ಧಾರವಾಡ (www.vknews.com) : ಮನುಷ್ಯನಿಗೆ ಶಾರೀರಿಕ ಅರೋಗ್ಯ ಎಷ್ಟು ಮುಖ್ಯವೋ ಅμÉ್ಟೀ ಮಾನಸಿಕ ಆರೋಗ್ಯವೂ ಪ್ರಾಮುಖ್ಯವಾದದ್ದು ಎಂದು ಇಂದು ವಿಶ್ವ ಮಾನಸಿಕ ಸ್ವಾಸ್ಥ್ಯ ದಿನ ಅಂಗವಾಗಿ ಧಾರವಾಡದ ಆಯುರ್ಧಾಮದಲ್ಲಿ ಹಿರಿಯ ಆಯುರ್ವೇದ ತಜ್ಞ ಡಾ. ಮಹಾಂತಸ್ವಾಮಿ ಹಿರೇಮಠ ಹೇಳಿದರು.
ಅವರು ತಮ್ಮ ಆಯುರ್ಧಾಮದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಮಾನಸಿಕ ಸ್ವಾಸ್ಥ್ಯ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡುತ್ತಿದ್ದರು. ಆಯುರ್ವೇದದಲ್ಲಿ ಆರೋಗ್ಯವಂತನ ಲಕ್ಷಣ ಹೇಳುತ್ತ ಮನುಷ್ಯ ನೋಡಲು ಸುಂದರರರಾಗಿದ್ದರೆ ಸಾಲದು ಅವರ ಮಾನಸಿಕ ಸ್ವಾಸ್ಥ್ಯ ಘಟ್ಟಿಯಾಗಿರಬೇಕು “ಸಮ ದೋಷ ಸಮ ಅಗ್ನಿಶ್ಚ ಸಮ ಧಾತು ಮಲ ಕ್ರಿಯಾ ಪ್ರಸನ್ನ ಆತ್ಮ ಇಂದ್ರಿಯ ಮನ ಸ್ವಸ್ಥ ಇಥ್ಯಭಿಧಿಯತೇ’ ಎಂದು ಆಯುರ್ವೇದ ಶಾಸ್ತ್ರಗ್ರಂಥಗಳು ಸಾರಿ ಹೇಳುತ್ತವೆ. ಶರೀರದ ದೋಷ ಧಾತು ಅಗ್ನಿಗಳ ಕ್ರಿಯೆಗಳ ಜೊತೆಗೆ ಆತ್ಮ ಇಂದ್ರಿಯ ಮನಸ್ಸು ಸಹ ಸಮನಾಗಿ ಕೆಲಸ ಮಾಡಬೇಕು ಆವಾಗಲೇ ಅದಕ್ಕೆ ಸ್ವಾಸ್ಥ್ಯ ಎಂದು ಕರೆಯಲಾಗುತ್ತದೆ.
ಮಾನಸಿಕ ಒತ್ತಡ, ಜಿಗುಪ್ಸೆ, ಖೇದ, ನಿದ್ರಾಹೀನತೆ, ಸುಮ್ಮನೇ ಅಳು, ಸಿಟ್ಟು, ನಗುವು ಬರುವದು, ಚಿತ್ತ ಚಂಚಲತೆ ಇತ್ಯಾದಿ ತೊಂದರೆಗಳಾದರೆ ಯೋಗ್ಯ ವೈದ್ಯರ ಜೊತೆ ಆಪ್ತ ಸಮಾಲೋಚನೆ ನಡೆಸಿ ಸಮಸ್ಯೆಯನ್ನು ಪರಿಹರಿಸಲು ಪ್ರಯತ್ನಿಸಬೇಕು. ಇದನ್ನು ಸರಿಯಾಗಿ ಉಪಚರಿಸಿಕೊಳ್ಳದೆ ಹೋದರೆ, ಜನಸಾಮಾನ್ಯರು ವೃಥಾ ವಿರೋಧ, ಜಗಳ, ವಿಚ್ಛೇದನದಂತಹ ತೊಂದರೆ ಅನುಭವಿಸುತ್ತಿದ್ದಾರೆ. ಆಯುರ್ವೇದದಲ್ಲಿ ಹೇಳಿದ ಸದಾಚಾರ, ಶಿರೋಧಾರ, ಶಿರೊಪೀಚು, ಪಂಚಕರ್ಮ, ಘ್ರಿತಪಾನ ಮುಂತಾದವು ಗಳಿಂದ ಚಿಕಿತ್ಸೆ ಮಾಡಬಹುದು ಎಂದರು. ಈ ಸಂದರ್ಭದಲ್ಲಿ ಇಮಿಸ್ ಫಾರ್ಮಸಿಯ ಪ್ರಕಾಶ ಆಚಾರ, ಮೊಹಮ್ಮದ್ ರೆಹನ, ಸಿದ್ದನಗೌಡ, ಕು ಪ್ರೇರಣಾ, ಅಭಿನಂದನ ಪಾಟೀಲ ಮುಂತಾದವರು ಉಪಸ್ಥಿತರಿದ್ದರು.