ಉಪ್ಪಿನಂಗಡಿ ಗೃಹರಕ್ಷಕದಳದ ಘಟಕಕ್ಕೆ ಜಿಲ್ಲಾ ಕಮಾಡೆಂಟ್ ಹಾಗೂ ಡೆಪ್ಯುಟಿ ಕಮಾಡೆಂಟ್ ಭೇಟಿ

(www.vknews.in)ಉಪ್ಪಿನಂಗಡಿ:-ಇಲ್ಲಿನ ಉಪ್ಪಿನಂಗಡಿ ಮಾದರಿ ಶಾಲೆಯ ಹಳೆ ಕಟ್ಟಡದ ಆವರಣದಲ್ಲಿರುವ ತಾತ್ಕಾಲಿಕ ಗೃಹರಕ್ಷಕದಳದ ಕಚೇರಿಗೆ ರವಿವಾರ ಬೆಳಿಗ್ಗೆ8:30 ಕ್ಕೆ ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳದ ಕಮಾಡೆಂಟ್ ಡಾ||ಮುರಲೀ ಮೋಹನ್ ಚೂಂತಾರು ಹಾಗೂ ಡೆಪ್ಯುಟಿ ಕಮಾಡೆಂಟ್ ರಮೇಶ್ ರವರು ಭೇಟಿ ನೀಡಿದರು

ಈ ವೇಳೆ ಮಾತನಾಡಿದ ಜಿಲ್ಲಾ ಕಮಾಡೆಂಟ್ ಕೊರೋನಾ ಸಂಧರ್ಭದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲಾ ಘಟಕದ ಗೃಹರಕ್ಷಕರಿಗೆ ಅಭಿನಂದನೆ ಸಲ್ಲಿಸಿದರು ನಂತರ ಘಟಕದ ಎಲ್ಲಾ ಗೃಹರಕ್ಷಕರಿಗೆ ಆಯುಷ್ ಇಲಾಖೆಯ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಮಾತ್ರೆ,ಸ್ಯಾನಿಟೈಜರ್, ವಿತರಿಸಿದರು ಹಾಗೂ ಇದೇ ಸಂಧರ್ಭದಲ್ಲಿ ಕೊರೋನಾ ಸೋಂಕು ತೂತ್ತಾದ ಘಟಕದ ಇಬ್ಬರು ಗೃಹರಕ್ಷಕರಿಗೆ ಆಹಾರ ಕಿಟ್ ವಿತರಿಸಲಾಯಿತು

ಪ್ರಶಂಸನೀಯ ಪತ್ರ, ಕಿಟ್ ವಿತರಣೆ:- ಪ್ರಸ್ತುತ ವರ್ಷಗಳಲ್ಲಿ ಮಳೆಗಾಲದಲ್ಲಿ ಪ್ರವಾಹರಕ್ಷಣಾ ಸಂಧರ್ಭದಲ್ಲಿ ಕರ್ತವ್ಯ ನಿರ್ವಹಿಸಿದ ಪ್ರಭಾರ ಘಟಕಾಧಿಕಾರಿ ದಿನೇಶ್. ಬಿ,ಗೃಹರಕ್ಷಕ ಜನಾರ್ಥನ ಆಚಾರ್ಯ, ವಸಂತರವರಿಗೆ ಜಿಲ್ಲಾ ಕಮಾಡೆಂಟ್ ಹಾಗೂ ಡೆಪ್ಯುಟಿ ಕಮಾಡೆಂಟ್ ಪ್ರಶಂಸನೀಯ ಪತ್ರ ನೀಡಿ ಗೌರವಿಸಲಾಯಿತು ನಂತರ ಘಟಕದ ಎಲ್ಲಾ ಗೃಹರಕ್ಷಕರಿಗೆ ಡಾ||ಮುರಲೀ ಮೋಹನ್ ಚೂಂತಾರುರವರು ಬರೆದ ಕೋವಿಡ್ 19 ಆರೋಗ್ಯ ಮಾರ್ಗ ದರ್ಶಿ ಪುಸ್ತಕ ಎಲ್ಲಾ ಗೃಹರಕ್ಷಕರಿಗೆ ವಿತರಿಸಲಾಯಿತು

ಕಾರ್ಯಕ್ರಮದಲ್ಲಿ ಜಿಲ್ಲಾ ಕಮಾಡೆಂಟ್ ಡಾ||ಮುರಲೀ ಮೋಹನ್ ಚೂಂತಾರು,ಡೆಪ್ಯುಟಿ ಕಮಾಡೆಂಟ್ ರಮೇಶ್, ಘಟಕಾಧಿಕಾರಿ ರಾಮಣ್ಣ ಆಚಾರ್ಯ,ಘಟಕದ ಗೃಹರಕ್ಷಕರು ಉಪಸ್ಥಿತರಿದ್ದರು ಪ್ರಭಾರ ಘಟಕಾಧಿಕಾರಿ ದಿನೇಶ್.ಬಿ.ಸ್ವಾಗತಿಸಿದರು ಗೃಹರಕ್ಷಕ ಜುನೈದ್ ವಂದಿಸಿದರು

    Leave Your Comment

    Your email address will not be published.*

    Open chat
    1
    ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...