ಎಸ್ ಕೆ ಎಸ್ ಎಸ್ ಎಫ್ ಟ್ರೆಂಡ್ ಉಪ್ಪಿನಂಗಡಿ ವಲಯ ನೂತನ ಸಮಿತಿ ರಚನೆ

ಉಪ್ಪಿನಂಗಡಿ (www.vknews.com) : SKSSF ಟ್ರೆಂಡ್ ಉಪ್ಪಿನಂಗಡಿ ವಲಯ ನೂತನ ಸಮಿತಿ ರಚನೆ ದಿನಾಂಕ 11 ಅಕ್ಟೋಬರ್ 2020 ರಂದು ಮಲಿಕ್ ದೀನಾರ್ ಜುಮಾ ಮಸ್ಜಿದ್ ಸಭಾಂಗಣದಲ್ಲಿ ನಡೆಯುತು. SKSSF ಉಪ್ಪಿನಂಗಡಿ ವಲಯ ಸಂಘಟನಾ ಕಾರ್ಯದರ್ಶಿ ಜಬ್ಬಾರ್ ಮುಸ್ಲಿಯಾರ್ ಕರಾಯ ದುವಾ ನೇರವೇರಿಸಿದರು. SKSSF ಉಪ್ಪಿನಂಗಡಿ ವಲಯ ಉಪಾಧ್ಯಕ್ಷರಾದ ಯುಸೂಫ್ ಹಾಜಿ ಪೇದಮಲೆ ಇವರ ಅಧ್ಯಕ್ಷತೆ ವಹಿಸಿದರು. ಸಭೆಯಲ್ಲಿ SKSSF ಉಪ್ಪಿನಂಗಡಿ ವಲಯ ಪ್ರಧಾನ ಕಾರ್ಯದರ್ಶಿ ಹಾರೀಶ್ ಕೌಸರಿ ಉಸ್ತಾದ್ ಕಾರ್ಯಕ್ರಮ ಉದ್ಘಾಟನೆ ಮಾಡಿದರು. SKSSF ದಕ್ಷಿಣ ಕನ್ನಡ ಜಿಲ್ಲಾ ಟ್ರೆಂಡ್ ಕನ್ವೀನರ್ ಸಮದ್ ಸರ್ ಸಾಲೆತ್ತೂರು ಟ್ರೆಂಡ್ ಕುರಿತು ವಿಷಯ ಮಂಡನೆ ಮಾಡಿದರು. ನಂತರ SKSSF ಉಪ್ಪಿನಂಗಡಿ ವಲಯ ಟ್ರೆಂಡ್ ನೂತನ ಸಮಿತಿಯನ್ನು ರಚಿನೆ ಮಾಡಲಾಯಿತು.

ಚೇರ್ಮನ್ ಯಾಗಿ ಅನ್ವರ್ ಸರ್ ಕೋಲ್ಪೆ, ವೈಸ್ ಚೇರ್ಮನ್ ಯಾಗಿ ಝೈನ್ ಆತೂರು ಹಾಗೂ ರಶೀದ್ ಕರಾಯ, ಕನ್ವೀನರ್ ಯಾಗಿ ಸೈಪುದ್ದೀನ್ ಕುಂಡಾಜೆ, ವೈಸ್ ಕನ್ವೀನರ್ ಯಾಗಿ ಮುಝಮ್ಮಿಲ್ ಆತೂರು ಹಾಗೂ ಆಸೀಫ್ ಪೆರ್ನೆ , ಕೋಶಾಧಿಕಾರಿಯಾಗಿ ಝುಬೈರ್ ಜೋಗಿಬೆಟ್ಟು, ವರ್ಕಿಂಗ್ ಕಾರ್ಯದರ್ಶಿಯಾಗಿ ಇಮ್ತಿಯಾಝ್ ಆತೂರು, ಮೀಡಿಯಾ ಉಸ್ತುವಾರಿ ಯಾಗಿ ಝಬೈರ್ ಗಂಡಿಬಾಗಿಲು ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಮುಹಮ್ಮದ್ ರಾಫದ್ , ಸುಫೈನ್ ಕರಾಯ, ಫಾರೋಕ್ ಉಪ್ಪಿನಂಗಡಿ, ಹಪೀಫ್ ಆತೂರು, ಇರ್ಷಾದ್ ಕರಾಯ, ಮುನೀರ್ ಆತೂರು, ಕಬೀರ್ ಕುಂಡಾಜೆ, ಇಕ್ಬಾಲ್‌ಜೋಗಿಬೆಟ್ಟು, ಆಯ್ಕೆಯಾದರು.

ಕಾರ್ಯಕ್ರಮದ ಕೊನೆಯಲ್ಲಿ ಸಭೆಯ ಅಧ್ಯಕ್ಷತೆ ವಹಿಸಿದ ಯುಸೂಫ್ ಹಾಜಿ ಪೇದಮಲೆ ಅಧ್ಯಕ್ಷತೆ ಭಾಷಣ ನಡೆಸಿದ ನೂತನ ಸಮಿತಿಗೆ ಪ್ರೋತ್ಸಾಹ ಮಾತುಗಳು ಹೇಳಿದರು. SKSSF ಉಪ್ಪಿನಂಗಡಿ ವಲಯ ಸಂಘಟನಾ ಕಾರ್ಯದರ್ಶಿ ಜಬ್ಬಾರ್ ಮುಸ್ಲಿಯಾರ್ ಕರಾಯ ಧನ್ಯವಾದ ಮಾಡಿದರು. ಎಸ್ ಕೆ ಎಸ್ ಎಸ್ ಎಫ್ ಉಪ್ಪಿನಂಗಡಿ ವಲಯ ಟ್ರೆಂಡ್ ಉಸ್ತುವಾರಿ ರಾಝಿಕ್ ಆತೂರುಬೈಲ್ ಸ್ವಾಗತಿಸಿ, ಕಾರ್ಯಕ್ರಮವನ್ನು ನಿರೂಪಿಸಿದರು.

ವಿಶ್ವ ಕನ್ನಡಿಗ ನ್ಯೂಸ್

  Leave Your Comment

  Your email address will not be published.*

  ಚಾಟ್ ಮಾಡಿ
  1
  VK News Official Chat
  ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...