ಕೃಷಿಕ್ಷೇತ್ರ ನಾಶಮಾಡಲು ಬಿಜೆಪಿ ಸಂಚು: ಜಾಗೊ ಕಿಸಾನ್ ಎಸ್‌.ಡಿ.ಪಿ.ಐ ಜಿಲ್ಲಾ ಸೈಕಲ್ ಪ್ರವಾಸ ಪ್ರಾರಂಭ

ಮಂಜೇಶ್ವರಂ(ವಿಶ್ವಕನ್ನಡಿಗ ನ್ಯೂಸ್): ದೇಶದ ಫೆಡರಲ್ ವ್ಯವಸ್ಥೆಯನ್ನು ಉರುಳಿಸುವ ಮೂಲಕ ರೈತರ ಬದುಕನ್ನು ದುಸ್ತರಗೊಳಿಸುವ ಹೊಸ ಕಾನೂನನ್ನು ಮೋದಿ ಮತ್ತು ಬಿಜೆಪಿ ರೂಪಿಸಿವೆ ಎಂದು ಎಸ್.‌ಡಿ.ಪಿ.ಐ ಜಿಲ್ಲಾಧ್ಯಕ್ಷ ಎನ್‌.ಯು ಅಬ್ದುಲ್ ಸಲಾಮ್ ಹೇಳಿದ್ದಾರೆ.

ಜಾಗತಿಕ ಸಾಮ್ರಾಜ್ಯಶಾಹಿ ಶಕ್ತಿಗಳನ್ನು ಸಂರಕ್ಷಿಸಲಿರುವ ನೂತನ ತಂತ್ರವಾಗಿದೆ ಈ ಕಾನೂನು; ಲಕ್ಷಾಂತರ ರೈತರು ಆತ್ಮಹತ್ಯೆಗೆ ಶರಣಾಗುತ್ತಿರುವ ಧೇಶದಲ್ಲಿ, ರೈತರ ಸಂರಕ್ಷಣೆಗಾಗಿರುವ ಯಾವೊಂದು ಕ್ರಮಗಳನ್ನೂ ಕೇಂದ್ರ ಸರಕಾರ ನಡೆಸುತ್ತಿಲ್ಲ. ಕೃಷಿ ಕ್ಷೇತ್ರ ನಾಶಮಾಡುವ ಬಿಜೆಪಿಯ ಸಂಚಿನ ವಿರುದ್ಧ ಅಕ್ಟೋಬರ್ 1 ರಿಂದ 31 ರವರೆಗೆ ಜಾಗೊ ಕಿಸಾನ್ ಎಸ್‌ಡಿಪಿಐ ರಾಷ್ಟ್ರೀಯ ಅಭಿಯಾನದ ಅಂಗವಾಗಿ ಕಾಸರ್‌ಗೋಡು ಜಿಲ್ಲಾ ಸಮಿತಿ ಆಯೋಜಿಸಿದ್ದ ಜಿಲ್ಲಾ ಸೈಕಲ್ ಪ್ರವಾಸದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಸಾಮಾಜಿಕ ಕಾರ್ಯಕರ್ತ ಮತ್ತು ರೈತ ಮಿಲ್ಕಿವೇಗಸ್ ಅಂಬಿತಾಡಿ ಸೈಕಲ್ ಪ್ರವಾಸಕ್ಕೆ ಚಾಲನೆ ನೀಡಿದರು.
ನಾಡಿನ ಹೆಮ್ಮೆಯ ಕೃಷಿಕರಾದ ಮಿಲ್ಕಿವೇಗಸ್, ದಿನೇಶ್ ಅಂಬಿತ್ತಡಿ, ಮಂಜಪ್ಪ ಶೆಟ್ಟಿ, ರಾಯಲ್ ವೇಗಸ್, ರಾಜೇಶ್ ವೇಗಸ್, ರೇವತಿ ಮುಂತಾದವರನ್ನು ಈ ವೇಳೆಯಲ್ಲಿ ಸನ್ಮಾನಿಸಲಾಯಿತು.

ಜಿಲ್ಲಾ ಉಪಾಧ್ಯಕ್ಷ ಇಕ್ಬಾಲ್ ಹೊಸಂಗಡಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಖಾದರ್ ಅರಪಾ, ಜಿಲ್ಲಾ ಕೋಶಾಧಿಕಾರಿ ಸಿದ್ದೀಖ್ ಪೆರ್ಲ, ಜಿಲ್ಲಾ ಕಾರ್ಯದರ್ಶಿಗಳಾದ ಸವಾದ್ ಸಿ.ಎ, ಅಬ್ದುಲ್ಲ ಎರಿಯಾಲ್, ಜಿಲ್ಲಾ ಸಮಿತಿ ಸದಸ್ಯ ಅಹ್ಮದ್ ಚೌಕಿ ಮಂಜೇಶ್ವರಂ ಮಂಢಲಾಧ್ಯಕ್ಷ ಅನ್ಸಾರ್ ಹೊಸಂಗಡಿ ಮತ್ತು ಕಾರ್ಯದರ್ಶಿ ಮುಬಾರಕ್ ಕಡಂಬಾರ್ ಮಾತನಾಡಿದರು.

ಜಿಲ್ಲಾಧ್ಯಕ್ಷರಾದ ಎನ್.ಯು ಅಬ್ದುಲ್ ಸಲಾಂ ನೇತೃತ್ವದಲ್ಲಿ ಜಿಲ್ಲಾಧ್ಯಂತ ಪರ್ಯಟನೆ ನಡೆಸಲಿರುವ ಸೈಕಲ್ ಪ್ರವಾಸವು, ಆದಿತ್ಯವಾರ ತೃಕ್ಕರಿಪುರದಲ್ಲಿ ಸಮಾಪ್ತಿಯಾಗಲಿದೆ.

    Leave Your Comment

    Your email address will not be published.*

    Open chat
    1
    ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...