ಬಂಟ್ವಾಳ(ವಿಶ್ವಕನ್ನಡಿಗ ನ್ಯೂಸ್): ಮುಂಬರುವ ಪಂಚಾಯತ್ ಚುನಾವಣೆಯ ಬಡಗಕಜೆಕಾರು ಗ್ರಾಮದ ಪಕ್ಷದ ಅಭ್ಯರ್ಥಿಗಳ ಘೋಷಣಾ ಕಾರ್ಯಕ್ರಮ ಇಂದು ಪಾಂಡವರಕಲ್ಲುವಿನ ಸಮುದಾಯ ಭವನದಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್ ಡಿ ಪಿ ಐ ಕಾವಳ ಪಡೂರು – ಮೂಡೂರು ವಲಯಾಧ್ಯಕ್ಷರಾದ ಅಬೂಬಕ್ಕರ್ ಮದ್ದ ವಹಿಸಿದ್ದರು.ಎಸ್ ಡಿ ಪಿ ಐ ಬಂಟ್ವಾಳ ವಿಧಾನಸಭಾ ಕ್ಷೇತ್ರ ಅಧ್ಯಕ್ಷರಾದ ಯೂಸುಫ್ ಆಲಡ್ಕರವರು ಪ್ರಾಸ್ತಾವಿಕವಾಗಿ ಮಾತನಾಡಿ ಅಭ್ಯರ್ಥಿ ಘೋಷಣೆ ಮಾಡಿದರು. ಎಸ್ ಡಿ ಪಿ ಐ ಕರ್ನಾಟಕ ರಾಜ್ಯ ಸಮಿತಿ ಸದಸ್ಯರಾದ ರಿಯಾಝ್ ಫ್ರರಂಗಿಪೇಟೆ ಸಂದೇಶ ಭಾಷಣಮಾಡಿದರು.
ಜಮಾಅತ್ ನ ಮಾಜಿ ಮುಖಂಡರೂ, ಸಾಮಾಜಿಕ ಕಾರ್ಯಕರ್ತರಾದ ಉಮರ್ ಕೆ ಪಿ ಮುಸ್ಲಿಯಾರ್ ಪಕ್ಷದ ಸಿದ್ಧಾಂತ ಮತ್ತು ತತ್ವವನ್ನು ಒಪ್ಪಿಕೊಂಡು ಪಕ್ಷಕ್ಕೆ ಸೇರ್ಪಡೆಗೊಂಡು ಒಂದೆರಡು ಹಿತವನ್ನು ನುಡಿದರು.
ಪ್ರಥಮ ಹಂತದಲ್ಲಿ ಎರಡು ವಾರ್ಡ್ ಗಳಲ್ಲಿ ಸ್ಪರ್ಧಿಸುವುದಾಗಿ ತೀರ್ಮಾನಿಸಲಾಗಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ
ಅಭ್ಯರ್ಥಿ ಪಟ್ಟಿ ಪ್ರಕಟ:
86 ವಾರ್ಡ್(2 ಅಭ್ಯರ್ಥಿ) – ಅಥಾವುಲ್ಲಾ ಕೆದಿಲೆ
ಸಮೀರಾ w/o ಹನೀಫ್ ಕೊಮಿನಡ್ಕ
87 ವಾರ್ಡ್ -(1 ಅಭ್ಯರ್ಥಿ)ನಸೀಮಾ w/o ಹಂಝ ಪಾಂಡವರಕಲ್ಲು
ಕಾರ್ಯಕ್ರಮದಲ್ಲಿ ಎಸ್ ಡಿ ಪಿ ಐ ಬಡಗಕಜೆಕಾರು ಗ್ರಾಮ ಸಮಿತಿ ಉಪಾಧ್ಯಕ್ಷ ಉಸ್ಮಾನ್ ಕೆಪಿ,ಕಾರ್ಯದರ್ಶಿ ಹನೀಫ್ ಕೊಮಿನಡ್ಕ ಉಪಸ್ಥಿತರಿದ್ದರು.
ಎಸ್ ಡಿ ಪಿ ಐ ಬಡಗಕಜೆಕಾರು ಗ್ರಾಮ ಸಮಿತಿ ಅಧ್ಯಕ್ಷರಾದ ಅಥಾವುಲ್ಲಾ ಕೆದಿಲೆ ಸ್ವಾಗತಿಸಿ ಇಮ್ರಾನ್ ಪಾಂಡವರಕಲ್ಲು ನಿರೂಪಿಸಿ, ಧನ್ಯವಾದಗೈದರು.