ಅ.16 ಇಂದು ಕೆ.ಸಿ.ರೋಡ್ ಖಾಝಿ ಸ್ವೀಕಾರ ಸಮಾರಂಭ

ಕೋಟೆಕಾರ್(ವಿಶ್ವಕನ್ನಡಿಗ ನ್ಯೂಸ್): ಕೆ.ಸಿ ರೋಡ್ ತಲಪಾಡಿ ಇತ್ತೀಚೆಗೆ ಆಗಲಿದ ಖಾಝಿ ತತಾಜುಲ್ ಫುಖಹಾಹ್ ಬೇಕಲ್ ಉಸ್ತಾದ್. ತೆರವಾದ ಸ್ಥಾನಕ್ಕೆ ನೂತನ ಖಾಝಿ ಯಾಗಿ ಝೈನುಲ್ ಉಲಮಾ ಅಬ್ದುಲ್ ಹಮೀದ್ ಮುಸ್ಲಿಯಾರ್ (ಮಾನಿ ಉಸ್ತಾದ್). ಅವರನ್ನು ಖಾಝಿಸ್ವೀಕಾರ ಸಮಾರಂಭ ಅಕ್ಟೋಬರ್ 16 ಶುಕ್ರವಾರ ಸಂಜೆ 4 ಗಂಟೆಗೆ ಅಲ್ ಮುಬಾರಕ್ ಜುಮಾ ಮಸ್ಜಿದ್ ಕೆ ಸಿ ರೋಡ್ ವಠಾರದಲ್ಲಿ ಜರಗಲಿದೆ.

ಈ ಸಂದರ್ಭದಲ್ಲಿ ಅಲ್ ಮುಬಾರಕ್ ಜುಮಾ ಮಸ್ಜಿದ್ ಕೆ ಸಿ ರೋಡ್. ಬಿಲಾಲ್ ಜುಮಾ ಮಸ್ಜಿದ್ ತಲಪಾಡಿ. ಅಲ್ ಹಿದಾಯ ಜುಮಾ ಮಸ್ಜಿದ್ ಹಿದಾಯತ್ ನಗರ. ಅಲ್ ಹುದಾ ಜುಮಾ ಮಸ್ಜಿದ್ ಕೆ ಸಿ ನಗರ.ಅಲ್ ಬದ್ರಿಯಾ ಜುಮಾ ಮಸ್ಜಿದ್ ಪಂಜಲ. ಮುಹಿಯ್ಯದ್ದೀನ್ ಜುಮಾ ಮಸ್ಜಿದ್ ಪಿಲಿಕೂರ್. ಇಮಾದುದ್ದೀನ್ ಜುಮಾ ಮಸ್ಜಿದ್ ಮಾಡೂರು ನೂತನ ಸ್ವೀಕಾರ ಬೈಹತ್ ಕಾರ್ಯದಲ್ಲಿ ಭಾಗವಸಿಲಿದೆ ಅಸೈಯದ್ ಅಶ್ರಫ್ ಅಸ್ಸಖಾಫ್ ತಂಙಲ್ ಆದೂರು ಸ್ಥಾನ ವಸ್ತ್ರ ನೀಡುವರು ಈ ಸಂದರ್ಭದಲ್ಲಿ ಕೆ.ಪಿ.ಹುಸೈನ್ ಸಆದಿ ಕೆ ಸಿ ರೋಡ್. ಇಬ್ರಾಹಿಮ್ ಫೈಝಿ ಉಚ್ಚಿಲ. ಡಾ: ಅಬ್ದುರ್ರಶೀದ್ ಝೈನಿ ತಲಪಾಡಿ ಹಾಗೂ ಇನ್ನಿತರ ಉಲಮಾ ಉಮರಾಗಲು ಪರಿಸರ ಜಮಾಅತ್ ಪದಾಧಿಕಾರಿಗಳು ಉಪಸ್ತಿತರಿರುವರು ಎಂದು ಪ್ರಕಟನೆಯಲ್ಲಿ ಕೋರಲಾಗಿದೆ.

  Leave Your Comment

  Your email address will not be published.*

  ಚಾಟ್ ಮಾಡಿ
  1
  VK News Official Chat
  ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...