ಯೋಗಿ ಆಡಳಿತದ ಉತ್ತರ ಪ್ರದೇಶವು ಮಹಿಳೆಯರಿಗೆ ಒಂದು ದುಸ್ವಪ್ನವಾಗಿದೆ – ಎಸ್.ಡಿ.ಪಿ.ಐ ಮೈಸೂರು

(www.vknews.com) : ಉತ್ತರ ಪ್ರದೇಶದಲ್ಲಿ ಮಹಿಳೆಯರ ಮೇಲೆ ಲೈಂಗಿಕ ಕಿರುಕುಳ, ಅತ್ಯಾಚಾರ ಮತ್ತು ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿದ್ದು, ಮಹಿಳೆಯರ ಗೌರವವನ್ನು ಅಲ್ಲಿ ನಿರ್ಲಕ್ಷಿಸಲಾಗಿದೆ. ಯೋಗಿಯ ಆಳ್ವಿಕೆಯಲ್ಲಿ ಮಹಿಳೆಯರ ವಾಸಕ್ಕೆ ಉತ್ತರ ಪ್ರದೇಶ ಒಂದು ದುಃಸ್ವಪ್ನದ ಸ್ಥಳವಾಗಿ ಮಾರ್ಪಟ್ಟಿದೆ ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ SDPI ಪಕ್ಷದ ಮೈಸೂರು ಜಿಲ್ಲಾ ಘಟಕ ಖಂಡಿಸುತ್ತದೆ.

ಯು.ಪಿ ಯಲ್ಲಿ ಪ್ರತಿ ಎರಡು ಗಂಟೆಗಳಿಗೊಮ್ಮೆ ಅತ್ಯಾಚಾರ ಪ್ರಕರಣ ದಾಖಲಾಗುತ್ತಿದ್ದು, ಉತ್ತರ ಪ್ರದೇಶವನ್ನು ಭಾರತದ ಅಪರಾಧಗಳ ರಾಜಧಾನಿಯಾಗಿ ಪರಿವರ್ತಿಸಲಾಗಿದೆ ಎಂದು ಜಿಲ್ಲಾಧ್ಯಕ್ಷ ಅಮ್ಜದ್ ಖಾನ್ ಆರೋಪಿಸಿದರು.

ಉತ್ತರ ಪ್ರದೇಶದ ಹರ್ತಾಸ್‌ನಲ್ಲಿ ಕ್ರೂರವಾಗಿ ಸಾಮೂಹಿಕ ಅತ್ಯಾಚಾರಕ್ಕೊಳಗಾಗಿದ್ದ 19 ವರ್ಷದ ದಲಿತ ಹುಡುಗಿ ದೆಹಲಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದು, ಉತ್ತರಪ್ರದೇಶದಲ್ಲಿ ನಡೆಯುತ್ತಿರುವ ನಿರಂತರ ಅತ್ಯಾಚಾರಗಳ ಸರಣಿಯಲ್ಲಿ ಇದು ಕೊನೆಯದೂ ಆಗಿರುವುದಿಲ್ಲ. ಅಮಾಯಕ ಹುಡುಗಿಯನ್ನು ಕ್ರೂರವಾಗಿ ಸಾಮೂಹಿಕ ಅತ್ಯಾಚಾರವೆಸಗಿ ಹತ್ಯೆ ಮಾಡಲಾಗಿದೆ.

