ಲಜ್ನತ್ ನುಸ್ರತುಲ್ ಮುಸ್ಲಿಮೀನ್ ನೂತನ ಶಿಷ್ಯಂದಿರ ಸಮಿತಿ ಅಸ್ತಿತ್ವಕ್ಕೆ

ಸೌದೀ ಅರೇಬಿಯಾ(ವಿಶ್ವ ಕನ್ನಡಿಗ ನ್ಯೂಸ್): ಆನೆಕಲ್ಲು ಹನೀಫ್ ಸಖಾಫಿ ಉಸ್ತಾದರ ಶಿಷ್ಯಂದಿರ ನೂತನ ಸಮಿತಿ ಹಾಗೂ ತಾಜುಲ್ ಫುಖಾಅಹ್ ಬೇಕಲ್ ಉಸ್ತಾದರ ಅನುಸ್ಮರಣೆ ಸಂಗಮ ಅ.8ರಂದು Zoom ಆನ್ಲೈನ್ ಮೂಲಕ ಹನೀಫ್ ಸಖಾಫಿ ಉಸ್ತಾದರ ಅಧ್ಯಕ್ಷತೆಯಲ್ಲಿ ಜರಗಿತು.

ಆನೆಕಲ್ಲು ಹನೀಫ್ ಸಖಾಫಿ

ಶೈಖುನಾ ಉಸ್ತಾದರು ಮುಟ್ಟಂ, ಬಾಂಬಿಲ, ದೇಲಾಂಪಾಡಿ, ಆವಳ, ಪೇರೂರ್, ಮಾಂಙಾಡ್ ಎಂಬಿ ಸ್ಥಳಗಳಲ್ಲಿ ದರ್ಸ್ ರಂಗದಿಂದ ಹಲವಾರು ಶಿಷ್ಯಂದಿರನ್ನು ಸಮಾಜಕ್ಕೆ ಅರ್ಪಿಸಿದರು. ಇದೀಗ ಶಿಷ್ಯಂದಿರು ದೀನಿ ರಂಗದಲ್ಲಿ ಹಾಗೂ ಕೆಲಸ ನಿಮಿತ್ತ ಗಲ್ಫ್ ರಾಷ್ಟ್ರಗಳಲ್ಲಿ ಸುನ್ನತ್ ಜಮಾಅತಿನ ಸಂಘಟನೆಗಳಲ್ಲಿ ಗುರುತಿಸಿಕೊಂಡು ಕಾರ್ಯಚರಿಸುತ್ತಿದ್ದಾರೆ.

ಕಾರ್ಯಕ್ರಮವನ್ನು ಬಿ.ಎಸ್ ಅಬ್ದುಲ್ ಕರೀಂ ಲತ್ವೀಫಿ ಸೋಕಿಲ (ದಮ್ಮಾಮ್) ಉದ್ಘಾಟನೆ ಮಾಡಿದರು. ನೂತನ ಸಮಿತಿಗೆ ‘ಲಜ್ನತ್ ನುಸ್ರತುಲ್ ಮುಸ್ಲಿಮೀನ್’ (LNM) ಎಂದು ಉಸ್ತಾದರು ಹೆಸರನ್ನು ಘೋಷಿಸಿ ನೂತನ ಸಮಿತಿಗೆ ಚಾಲನೆ ನೀಡಿದರು. ಈ ಸಂದರ್ಭ ಇತ್ತೀಚಿಗೆ ನಮ್ಮನ್ನಗಲಿದ ಶೈಖುನಾ ತಾಜುಲ್ ಫುಖಾಅಹ್ ಬೇಕಲ್ ಉಸ್ತಾದ್ ರವರ ಹೆಸರಿನಲ್ಲಿ ತಹ್ಲೀಲ್ ಹೇಳಿ ಪ್ರಾರ್ಥನೆ ಮಜ್ಲಿಸ್ ನಡೆಸಲಾಯಿತು.

