ಮಕ್ಕಿಮನೆ ಕಲಾವೃಂದ ಮಂಗಳೂರು ವತಿಯಿಂದ ಆನ್ಲೈನ್ ದಸರಾ ಮಹೋತ್ಸವ -2020: ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ

ಮಂಗಳೂರು(ವಿಶ್ವಕನ್ನಡಿಗ ನ್ಯೂಸ್): ಕಳೆದ ಅನೇಕ ವರ್ಷಗಳಿಂದ ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಕ್ಷೇತ್ರದಲ್ಲಿ ತನ್ನದೇ ರೀತಿಯಲ್ಲಿ ಗುರುತಿಸಿಕೊಂಡ ಸುದೇಶ್ ಜೈನ್ ಮಕ್ಕಿಮನೆ ನೇತೃತ್ವದ ಮಕ್ಕಿಮನೆ ಕಲಾವೃಂದ ಮಂಗಳೂರು ವತಿಯಿಂದ ಈಬಾರಿ ವಿಶಿಷ್ಟ ರೀತಿಯಲ್ಲಿ ಅನ್ ಲೈನ್ ಮೂಲಕ ( ಮಕ್ಕಿಮನೆ ಕಲಾವೃಂದ ಮಂಗಳೂರು ಫೇಸ್‌ಬುಕ್ ಪೇಜ್ ನಲ್ಲಿ ಲೈವ್) ಅಕ್ಟೋಬರ್ 17 ನೇ ಶನಿವಾರ ದಿಂದ 26 ನೇ ಸೋಮವಾರದ ತನಕ ಹತ್ತು ದಿನಗಳ ಕಾಲ
( ಪ್ರತಿದಿನ ಮೂರು ಬಾರಿ) ವಿವಿಧ ತಂಡಗಳಿಂದ ಬೇರೆ ಬೇರೆ ಪ್ರದೇಶಗಳಲ್ಲಿ ನಡೆಯುವ ಭಜನೋತ್ಸವ – ಸಾಂಸ್ಕೃತಿಕ ಉತ್ಸವ – ಯುವ ಪ್ರತಿಭೆ ಗಳಿಂದ ಉಪನ್ಯಾಸ ಮಾಲಿಕೆ (ಯುವ ದಸರಾ) ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಯನ್ನು
ದ. ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಕಲ್ಕೂರ ಪ್ರತಿಷ್ಠಾನ ಮಂಗಳೂರು ವತಿಯಿಂದ ಶನಿವಾರ ನಡೆದಕೋಟ ಶಿವರಾಮ ಕಾರಂತರ 118 ನೇ ಜನ್ಮ ದಿನಾಚರಣೆಯ ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು.

ಈ ಸಂದರ್ಭದಲ್ಲಿ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಎಸ್. ಪ್ರದೀಪ ಕುಮಾರ ಕಲ್ಕೂರ, ಹರಿಕೃಷ್ಣ ಪುನರೂರು, ಪಿ. ಎಸ್ ಎಡಪಡಿತ್ತಾಯ , ಪಡಾರು ಮಹಾಬಲೇಶ್ವರ ಭಟ್, ಸುದೇಶ್ ಜೈನ್ ಮಕ್ಕಿಮನೆ, ರವೀಂದ್ರ ಕುಕ್ಕಾಜೆ, ವಿಜಯಲಕ್ಷ್ಮಿ ಶೆಟ್ಟಿ, ಪೊಳಲಿ ನಿತ್ಯಾನಂದ ಕಾರಂತ, ಜಿ. ಕೆ ಭಟ್ ಸೇರಾಜೆ, ಪೂರ್ಣಿಮಾ ರಾವ್ ಪೇಜಾವರ, ಮೀನಾಕ್ಷಿ ರಾಮಚಂದ್ರ , ಸುಧಾಕರ ರಾವ್ ಪೇಜಾವರ, ಜಯಾನಂದ ಕುಮಾರ ಹೊಸದುರ್ಗ, ಅಕ್ಷತಾ ಪೂಜಾರಿ ಬೋಳ , ಉಷಾ ಅಶೋಕ್ ಮೊದಲಾದವರು ಉಪಸ್ಥಿತರಿದ್ದರು.

ಕೀರ್ತಿ ದರ್ಬೆ ಪುತ್ತೂರು

  Leave Your Comment

  Your email address will not be published.*

  ಚಾಟ್ ಮಾಡಿ
  1
  VK News Official Chat
  ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...