ಹುಡುಗಿಯ ಕತ್ತು ಹಿಸುಕಿ ಅವಳ ನಾಲಿಗೆಯನ್ನು ಕತ್ತರಿಸಲಾಗಿದ್ದು, ಅವಳ ಬೆನ್ನುಮೂಳೆಯನ್ನು ಮುರಿಯಲಾಗಿದೆ. ಎರಡು ವಾರಗಳ ಕಾಲ ಜೀವನ್ಮರಣದ ನಡುವೆ ಹೋರಾಡಿದ ಆಕೆ ಕೊನೆಗೂ ದೆಹಲಿಯ ಆಸ್ಪತ್ರೆಯಲ್ಲಿ ಅಸುನೀಗಿದ್ದಾಳೆ. ಹುಡುಗಿಯ ಸಾವಿನ 24 ಗಂಟೆ ಕಳೆಯುವ ಮೊದಲೇ, ಉತ್ತರ ಪ್ರದೇಶದ ಹಮೀರ್ ಪುರದಲ್ಲಿ ಪೊಲೀಸ್ ಅಧಿಕಾರಿಯೊಬ್ಬರು ದಲಿತ ಮಹಿಳೆಯ ತೊಡೆಯ ಮೇಲೆ ಬೂಟಿನಿಂದ ತುಳಿಯುತ್ತಿರುವ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಉತ್ತರ ಪ್ರದೇಶದಲ್ಲಿ ಮಾನವೀಯತೆ ಅಕ್ಷರಶಃ ಸತ್ತು ಹೋಗಿದೆ. ಕೇಸರಿ ವಸ್ತ್ರಧಾರಿ ನಿರ್ದಯಿ ಸನ್ಯಾಸಿಯ ಆಳ್ವಿಕೆಯಲ್ಲಿ ಕ್ರೌರ್ಯವೇ ರಾಜ್ಯದ ವಿಶಿಷ್ಟ ಲಕ್ಷಣವಾಗಿದೆ. ಯೋಗಿ ಆದಿತ್ಯನಾಥ್, ರಾಜ್ಯ ಮತ್ತು ದೇಶ ಮಾತ್ರವಲ್ಲ ಸನಾತನ ಧರ್ಮಕ್ಕೂ ಕಳಂಕಿತರಾಗಿದ್ದಾರೆ. ಮುಸ್ಲಿಂ ಮಹಿಳೆಯರನ್ನು ಗೋರಿಗಳಿಂದ ಹೊರತೆಗೆದು ಅತ್ಯಾಚಾರವೆಸಗಿ ಎಂದು ಕರೆ ನೀಡಿದ್ದ ಧರ್ಮಾಂಧತೆ ತುಂಬಿದ ಮನುಷ್ಯನಿಂದ ಯಾವುದೇ ರೀತಿಯ ಮಾನವೀಯತೆಯನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ಆದುದರಿಂದ ಇತಂಹ ಮನುವಾದಿಗಳನ್ನು ಅಧಿಕಾರದಿಂದ ದೂರ ಇಡ ಬೇಕು. ಇದು ನಮ್ಮೆಲ್ಲರ ಸಾಮಾಜಿಕ ಜವಾಬ್ಧಾರಿಯಾಗಿರುತ್ತದೆ.

ಜಂಗಲ್ ರಾಜ್ ಎಂಬ ಪದವು ಉತ್ತರ ಪ್ರದೇಶಕ್ಕೆ ಹೆಚ್ಚು ಸೂಕ್ತವೆನಿಸುತ್ತದೆ. ಯಾವುದೇ ನೈತಿಕತೆ ಮತ್ತು ಪ್ರಜಾಪ್ರಭುತ್ವ ಮೌಲ್ಯಗಳು ಅಥವಾ ಮಾನವೀಯತೆಗೆ ಅಲ್ಲಿ ಗೌರವವಿಲ್ಲದಂತಾಗಿದೆ. ಅಲ್ಲಿ ಮನುಷ್ಯರಿಗಿಂತ ಹಸುಗಳಿಗೆ ಹೆಚ್ಚಿನ ಆದ್ಯತೆ ಸಿಗುತ್ತದೆ. ಅತ್ಯಾಚಾರಿಗಳು ಮತ್ತು ಕಿರುಕುಳ ನೀಡುವವರು ಅಲ್ಲಿ ಆಡಳಿತ ನಡೆಸುತ್ತಿದ್ದಾರೆ. ಈ ಅವಮಾನದ ಗಾಯಕ್ಕೆ ಮತ್ತಷ್ಟು ನೋವು ಉಂಟು ಮಾಡುತ್ತಾ, “ಸರ್ವರ್ಣ ಪರಿಷತ್” ಹೆಸರಿನ ತಂಡವು ಹತ್ರಾಸ್ ಅತ್ಯಾಚಾರಿಗಳನ್ನು ಬೆಂಬಲಿಸಿ ಮುನ್ನೆಲೆಗೆ ಬಂದಿದೆ. ಉತ್ತರಪ್ರದೇಶದಲ್ಲಿ ಅಪರಾಧಿಗಳು, ಅತ್ಯಾಚಾರಿಗಳು ಮತ್ತು ಅಪರಾಧಿಗಳಿಗೆ ಮುಕ್ತವಾಗಿ ಓಡಾಡಲು ಅವಕಾಶ ಕಲ್ಪಿಸಲಾಗಿದೆ. ಯೋಗಿ ಅಧಿಕಾರ ವಹಿಸಿಕೊಂಡಾಗಿನಿಂದ ಅವರಿಗೆ ಇನ್ನಷ್ಟು ಧೈರ್ಯ ಬಂದಿದೆ.