2020- 21ನೇ ವರ್ಷದ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ನಿರ್ದೇಶಕರಾಗಿ ಶೈಖುನಾ ಹನೀಫ್ ಸಖಾಫಿ ಉಸ್ತಾದ್ ಆನೆಕಲ್ಲು,
ಅಧ್ಯಕ್ಷರಾಗಿ ಆರ್.ಕೆ ಅಬ್ದುಲ್ ಹಮೀದ್ ಮುಸ್ಲಿಯಾರ್ ರಂತಡ್ಕ,
ಪ್ರಧಾನ ಕಾರ್ಯದರ್ಶಿಯಾಗಿ ಕಮರುದ್ದೀನ್ ಮುಸ್ಲಿಯಾರ್ ಆನೆಕಲ್ಲು, ಕೋಶಾಧಿಕಾರಿಯಾಗಿ ಆರ್.ಕೆ ಅಬ್ದುಲ್ ರಝ್ಝಾಖ್ ಮುಸ್ಲಿಯಾರ್ ರಂತಡ್ಕ, ಉಪಾಧ್ಯಕ್ಷರುಗಳಾಗಿ ಉಮರುಲ್ ಫಾರೂಖ್ ಲತ್ವೀಫಿ ಸೋಕಿಲ, ಅಹ್ಮದ್ ಕಬೀರ್ ಸಅದಿ ಅಡ್ಯಾರ್ ಕಣ್ಣೂರು, ಜೊತೆ ಕಾರ್ಯದರ್ಶಿಗಳಾಗಿ ಅಶ್ರಫ್ ಲತ್ವೀಫಿ ನಿರ್ಕಾಜೆ, ಅಬ್ದುಲ್ ಹಮೀದ್ ಮುಸ್ಲಿಯಾರ್ ಜಿ.ನಗರ, ಸಂಘಟನೆ ಕಾರ್ಯದರ್ಶಿಯಾಗಿ ಅಬ್ದುಲ್ ಕರೀಂ ಲತ್ವೀಫಿ ಸೋಕಿಲ, ಸಂಚಾಲಕರಾಗಿ ಮುಹಮ್ಮದ್ ಶರೀಫ್ ಹನೀಫಿ ಮುಡಿಪು, ನಾಸಿರ್ ಮದನಿ ಉರ್ನಿ, ಸಲಹೆಗಾರರಾಗಿ ಅಶ್ರಫ್ ಮದನಿ ಆನೆಕಲ್ಲು, ಶಾಫಿ ಮುಸ್ಲಿಯಾರ್ ಉರುಮಣೆ. ಸ್ವಲಾತ್ ಕೋಡಿನೆಟರಾಗಿ ಮೂಸ ಲತ್ವೀಫಿ ಆನೆಕಲ್ಲು, ಹನೀಫ್ ಮುಸ್ಲಿಯಾರ್ ಮಜಿರ್ಪಳ್ಳ, ಲೆಕ್ಕ ಪರಿಶೋಧಕರಾಗಿ ದಾವುದ್ ಅಶ್ರಫಿ ನಿರ್ಕಾಜೆ ರವರನ್ನು ಆಯ್ಕೆ ಮಾಡಲಾಯಿತು.

ವರ್ಕಿಂಗ್ ಸದಸ್ಯರಾಗಿ ಉಸ್ಮಾನ್ ಮುಸ್ಲಿಯಾರ್ ಕುಂಡದಬೆಟ್ಟು, ಅಬ್ಬಾಸ್ ಮುಸ್ಲಿಯಾರ್ ಕೊಲ್ಯ, ರಶೀದ್ ಅಮಾನಿ, ಬಶೀರ್ ಮುಸ್ಲಿಯಾರ್ ಮೂರುಗೋಳಿ, ರಝಾಕ್ ಅಶ್ರಫಿ ನೆಲ್ಲಿಪಲಿಕೆ, ಅಬ್ದುಲ್ ರಹ್ಮಾನ್ ಮುಸ್ಲಿಯಾರ್ ನೈನಾಡ್, ಸ್ವಾದಿಕ್ ಮುಸ್ಲಿಯಾರ್ ಬಾಂಬಿಲ ಸ್ವಾದಿಕ್ ಮುಸ್ಲಿಯಾರ್ ಆನೆಕಲ್ಲು, ಅಬ್ಬಾಸ್ ಮುಸ್ಲಿಯಾರ್ ಕುಳವೈಳ್ ಆಯ್ಕೆ ಮಾಡಲಾಯಿತು.

