ವಿಟ್ಲ ಪಟ್ಟಣ ಪಂಚಾಯತ್ ತ್ಯಾಜ್ಯ ನಿರ್ವಹಣೆಯ ಆವ್ಯವಸ್ಥೆಯ ಬಗ್ಗೆ ಮನವಿ ಸಲ್ಲಿಸಿದ ವೆಲ್ಫೇರ್ ಪಾರ್ಟಿ ಆಫ್ಇಂಡಿಯಾ ವಿಟ್ಲ


ವಿಟ್ಲ.ಅಕ್ಟೋಬರ್, 2(ವಿಶ್ವ ಕನ್ನಡಿಗ ನ್ಯೂಸ್): ವಿಟ್ಲ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಒಕ್ಕೆತ್ತೂರು ಒಳ ರಸ್ತೆಯಲ್ಲಿರುವ,ಒಕ್ಕೆತ್ತೂರು ಮತ್ತು ಸುರುಂಬಡ್ಕ ಆಸುಪಾಸಿನ ಪ್ರದೇಶಗಳಿಗೆ ತ್ಯಾಜ್ಯ ಸಂಗ್ರಹಿಸುವ ವಾಹನವು ಹೋಗದೆ ಪರಿಸರದಲ್ಲಿ ದುರ್ನಾತ ಹಬ್ಬುತ್ತಿದ್ದು, ಅಲ್ಲಿನ ನಿವಾಸಿಗಳ ಸಮಸ್ಯೆಗಳನ್ನು ಅರಿತುಕೊಂಡ, ವೆಲ್ಫೇರ್ ಪಾರ್ಟಿ ಆಫ್ಇಂಡಿಯಾ ವಿಟ್ಲ ಪಟ್ಟಣ ಪಂಚಾಯತ್ ಘಟಕವು,ಘಟಕದ ಅಧ್ಯಕ್ಷರಾದ ಎಮ್. ಎ. ರಹಿಮಾನ್ ಕಲ್ಲ0ಗಳ ಮತ್ತು ಕಾರ್ಯದರ್ಶಿ ಅಬ್ದುಲ್ಲ ಕುಂಞಿ ಉದ್ಯಮಿ ವಿಟ್ಲ ರವರುಗಳು ವಿಟ್ಲ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿಯಾದ ಶ್ರೀಮತಿ ಮಾಲಿನಿಯವರಲ್ಲಿ ಮನವಿಯನ್ನು ನೀಡಿದ್ದು, ಮಾನ್ಯ ಮುಖ್ಯಾಧಿಕಾರಿಯವರು ಅದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ್ದು ಸಮಸ್ಯೆಯ ಪರಿಹಾರಕ್ಕೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿರುವುದಾಗಿ ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುವರು.

ಸಂಪಾದಕರು,
ವಿಶ್ವ ಕನ್ನಡಿಗ ನ್ಯೂಸ್

  Leave Your Comment

  Your email address will not be published.*

  ಚಾಟ್ ಮಾಡಿ
  1
  VK News Official Chat
  ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...