ಬಂಟ್ವಾಳ(ವಿಶ್ವಕನ್ನಡಿಗ ನ್ಯೂಸ್): ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ (ರಿ)SKSSF ಮೈಂದಾಲ ಶಾಖೆ,ಬದ್ರಿಯಾ ಜುಮಾ ಮಸೀದಿ ಮೈಂದಾಲ ಜಂಟಿ ಆಶ್ರಯದಲ್ಲಿ , ಆಳ್ವಾಸ್ ಬ್ಲಡ್ ಬ್ಯಾಂಕ್ ಮೂಡಬಿದಿರೆ, ಮಂಗಳೂರು,ಸಹಭಾಗಿತ್ವದಲ್ಲಿ ಸಾರ್ವಜನಿಕ ರಕ್ತದಾನ ಶಿಬಿರವು ದಿನಾಂಕ 11 ಆಕ್ಟೋಬರ್ 2020 ನೇ ಆದಿತ್ಯವಾರದಂದು ಬದ್ರಿಯಾ ಮದ್ರಸ ಸಭಾಂಗಣದಲ್ಲಿ ಯಶಸ್ವಿಯಾಗಿ ನಡೆಯಿತು.
ಬದ್ರಿಯಾ ಜುಮಾ ಮಸೀದಿ ಮೈಂದಾಲ ಖತೀಬರಾದ ಬಹು|ಸ್ವಾದಿಕ್ ಅಝರಿ ಉಸ್ತಾದರ ದುಃವಾ ಆಶೀರ್ವಚನದ ಮೂಲಕ ಚಾಲನೆಗೊಂಡ ಕಾರ್ಯಕ್ರಮವನ್ನು, ಬದ್ರಿಯಾ ಜುಮಾ ಮಸೀದಿ, ಅಧ್ಯಕ್ಷರಾದ ಸುಲೈಮಾನ್ ಹೆದ್ದಾರಿ ಅಧ್ಯಕ್ಷತೆ ವಹಿಸಿದ್ದರು.
ಕೊರೋನಾ ಭೀತಿಯ ನಡುವೆಯೂ ಯಶಸ್ವಿಯಾಗಿ ನಡೆದ ರಕ್ತದಾನ ಶಿಬಿರದಲ್ಲಿ ಎಲ್ಲಾ ಸುರಕ್ಷಿತಾ ಮುನ್ನೆಚ್ಚರಿಕೆಯನ್ನು ಪಾಲಿಸಿ ಕೊಂಡು ಒಟ್ಟು 39 ಮಂದಿ ರಕ್ತದಾನ ಮಾಡಿ ಜೀವದಾನಿಯಾದರು. ದಾನಿಗಳಿಂದ ರಕ್ತ ಸಂಗ್ರಹಿಸುವಲ್ಲಿ ಅಳ್ವಾಸ್ ಮೂಡಬಿದಿರೆ ಮಂಗಳೂರು ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಸಹಕರಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ,MJM ಅಗ್ರಹಾರ ಖತೀಬರಾದ ಶಮೀರ್ ಫೈಝಿ ಮಾಡಾವು ಮಾತನಾಡಿ ದಾನ ಧರ್ಮದ ಮಹತ್ವವನ್ನು ಸಾರ್ವಜನಿಕರಿಗೆ ತಿಳಿಸಿದರು.ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ (ರಿ) ನಿರ್ವಾಹಕ ಅಶ್ರಪ್ ಅರಬಿ ಕಲ್ಲಡ್ಕ ಮಾತನಾಡಿ ರಕ್ತ ದಾನ ದ ಬಗ್ಗೆ ಮಾಹಿತಿ ನೀಡಿದರು, ಕಾರ್ಯಕ್ರಮದಲ್ಲಿ SKSSF ಮೈಂದಾಲ ಶಾಖೆ ಅಧ್ಯಕ್ಷರಾದ,ಶಂಶುದ್ದೀನ್ ಅಝರಿ ಮೈಂದಾಲ, ಯೂಸುಫ್ ಮೈಂದಾಲ, ಸಮೀಉಲ್ಲಾಹ್ ,ಅನ್ವಾರ್ ಮುಸ್ಲಿಯಾರ್,ಅಶ್ರಪ್ ಮುಸ್ಲಿಯಾರ್,ಅಸ್ರುದ್ದೀನ್, ಅನ್ಸಾರ್ ಮೈಂದಾಲ ಹಾಗೂ SKSSF ಮೈಂದಾಲ ಪದಾಧಿಕಾರಿಗಳು ಮತ್ತು ಬ್ಲಡ್ ಹೆಲ್ಪ್ ಲೈನ್ ಕರ್ನಾಟಕದ ಕಾರ್ಯ ನಿರ್ವಾಹಕರು ಉಪಸ್ಥಿತರಿದ್ದರು.
SKSSF ಮೈಂದಾಲ ಶಾಖೆಯ ಕಾರ್ಯದರ್ಶಿ ತಮೀಮ್ ವಂದಿಸಿದರು
ರಕ್ತದಾನ ಮಾಡಿದ ಸರ್ವ ಸಹೃದಯೀ ದಾನಿಗಳಿಗೂ,ಆಸ್ಪತ್ರೆ ಸಿಬ್ಬಂದಿ ವರ್ಗಕ್ಕೂ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕರಿಸಿದ ಮೈಂದಾಲ ಜನಸ್ನೇಹಿ ನಾಗರಿಕರಿಗೂ ಹಾಗೂ ಕಾರ್ಯಕ್ರಮದ ಯಶಸ್ವಿಗಾಗಿ ಹಗಳಿರುಲು ದುಡಿದ ಎಲ್ಲಾ ಕಾರ್ಯಕರ್ತರಿಗೂ,ಮದ್ರಸದ ಆಡಳಿತ ಮಂಡಳಿಗೂ,ಮಾಧ್ಯಮ ಪ್ರತಿನಿಧಿಗಳಿಗೂ ಸಂಘಟಕರು ಕೃತಜ್ಞತೆಯನ್ನು ತಿಳಿಸಿದ್ದಾರೆ.
ಪ್ರಕಟಣೆ:
ಮಾಧ್ಯಮ ವಿಭಾಗ:
ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ (ರಿ)