ಈ ಕ್ರೂರ ಘಟನೆಯ ದುಃಖಕರ ಮತ್ತು ಬೇಸರದ ಸಂಗತಿಯೆಂದರೆ, ಹತ್ರಾಸ್ ಹುಡುಗಿಯನ್ನು ಹತ್ಯೆ ಮಾಡಿದ ರೀತಿಯಲ್ಲಿಯೇ ಕೊಲೆಯಾದ ನಿರ್ಭಯಳಿಗೆ ನ್ಯಾಯ ಕೋರಿ ಬೀದಿಗಿಳಿದ ದೇಶದ ಸಾಮೂಹಿಕ ಪ್ರಜ್ಞೆಯಿಂದ ಈಗ ಅಂತಹ ಯಾವುದೇ ಆಕ್ರೋಶ ವ್ಯಕ್ತವಾಗಲಿಲ್ಲ. ಅತ್ಯಾಚಾರ ಮತ್ತು ಕಿರುಕುಳಕ್ಕೆ ಬಲಿಯಾದವರನ್ನು ಅವರ ಸ್ಥಾನಮಾನ, ಜಾತಿ ನೋಡಿ ಪರಿಗಣಿಸಲಾಗುತ್ತದೆ ಎಂಬುದು ನಾಚಿಕೆಗೇಡಿನ ಸಂಗತಿಯಾಗಿದೆ

ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದವರು :-

1) ದೇವನೂರು ಪುಟ್ಟ ನಂಜಯ್ಯ ,ಎಸ್.ಡಿ.ಪಿ.ಐ ರಾಜ್ಯ ಉಪಾಧ್ಯಕ್ಷರು ಕರ್ನಾಟಕ.
2) ಕುಮಾರಸ್ವಾಮಿ.
ಎಸ್.ಡಿ.ಪಿ.ಐ
ರಾಜ್ಯ ಕಾರ್ಯದರ್ಶಿಗಳು ಕರ್ನಾಟಕ.
3) ಶ್ರೀ ಜ್ಞಾನ ಪ್ರಕಾಶ ಸ್ವಾಮೀಜಿಯವರು,
ಉರಿಲಿಂಗಪೆದ್ದಿ ಮಠ ಮೈಸೂರು.
4) ಮೌಲಾನ ಇಸ್ಮಾಯಿಲ್, ಅಧ್ಯಕ್ಷರು
ಆಲ್ ಇಂಡಿಯಾ ಈಮಾಮ್ಸ್ ಕೌನ್ಸಿಲ್ ಮೈಸೂರು ಜಿಲ್ಲಾ ಘಟಕ.
5) ಶ್ರೀ ಪುರುಷೋತ್ತಮ್ ಮಾಜಿ ಮಹಾಪೌರರು, ಮೈಸೂರು.
6)ಮೊಮ್ಮದ್ ಸಫಿ ಜಿಲ್ಲಾಧ್ಯಕ್ಷರು ಪಿಎಫ್ಐ. ಮೈಸೂರು
7) ಚೋರನಹಳ್ಳಿ ಶಿವಣ್ಣ ಸಂಚಾಲಕರು ಡಿ.ಎಸ್.ಎಸ್.ಮೈಸೂರು
8) ದೇವರಾಜ ನಾಯಕ ಕಾಟೂರು.
ಅಧ್ಯಕ್ಷರು
ರಾಜ್ಯ ನಾಯಕ ಜನಾಂಗದ ಯುವ ವೇದಿಕೆ.

 

ವಿಶ್ವ ಕನ್ನಡಿಗ ನ್ಯೂಸ್

  Leave Your Comment

  Your email address will not be published.*

  ಚಾಟ್ ಮಾಡಿ
  1
  VK News Official Chat
  ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...