ಹತ್ರಾಸ್ ಅತ್ಯಾಚಾರ ಪ್ರಕರಣ:ವಿರೋಧ ಪಕ್ಷದ ನಾಯಕರ ಮೇಲೆ ಮುಂದುವರಿದ ಯುಪಿ ಪೋಲೀಸ್ ದೌರ್ಜನ್ಯ


ಉಪ್ರ(ವಿಶ್ವ ಕನ್ನಡಿಗ ನ್ಯೂಸ್): ಹತ್ರಾಸ್ ನಲ್ಲಿ ಮನೀಷ ಎಂಬ ಯುವತಿಯ ಮೇಲೆ ನಡೆದ ಅತ್ಯಾಚಾರ ಹಾಗು ಭೀಕರ ಕೊಲೆಯ ಬಳಿಕ ವಿರೋಧ ಪಕ್ಷಗಳಿಂದ ಪ್ರತಿಭಟನೆ ಮುಂದುವರೆದಿದೆ.ನಿನ್ನೆ ಸಂತ್ರಸ್ತೆ ಕುಟುಂಬಕ್ಕೆ ಸಂತಾಪ ಸೂಚಿಸಲು ಹೊರಟಿದ್ದ ರಾಹುಲ್ ಗಾಂಧಿ ಹಾಗು ಪ್ರಿಯಾಂಕರನ್ನು ಬಲವಂತವಾಗಿ ತಡೆದು ನಿಲ್ಲಿಸಿದ ಯುಪಿ ಪೋಲೀಸರು ಅವರ ಮೇಲೆ ಎಫ್.ಐ.ಆರ್ ಕೂಡ ದಾಖಲಿಸಿದ್ದರು.ಇಂದು ಕೂಡ ಮಾಧ್ಯಮಗಳನ್ನು ನಿರ್ಬಂಧಿಸಿದ್ದಲ್ಲದೆ,ತೃಣಮೂಲ ಕಾಂಗ್ರೆಸ್ ನ ಹಿರಿಯ ನಾಯಕರೂ ಸಂಸದರೂ ಆದ ಡೆರೆಕ್ ಓಬ್ರಿಯಾನ್ ಹಾಗು ಸಂಸದೆ ಪ್ರತಿಮಾ ಮಂಡೆಲ್ ರನ್ನೂ ಇಂದು ಬಲವಂತವಾಗಿ ತಳ್ಳಿಹಾಕಿ ಹತ್ತಿಕ್ಕುವ ಮೂಲಕ ತಮ್ಮ ದೌರ್ಜನ್ಯ ಮುಂದುವರೆಸಿದ್ದಾರೆ.ಈ ಮೂಲಕ ವಿರೋಧ ಪಕ್ಷಗಳ ಬಾಯಿ ಮುಚ್ಚಿಸುವಲ್ಲಿಯೂ ಯೋಗಿ ಸರಕಾರ ತೊಡಗಿಕೊಂಡಿದೆ.ಮಮತಾ ಬ್ಯಾನರ್ಜಿ ಘಟನೆಯನ್ನು ತೀಕ್ಷ್ಣವಾಗಿ ಪ್ರಶ್ನಿಸಿ ಟ್ವೀಟ್ ಮಾಡಿದ್ದಾರೆ.

ಸಂಪಾದಕರು,
ವಿಶ್ವ ಕನ್ನಡಿಗ ನ್ಯೂಸ್

  Leave Your Comment

  Your email address will not be published.*

  ಚಾಟ್ ಮಾಡಿ
  1
  VK News Official Chat
  ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...