ಸದಸ್ಯರುಗಳಾಗಿ ಅಬ್ದುಲ್ ಶಹೀದ್ ಅಝ್ಹರಿ ಬಳ್ಳೂರು, ಸಿದ್ದೀಖ್ ಅಹ್ಸನಿ ಉರುಮನೆ, ಹನೀಫ್ ನಿಝಾಮಿ ಉರುಮಣೆ, ಹನೀಫ್ ಮುಸ್ಲಿಯಾರ್ ಉರುಮಣೆ, ಇಸ್ಮಾಯಿಲ್ ಮುಸ್ಲಿಯಾರ್ ಬಂಗೇರಕಟ್ಟೆ, ಅಬೂಬಕ್ಕರ್ ಮುಸ್ಲಿಯಾರ್ ಅಳಕೆ, ರಫೀಕ್ ಮುಸ್ಲಿಯಾರ್ ಪಾತೂರು, ಉಮರ್ ಮುಸ್ಲಿಯಾರ್ ಅಳಕೆ ಪಾತೂರು, ಸಮೀರ್ ಮುಸ್ಲಿಯಾರ್ ಬಾಂಬಿಲ, ಹಮೀದ್ ಮುಸ್ಲಿಯಾರ್ ತಲಕಳ, ಯೂಸುಫ್ ಮುಸ್ಲಿಯಾರ್ ದೇಲಂಪಾಡಿ,
ಅಬ್ದುಲ್ಲಾ ಮುಸ್ಲಿಯಾರ್ ದೇಲಂಪಾಡಿ, ಬಶೀರ್ ಮುಸ್ಲಿಯಾರ್ ರಂತಡ್ಕ, ಮಜೀದ್ ಸಅದಿ ತಲಕಳ, ರಫೀಕ್ ಮುಸ್ಲಿಯಾರ್, ರಶೀದ್ ಮುಸ್ಲಿಯಾರ್ ಕಡಂಬಾರ್, ರಹೀಮ್ ಮುಸ್ಲಿಯಾರ್ ಸುಕಂದಕಟ್ಟೆ, ರಫೀಖ್ ಮುಸ್ಲಿಯಾರ್ ಚಿಪ್ಪಾರ್, ರಫೀಖ್ ಮುಸ್ಲಿಯಾರ್ ಪುತ್ತೂರು ಆಯ್ಕೆಯಾದರು.

ನೂತನ ಅಧ್ಯಕ್ಷ ಆರ್‌.ಕೆ ಅಬ್ದುಲ್ ಹಮೀದ್ ಮುಸ್ಲಿಯಾರ್ ನೂತನ ಸಮಿತಿಗೆ ಶುಭಹಾರೈಸಿ ಮಾತಾನಾಡಿದರು.

ಕಾರ್ಯಕ್ರಮವನ್ನು ಕಮರುದ್ದೀನ್ ಮುಸ್ಲಿಯಾರ್ ಆನೆಕಲ್ಲು (ಕತ್ತರ್) ಸ್ವಾಗತಿಸಿ, ಕೋಶಾಧಿಕಾರಿ ಆರ್.ಕೆ ಅಬ್ದುಲ್ ರಝಾಕ್ ಮುಸ್ಲಿಯಾರ್ ರಂತಡ್ಕ (ಮಕ್ಕಾ) ವಂದಿಸಿದರು.

ವರದಿ: AK ಲತ್ವೀಫಿ

    Leave Your Comment

    Your email address will not be published.*

    Open chat
    1
    ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...