ಸಕಲೇಶಪುರ: ಮುನಿಶಾಗೆ ಕ್ಯಾಂಡಲ್ ಮೆರವಣಿಗೆ ಮೂಲಕ ಶೃದ್ದಾಂಜಲಿ

ಸಕಲೇಶಪುರ(ವಿಶ್ವಕನ್ನಡಿಗ ನ್ಯೂಸ್): ಉತ್ತರ ಪ್ರದೇಶದಲ್ಲಿ ದಲಿತ ಯುವತಿ ಮೇಲೆ ದೌರ್ಜನ್ಯ ಖಂಡಿಸಿ
ಪ್ರಗತಿಪರ ಸಂಘಟನೆಗಳು ಕ್ಯಾಂಡಲ್ ಹಚ್ಚಿ ಭಾವ ಪೂರ್ಣ ಶೃದ್ದಾಂಜಲಿ ನಡೆಸಿದರು.

ಪಟ್ಟಣದ ಹೇನ ಹೇಮಾವತಿ ಸೇತುವೆಯ ಬಳಿಯಿಂದ ಹಳೆ ಬಸ್ ನಿಲ್ದಾಣದವರಗೆ ಕ್ಯಾಂಡಲ್ ಮೆರವಣಿಗೆ ನಡೆಸಿದರು.
ಹಳೆ ಬಸ್ ನಿಲ್ದಾಣ ದಲ್ಲಿ ಮನಿಶಾ ಭಾವ ಚಿತ್ರಕ್ಕೆ ಕ್ಯಾಂಡಲ್ ಹಚ್ಚಿ ಎರಡು ನಿಮಿಷ ಮೌನಚಾರಣೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ದಲಿತ ಪ್ರಗತಿಪರ ಸಂಘಟನೆ ಗಳ ಒಕ್ಕೂಟದ ಸಂಚಾಲಕ ಜೈ ಭೀಮ ಮಂಜುನಾಥ್ ಮಾತನಾಡಿ  ಉತ್ತರ ಪ್ರದೇಶದಲ್ಲಿ ನಡೆದ ಅತ್ಯಾಚಾರ ಪ್ರಕರಣಗಳು ನಾಗರೀಕರು ತಲೆ ತಗ್ಗಿಸುವಂತಹ ಘಟನೆಯಾಗಿದೆ, ಶವದ ಮುಖವನ್ನು ನೋಡಲು ಬಿಡದೆ.ಸುಟ್ಟ ಹಾಕಿರುವುದು ಕ್ಷಮಿಸಲಾರದ ಅಪರಾಧ ಎಂದರು.

ಅತ್ಯಾಚಾರಕ್ಕೆ ಪ್ರಚೋದನೆ ನೀಡುವುದು, ಅತ್ಯಚಾರಿಗಳನ್ನು ರಕ್ಷಿಸುವುದು, ಸಂತ್ರಸ್ತರಿಗೆ ಸ್ವಾಂತಾನ ಹೇಳುವ ಸಂಘಟನೆ ಹಾಗೂ ನಾಯಕರ ಮೇಲೆ ಕೇಸು ಹಾಕುವುದು ದೇಶದ ದುರಂತ ಎಂದರು.
ಹೆಣ್ಣನ್ನು ಗೌರವಿಸದ ಜನರ ಕೈಯಲ್ಲಿ ಅಧಿಕಾರ ಸಿಕ್ಕಿರುವುದು ಇಂಥಹ ಹಿನಾಯ ಪರಿಸ್ಥಿತಿ ಗೆ ಕಾರಣವಾಗಿದೆ ಎಂದರು.

ಪ್ರತಿಭಟನೆ ಯಲ್ಲಿ ದಲಿತ ಸಂಘಟನೆ ಗ ಒಕ್ಕೂಟದ ಅಧ್ಯಕ್ಷ ಹೆತ್ತುರು ದೋಡ್ಡಯ್ಯ, ಮಳಲಿ ಶಿವಣ್ಣ ನಲ್ಲೂಲ್ಲಿ ಈರಯ್ಯ, ದಲಿತ ಪ್ರಗತಿಪರ ಸಂಘಟನೆ ಗಳ , ಪುರಸಭೆಯ ಸದಸ್ಯ ಅಣ್ಣಪ್ಪ, ಕಾಂಗ್ರೆಸ್ ಮುಖಂಡ ದೇವರಾಜ್, ವಕೀಲ ವೇಣು, ನಾಗರ ರಮೇಶ್, ಹಾಸನ ಜಿಲ್ಲ ಹಸಲರ ಸಂಘದ ಅಧ್ಯಕ್ಷ ನವೀನ್ ಸದಾ, , ಪ್ರಗತಿಪರ ಸಂಘಟನೆ ಗಳ ಒಕ್ಕೂಟದ ಅಧ್ಯಕ್ಷ ಮಲ್ನಾಡ್ ಮೆಹಬೂಬ್, ಸಿ ಐ ಟಿ ಯು ಅದ್ಯಕ್ಷೆ ಸೌಮ್ಯ, ವೀರ ಕನ್ನಡಿಗರ ಟಿಪ್ಪು ಸೇನೆ ಜುಬೇರ್, ಎಸ್ಡಿಪಿಐ ಮುಖಂಡ ,ಸಿದ್ದಿಕ್ ಆನೆಮಹಲ್, ಕೌಡಳ್ಳಿ ಮಹೇಶ್, ಪಿ ಎಫ್ ಐ ಮನ್ಸೂರ್ ವಿವಿಧ ಸಂಘಟನೆ ಮುಖಂಡರುಗಳು ಉಪಸ್ಥಿತರಿದ್ದರು.

  Leave Your Comment

  Your email address will not be published.*

  ಚಾಟ್ ಮಾಡಿ
  1
  VK News Official Chat
  ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...