜ್ ಕಾರ್ಯದರ್ಶಿ ಶಂಸುಧ್ಧೀನ್ ದಾರಿಮಿ, ಬೆಳ್ತಂಗಡಿ ದಾರುಸ್ಸಲಾಂ ಕಾರ್ಯದರ್ಶಿ ಅಬ್ದುರಝಾಕ್ ಕನ್ನಡಿಕಟ್ಟೆ, ಎಸ್ ಕೆ ಎಸ್ ಎಸ್ ಎಫ್ ಜಿಲ್ಲಾ ಕೋಶಾಧಿಕಾರಿ ಹನೀಫ್ ದೂಮಳಿಕೆ,ಬಂಗೇರುಕಟ್ಟೆ ಖತೀಬರಾದ ಜಾಬಿರ್ ಫೈಝಿ ಬನಾರಿ, ಸಿದ್ದೀಖ್ ಬ್ರೈಟ್,ರಫೀಖ್ ಚಾರ್ಮಾಡಿ ಮುಂತಾದವರು ಹಾಜರಿದ್ದರು.

    Leave Your Comment

    Your email address will not be published.*

    Open chat
    1
    ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...