RENAISSANCE-20 ಅಂತಾರಾಷ್ಟ್ರೀಯ ಸಂಗಮದಲ್ಲಿ ತಾಜುಲ್ ಫುಖಹಾಅ್ ಅನುಸ್ಮರಣೆ

ತಲಕ್ಕಿ(ವಿಶ್ವಕನ್ನಡಿಗ ನ್ಯೂಸ್): ತಾಜುಲ್ ಉಲಮಾ ಇಸ್ಲಾಮಿಕ್ ಕಾಂಪ್ಲೆಕ್ಸ್, ತಲಕ್ಕಿ ಇದರ ಅಧೀನದಲ್ಲಿ, ದಿನಾಂಕ 2-10-2020 ರಂದು ರಾತ್ರಿ 9.30 ಗಂಟೆಗೆ ಇತ್ತೀಚೆಗೆ ನಮ್ಮನ್ನಗಲಿದ ನಾಯಕ ಶ್ಯೆಖುನ ತಾಜುಲ್ ಫುಖಹಾಅ್ ಬೇಕಲ್ ಉಸ್ತಾದ್ ರವರ ಅನುಸ್ಮರಣೆ ಹಾಗೂ RENAISSANCE-20 ಆಧ್ಯಾತ್ಮಿಕ ಮಜ್ಲಿಸ್ ಝೂಮ್ ಆನ್ಲೈನ್ ನಲ್ಲಿ ಬಹು ಅಸ್ಸಯ್ಯಿದ್ ಅಹ್ಮದ್ ಶಿಹಾಬುದ್ಧೀನ್ ಅಲ್‌ ಮಶ್ಹೂರ್ ತಂಙಲ್ ತಲಕ್ಕಿ ಅಧ್ಯಕ್ಷತೆಯಲ್ಲಿ ನಡೆಯಿತು. ಕಾರ್ಯಕ್ರಮವು ಬಹು ಇಬ್ರಾಹಿಮ್ ಸಖಾಫಿ ಕೆದುಂಬಾಡಿಯವರ ದುವಾದೋಂದಿಗೆ ಆರಂಭವಾಯಿತು.

ಬಹು ಸಿದ್ದೀಕ್ ಮದನಿ ಮೆದು, (ಮ್ಯಾನೇಜರ್, ತಾಜುಲ್ ಉಲಮಾ ಇಸ್ಲಾಮಿಕ್ ಕಾಂಪ್ಲೆಕ್ಸ್, ತಲಕ್ಕಿ) ಸ್ವಾಗತಿಸಿ‌ ಸಂಸ್ಥೆಯ ಕಾರ್ಯ ವೈಖರಿಗಳನ್ನು ವಿವರಿಸಿದರು. ಕೆ.ಸಿ.ಎಫ್ ಅಂತಾರಾಷ್ಟ್ರೀಯ ಸಮಿತಿಯ ಅಧ್ಯಕ್ಷರಾದ ಡಾ. ಶೇಖ್ ಬಾವ ಹಾಜಿರವರು ಕಾರ್ಯಕ್ರಮವನ್ನು ಉಧ್ಗಾಟಿಸಿದರು. ಅಬ್ದುಲ್ ಹಮೀದ್ ಸಅದಿ ಈಶ್ವರಮಂಗಳ (ಕೋಶಾಧಿಕಾರಿ, ಕೆ.ಸಿ.ಎಫ್ ಅಂತರಾಷ್ಟ್ರೀಯ ಸಮಿತಿ) ಪ್ರಾಸ್ತಾವಿಕ ಭಾಷಣ ಮಾಡಿದರು.ನಂತರ ಕೆ.ಸಿ.ಎಫ್ ಅಂತರಾಷ್ಟ್ರೀಯ ಸಮಿತಿ ಪ್ರದಾನ ಕಾರ್ಯದರ್ಶಿ ಕಮರುದ್ದೀನ್‌ ಗೂಡಿನಬಳಿರವರು ಭಾಷಣ ಮಾಡಿದರು.

ತಾಜುಲ್ ಉಲಮಾ ಇಸ್ಲಾಮಿಕ್ ಕಾಂಪ್ಲೆಕ್ಸ್ ಇದರ ಶಿಲ್ಪಿಯಾದ ಅಸ್ಸಯ್ಯಿದ್ ಅಹ್ಮದ್ ಶಿಹಾಬುದ್ಧೀನ್ ಅಲ್‌ ಮಶ್ಹೂರ್ ತಂಙಲ್ ರವರು ಸಮಾರಂಭದಲ್ಲಿ ದುವಾ ಆಶೀರ್ವದಿಸಿದರು.ಕೆ.ಸಿ.ಎಫ್ ನಾಯಕರಾದಂತಹ ಅಬ್ದುಲ್ ಜಲೀಲ್ ನಿಝಾಮಿ, ಜನಾಬ್ ಅಯ್ಯುಬ್ ಕೋಡಿ, ಜನಾಬ್ ಜಮಾಲುದ್ದೀನ್ ವಿಟ್ಲ,ರಹೀಂ ಸಅದಿ ಕತ್ತರ್, ಅಬ್ದುಲ್ ರಹ್ಮಾನ್ ಸಖಾಫಿ,ಇಕ್ಬಾಲ್ ಒಮಾನ್, ಯುಸುಫ್ ಸಖಾಫಿ, ಡಿ.ಪಿ ಯುಸುಫ್ ಸಖಾಫಿ ಬೈತಾರ್, ಅಬ್ದುಲ್ ಅಝೀಝ್ ಸಖಾಫಿ ಮಲೆಶೀಯ, ಸದಖತ್ತುಲ್ಲಾ,ಅಬ್ದುಲ್ ಖಾದರ್ ಸುನ್ನಂಗಳ ಕತಾರ್, ಅಬುಬಕ್ಕರ್ ಹಾಜಿ ರೈಸ್ಕೊ, .
ಸೌದಿ ಅರೆಬಿಯಾರವರು ಆಶಂಸ ಭಾಷಣ ಮಾಡಿದರು. ಕಾರ್ಯಕ್ರಮದಲ್ಲಿ ಇಬ್ರಾಹಿಂ ಹಾಜಿ ಬ್ರೈಟ್, ಮಹಮ್ಮದ್ ಶರೀಫ್ ಸಾಲೆತ್ತೂರು,ಅಸೈನಾರ್ ಅಮಾನಿ,ಸಿದ್ದೀಕ್ ಅಮಾನಿ ಹಾಗೂ ಹಲವು ಗಣ್ಯ ವ್ಯಕ್ತಿಗಳು ಭಾಗವಹಿಸಿದರು.
ಮುಹಮ್ಮದ್ ಕಲ್ಲರ್ಬೆರವರು
ಕಾರ್ಯಕ್ರಮವನ್ನು ನಿರೂಪಿಸಿ ಕೊನೆಯಲ್ಲಿ ಧನ್ಯವಾದ ಹೇಳಿದರು.

  Leave Your Comment

  Your email address will not be published.*

  ಚಾಟ್ ಮಾಡಿ
  1
  VK News Official Chat
  ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...