ಶ್ರೀನಿವಾಸಪುರ – ಸಮುದಾಯ ಭವನಗಳು ಸಾಮಾಜಿಕ ಸಾಮರಸ್ಯ ಬೆಸೆಯುವ ಕೇಂದ್ರಗಳಾಗಬೇಕು: ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಂ.ಶ್ರೀನಿವಾಸನ್‌

ಶ್ರೀನಿವಾಸಪುರ(ವಿಶ್ವಕನ್ನಡಿಗ ನ್ಯೂಸ್): ಸಮುದಾಯ ಭವನಗಳು ಸಾಮಾಜಿಕ ಸಾಮರಸ್ಯ ಬೆಸೆಯುವ ಕೇಂದ್ರಗಳಾಗಬೇಕು. ಎಂದು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಂ.ಶ್ರೀನಿವಾಸನ್‌ ಹೇಳಿದರು.

ತಾಲ್ಲೂಕಿನ ಮೀಸಗಾನಹಳ್ಳಿ ಗ್ರಾಮದದಲ್ಲಿ ಶುಕ್ರವಾರ ಏರ್ಪಡಿಸಲಾಗಿದ್ದ ಸಮಾರಂಭದಲ್ಲಿ ಅಂಬೇಡ್ಕರ್‌ ಭವನ ನಿರ್ಮಾಣ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿ, ರೂ.8 ಲಕ್ಷ ವೆಚ್ಚದಲ್ಲಿ ಭವನ ನಿರ್ಮಿಸಲಾಗುವುದು. ತಾಲ್ಲೂಕಿನ ಶಾಸಕ ಕೆ.ಆರ್‌.ರಮೇಶ್‌ ಕುಮಾರ್‌ ಅವರ ಪ್ರಯತ್ನದ ಫಲವಾಗಿ ಪ್ರತಿ ಗ್ರಾಮದಲ್ಲೂ ಒಂದು ಅಂಬೇಡ್ಕರ್‌ ಭವನ ನಿರ್ಮಿಸಲು ಸಾಧ್ಯವಾಗಿದೆ ಎಂದು ಹೇಳಿದರು.

ಕೆಸಿ ವ್ಯಾಲಿ ನೀರು ಜಿಲ್ಲೆಯ ರೈತರ ಪಾಲಿಗೆ ವರದಾನವಾಗಿದೆ. ಹಂತ ಹಂತವಾಗಿ ತಾಲ್ಲೂಕಿನ ಆಯ್ದ ಕೆರೆಗಳನ್ನು ತುಂಬಿಸಲಾಗುವುದು. ಆ ನೀರನ್ನು ಜಿಲ್ಲೆಗೆ ಹರಿಸಲು ಶಾಸಕ ಕೆ.ಆರ್‌.ರಮೇಶ್‌ ಕುಮಾರ್‌ ಭಗೀರಥ ಪ್ರಯತ್ನ ಮಾಡಿದ್ದಾರೆ. ಈಗಾಗಲೆ ನೀರು ತುಂಬಿರುವ ಕೆರೆಗಳ ಸುತ್ತ ಅಂತರ್ಜಲ ಅಭಿವೃದ್ಧಿಯಾಗಿದೆ. ಬತ್ತಿಹೋಗಿದ್ದ ಕೊಳವೆ ಬಾವಿಗಳು ಮರುಜೀವ ಪಡೆದುಕೊಂಡಿವೆ ಎಂದು ಹೇಳಿದರು.

ನಿರ್ಮಿತಿ ಕೇಂದ್ರದ ಯೋಜನಾ ವ್ಯವಸ್ಥಾಪಕ ಸಿ.ವೆಂಕಟೇಶಗೌಡ, ಪಿಡಿಒ ಶಂಕರಪ್ಪ, ಮುಖಂಡರಾದ ವೆಂಕಟರವಣ, ಆನಂದ್‌, ನಾಗರಾಜ್‌, ಗೋಪಾಲ್‌, ಎಂ.ಎಲ್‌.ಮುನಿವೆಂಕಟಪ್ಪ, ವೆಂಕಟಶಾಮಿ, ನಾಗರಾಜು, ನಾರಾಯಣಸ್ವಾಮಿ, ಸೊಣ್ಣಪ್ಪರೆಡ್ಡಿ, ರಹಮತ್‌ ಉಲ್ಲಾ, ನಿಸಾರ್‌, ಸನಾವುಲ್ಲಾ, ಎಂ.ವಿ.ವೆಂಕಟರಮಣ ಇದ್ದರು.

ವರದಿ: ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ

  Leave Your Comment

  Your email address will not be published.*

  ಚಾಟ್ ಮಾಡಿ
  1
  VK News Official Chat
  ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...