ಮಚ್ಚಿನ ಮತ್ತು ಪಾರಂಕಿ ಗ್ರಾಮದ ಎಸ್.ಡಿ.ಪಿ.ಐ ಅಭ್ಯರ್ಥಿಗಳ ಘೋಷಣೆ ಹಾಗೂ ಹೊಸ ಸದಸ್ಯರ ಸೇರ್ಪಡೆ

ಬೆಳ್ತಂಗಡಿ(ವಿಶ್ವಕನ್ನಡಿಗ ನ್ಯೂಸ್): ತಾಲೂಕಿನ ಮಚ್ಚಿನ ಹಾಗೂ ಪಾರೆಂಕಿ ಗ್ರಾಮ ಪಂಚಾಯತ್ ಚುನಾವಣೆಯ ಎಸ್.ಡಿ.ಪಿ.ಐ ಅಭ್ಯರ್ಥಿಗಳ ಪ್ರಥಮ ಪಟ್ಟಿ ಘೋಷಣಾ ಕಾರ್ಯಕ್ರಮ ಬಂಗೇರಕಟ್ಟೆಯಲ್ಲಿ ಜರುಗಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್.ಡಿ.ಪಿ.ಐ ಮಚ್ಚಿನ ಗ್ರಾಮ ಸಮಿತಿ ಅಧ್ಯಕ್ಷರಾದ ಕಾಸಿಂ ಬಳ್ಳಮಂಜ ವಹಿಸಿದ್ದರು. ಎಸ್.ಡಿ.ಪಿ.ಐ ಬೆಳ್ತಂಗಡಿ ವಿಧಾನಸಭಾ ಅಧ್ಯಕ್ಷರಾದ ಹೈದರ್ ನೀರ್ಸಾಲ್ ಪ್ರಾಸ್ತಾವಿಕ ಮಾತನಾಡಿದರು. ಮುಖ್ಯ ಅತಿಥಿಯಾಗಿ ಆಗಮಿಸಿದ ಪುತ್ತೂರು ವಿಧಾನ ಸಭಾ ಸದಸ್ಯರಾದ ಜಾಬಿರ್ ಅರಿಯಡ್ಕ *”ಸಂವಿಧಾನ ವಿರೋಧಿಗಳ ಹಾಗೂ ಅನ್ಯಾಯ ಅಕ್ರಮಗಳ ವಿರುದ್ಧದ ನಮ್ಮ ಹೋರಾಟವನ್ನು ಗ್ರಾಮ ಪಂಚಾಯಿತ್ ಒಳಗೂ ಮುಂದುವರಿಸಲು ಹಾಗೂ ತಮ್ಮ ಊರನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯಲು ನಮ್ಮ ಅಭ್ಯರ್ಥಿಗಳಿಗೆ ಸಂಪೂರ್ಣ ಬೆಂಬಲ ನೀಡಬೇಕಾಗಿದೆ”* ಎಂದು ಹೇಳಿದರು. ಮಚ್ಚಿನ ಗ್ರಾಮ ಪಂಚಾಯತ್ ಮಾಜಿ ಸದಸ್ಯ ಇಕ್ಬಾಲ್ ಬಂಗೇರಕಟ್ಟೆ ಸಮಾರೋಪ ಭಾಷಣ ಮಾಡಿದರು.

ಅಭ್ಯರ್ಥಿಗಳ ಘೋಷಣೆಯನ್ನು ಅಧ್ಯಕ್ಷರಾದ ಹೈದರ್ ನೀರ್ಸಾಲ್ ನೆರವೇರಿಸಿದರು.

ಮಚ್ಚಿನ ವಾರ್ಡ್ ನಂ. 3
1. ಕಾಸಿಂ ಬಳ್ಳಮಂಜ
2. ರಝಾಕ್ ಬಿ.ಎಮ್

ಮಚ್ಚಿನ ವಾರ್ಡ್ ನಂ. 4
1. ಉಮರಬ್ಬ

ಪಾರಂಕಿ ಗ್ರಾಮ ವಾರ್ಡ್ ನಂ 2
1.ಇಕ್ಬಾಲ್ ಸಾಲುಮರ

ವೇದಿಕೆಯಲ್ಲಿ ಜಿಲ್ಲಾ ಸಮಿತಿ ಸದಸ್ಯರಾದ ಅಕ್ಬರ್ ಬೆಳ್ತಂಗಡಿ, ಬಿ.ಎಂ. ರಝಾಕ್, ಯಂಗ್ ಮೆನ್ಸ್ ಅಧ್ಯಕ್ಷರಾದ ಮುನಾಫ್ ಬಂಗೇರಕಟ್ಟೆ ಹಾಗೂ ಎಸ್.ಡಿ.ಎ.ಯು ತಾಲೂಕು ಸಮಿತಿ ಸದಸ್ಯರಾದ ನಾಸಿರ್ ಸಾಲುಮರ ಉಪಸ್ಥಿತರಿದ್ದರು.

ವಝೀರ್ ಬಂಗೇರಕಟ್ಟೆ ಸ್ವಾಗತಿಸಿದರು. ಯಾಸೀನ್ ಬಂಗೇರಕಟ್ಟೆ ಕಾರ್ಯಕ್ರಮ ನಿರೂಪಿಸಿ ಧನ್ಯವಾದಗೈದರು.

  Leave Your Comment

  Your email address will not be published.*

  ಚಾಟ್ ಮಾಡಿ
  1
  VK News Official Chat
  ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...