ಗಾಂಧಿ ಹೇಗಿರಬೇಕೆಂದು ಭಾಷಣ ಮಾಡಲಿಲ್ಲ; ಸ್ವತಃ ಬದುಕಿ ತೋರಿಸಿದರು : ಹರಳಿಮಠದ ಗಾಂಧಿ ಜಯಂತಿಯಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಆಡಿನಸರ ಸತೀಶ್ ನುಡಿ

(www.vknews.com) : ಇಡೀ ಜಗತ್ತಿನ ಶಾಂತಿ, ನೆಮ್ಮದಿ, ಸಮಾನತೆಗೆ ತಮ್ಮ ನಡೆ-ನುಡಿಯ ಮೂಲಕವೇ ಹೋರಾಟ ರೂಪಿಸಿ ದಿಕ್ಕು ತೋರಿದ ದಾರ್ಶನಿಕ ಮಹತ್ಮಾ ಗಾಂಧಿಯಾಗಿದ್ದಾರೆ. ಇಡೀ ವಿಶ್ವ ಗಾಂಧಿ ಹುಟ್ಟಿದ ದಿನವನ್ನು ಅಹಿಂಸಾದಿನವನ್ನಾಗಿ ಆಚರಿಸುತ್ತಿದೆ. ಆದರೆ ನಮ್ಮ ದೇಶದಲ್ಲಿ ಗಾಂಧಿ ಕೊಂದವನನ್ನು ಆರಾಧಿಸುವ ಕ್ರೂರವ್ಯವಸ್ಥೆ ನಿರ್ಮಾಣವಾಗುತ್ತಿದೆ ಎಂದು ತೀರ್ಥಹಳ್ಳಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಆಡಿನಸರ ಸತೀಶ್ ವಿಷಾದಿಸಿದರು.

ಹರಳಿಮಠದ ಗಾಂಧಿ ಯುವಮಿತ್ರವೃಂದ ಗ್ರಾಮದಲ್ಲಿ ಆಯೋಜಿಸಿದ್ದ ಗಾಂಧಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಕಾರ್ಯಕ್ರಮದಲ್ಲಿ ಗ್ರಾಮದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸರ್ಜಾಹಿರಿಯಣ್ಣಪ್ಪ ಪ್ರತಿಭಾ ಪುರಸ್ಕಾರ ಪ್ರಧಾನ ಮಾಡಿ ಅವರು ಮಾತನಾಡುತ್ತಿದ್ದರು.

ಗಾಂಧಿಯನ್ನು ಫೋಟೊದಲ್ಲಿಟ್ಟು ದೇವರಂತೆ ಪೂಜಿಸಿದರೆ ಅರ್ಥವಿಲ್ಲ. ಗಾಂಧಿ ಕೂಡ ಸಾಮಾನ್ಯ ಮನುಷ್ಯರೇ ಆಗಿದ್ದವರು. ಅವರೂ ಕೂಡ ನಮ್ಮಂತೆ ಬಾಲ್ಯದಲ್ಲಿ, ಯೌವನದಲ್ಲಿ ಕೆಲವು ತಪ್ಪುಗಳನ್ನು ಮಾಡಿದವರು. ಆದರೆ ತಾವು ಮಾಡಿದ ಆ ತಪ್ಪುಗಳನ್ನು ಅರಿತು, ಪಶ್ಚಾತ್ತಾಪಪಟ್ಟು, ಅವುಗಳನ್ನು ತಿದ್ದಿಕೊಂಡು ಮಾದರಿವ್ಯಕ್ತಿಯಾಗಿ ರೂಪುಗೊಂಡರು. ಇದನ್ನು ನಾವು ಅರಿಯಬೇಕಾಗಿದೆ ಎಂದರು. ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಕುರಿತು ಮಾತನಾಡಿದ ಸತೀಶ್. ಅಂತಹ ಪ್ರಾಮಾಣಿಕ ಸರಳ ಸಜ್ಜನಿಕೆಯ ರಾಜಕಾರಣಿಯ ಬದುಕನ್ನು ಮುನ್ನಲೆಗೆ ತರುವ ಪ್ರಯತ್ನ ನಡೆಯಬೇಕು ಎಂದರು

ಡಾ. ಸರ್ಜಾಶಂಕರ್ ಹರಳಿಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾದ ಜಲೀಲ್ ಅಧ್ಯಕ್ಷತೆ ವಹಿಸಿದ್ದರು. ಗಾಂಧಿ ಮಿತ್ರವೃಂದದ ಪ್ರದೀಪ್, ಚೈತ್ರ, ಯಾಕೂಬ್, ನಾಗಲಕ್ಷ್ಮಿ, ಡಿ.ಟಿ ಪ್ರಹ್ಲಾದ್, ಮಹಮದ್ ರಫೀಕ್, ರಫೀಕ್, ಆಸೀಫ್ ಉಪಸ್ಥಿತರಿದ್ದರು.

ಮುಖ್ಯೋಪಾಧ್ಯಾಯರಾದ ರಮೇಶ್ ಸ್ವಾಗತಿಸಿದರು. ಶಿಕ್ಷಕರಾದ ಮಂಜಪ್ಪ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಗ್ರಾಮದ ಪ್ರತಿಯೊಬ್ಬರೂ ಕೋವಿದ್ ಸಾಂಕ್ರಾಮಿಕ ನಿಯಂತ್ರಣ ಮಾರ್ಗಸೂಚಿಯ ಅನುಸಾರ ಮುಖಗವಸುಗಳನ್ನು ಧರಿಸಿ ಬಂದಿದ್ದು ದೈಹಿಕ ಅಂತರವನ್ನು ಕಾಪಾಡಲು ಅನುಕೂಲವಾಗುವಂತೆ ಆಸನ ವ್ಯವಸ್ಥೆ ಮಾಡಲಾಗಿತ್ತು.

5ನೇ ತರಗತಿಯಲ್ಲಿ ಸಂಜನಾ.ಕೆ.ಆರ್, ಆಫೀಜ್, ಅಂಶು ಎಚ್.ಎಮ್, 7ನೇತರಗತಿಯಲ್ಲಿ ಪನ್ನಗ ಕೆ.ಯು, ಪ್ರಜ್ವಲ್ ಕೆ.ಟಿ, ಸಾನ್ವಿ ಕೆ.ಡಿ, 10ನೇ ತರಗತಿಯಲ್ಲಿ ಸುಜನ್ ಎಚ್.ಡಿ, ಅನುಪ ಎಚ್.ಎಮ್ ಮತ್ತು ಸದನ ಎಚ್.ಸಿ 27ನೇ ವರ್ಷದ ಸರ್ಜಾಹಿರಿಯಣ್ಣಪ್ಪ ಪ್ರತಿಭಾ ಪುರಸ್ಕಾರಕ್ಕೆ ಪಾತ್ರರಾದರು.

 

ವಿಶ್ವ ಕನ್ನಡಿಗ ನ್ಯೂಸ್

  Leave Your Comment

  Your email address will not be published.*

  ಚಾಟ್ ಮಾಡಿ
  1
  VK News Official Chat
  ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...