ಕೆ ಸಿ ರೋಡ್: ಝೈನುಲ್ ಉಲಮಾ ನೂತನ ಖಾಝಿ ಸ್ವೀಕಾರ ಸಮಾರಂಭ ಕಾರ್ಯಕ್ರಮ

ಮಂಗಳೂರು(www.vknews.in):ಅಲ್ ಮುಬಾರಕ್ ಜುಮಾ ಮಸ್ಜಿದ್ ಕೆಸಿ ರೋಡ್ ನ ನೂತನ ಖಾಝಿಯಾಗಿ ಜನಾಬ್ ಝೈನುಲ್ ಉಲೇಮಾ M ಅಬ್ದುಲ್ ಹಮೀದ್ ಮುಸ್ಲಿಯಾರ್ ಮಣಿಯವರನ್ನು ಸ್ವೀಕಾರ ಮಾಡಲಾಯಿತು.

ಅಲ್ ಮುಬಾರಕ್ ಜುಮಾ ಮಸ್ಜಿದ್ ಕೆಸಿ ರೋಡ್ ನ ಸಭಾಂಗಣ ದಲ್ಲಿ ಇಮಾದುದ್ದೀನ್ ಮಸೀದಿಯ ಖತೀಬರಾದ ಜನಾಬ್ ಬಷೀರ್ ಅಹ್ಸನಿ ತೋಡಾರ್ ಅವರ ನೇತೃತ್ವದಲ್ಲಿ ಸರಳವಾಗಿ ನಡೆದ ಕಾರ್ಯಕ್ರಮ ಪರಿಸರದ ಏಳು ಜಮಾತಿನ ಪದಾಧಿಕಾರಿಗಳು ಹಾಗೂ ಮಹಾನ್ ಉಲೇಮಾ ಉಮರಗಳ ಉಪಸ್ಥಿತಿಯಲ್ಲಿ ನಡೆಯಿತು.

ಇಮದುದ್ದೀನ್ ಜುಮಾ ಮಸ್ಜಿದ್ ನ ಪರವಾಗಿ ಅಧ್ಯಕ್ಷರು ಜನಾಬ್ ಮಜೀದ್ ಹಸನ್ ಅವರ ಅನುಪಸ್ಥಿತಿಯಲ್ಲಿ ಪ್ರಸ್ತುತ ಅಧ್ಯಕ್ಷರು ಹಾಗೂ MGF ನ ಸದಸ್ಯರಾದ ಜನಾಬ್ ಅನ್ವರ್ ಸಾಹೇಬ್ ಹಾಗೂ ಉಪಾಧ್ಯಕ್ಷರಾದ ಜನಾಬ್ ರಶೀದ್ ಹಂಝ ಕೋಶಾಧಿಕಾರಿ ಜನಾಬ್ PH ಅಬ್ಬಾಸ್ ಹಾಗೂ ಕಮಿಟಿ ಸದಸ್ಯರಾದ ಜನಾಬ್ ಅಧಂ ಹಾಗೂ ರಫೀಕ್ ಹಂಝ.

ಹಾಗೂ MGF ನ ಕಾರ್ಯಕಾರಿ ಸಂಘಟನೆಯ ಜನಾಬ್ ಶೇಕ್ ಅಬ್ದುಲ್ ಗಫೂರ್ ಸಮಾರಂಭದಲ್ಲಿ ಭಾಗವಹಿಸಿದರು.

  Leave Your Comment

  Your email address will not be published.*

  ಚಾಟ್ ಮಾಡಿ
  1
  VK News Official Chat
  ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...