ಶೊಹೇಬ್ ಅಫ್ತಾಬ್! ನನ್ನ ಪ್ರಾರ್ಥನೆಯನ್ನು ನಿಜ ಮಾಡಿದ ಹೀರೋ ನೀವು ನಿಮಗಿದೋ ನನ್ನ ಸಲಾಂ

ಲೇಖನಗಳು(ವಿಶ್ವಕನ್ನಡಿಗ ನ್ಯೂಸ್): ಮಂಗಳೂರಿನ ಟೌನ್ ಹಾಲ್ ನಲ್ಲಿ “ಜಾತ್ಯತೀತ ಸಮಾಜದಲ್ಲಿ ಮದ್ರಸ ವ್ಯವಸ್ಥೆ ” ಎಂಬ ವಿಷಯದಲ್ಲಿ ಒಂದು ಸಂವಾದ ಕಾರ್ಯಕ್ರಮ ಇತ್ತು . ಆ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಮುಸ್ಲಿಮೇತರ ಸಹೋದರ ಮೂರು ವಿಷಯಗಳನ್ನು ಅಲ್ಲಿ ಉಲ್ಲೇಖಿಸಿದ್ದರು.

1. ಗುಜರಿ ಹೆಕ್ಕಿ ಬದುಕು ನಿರ್ವಹಿಸುವ ಆ talent ನಿಮ್ಮವರಿಗೆ ಚೆನ್ನಾಗಿ ಇದೆ.

2. ಯಾವುದೇ ಮಾಧ್ಯಮದಲ್ಲಿ ನೋಡಿದರೂ ನಿಮ್ಮ ಮಕ್ಕಳಿಗೆ rank ಬರುವುದಿಲ್ಲ.

3. ನಿಮ್ಮ ಸಮುದಾಯದಿಂದ ಕನಿಷ್ಠ ಒಬ್ಬನೂ ಇಲ್ಲದೆ ಈ ದೇಶದಲ್ಲಿ ಅಪರಾಧ ನಡೆಯುವುದು ಅಪರೂಪ . ಅಂದರೆ ಅಪರಾಧಿಗಳಲ್ಲಿ ಕನಿಷ್ಠ ಒಬ್ಬನಾದರೂ ನಿಮ್ಮವರು ಇರುತ್ತಾರೆ.

ಅವರ ಮಾತಿಗೆ ಪ್ರತಿಕ್ರಿಯೆ ಕೊಡುವ ಸಂದರ್ಭದಲ್ಲಿ ನಾನು ಅವರೊಂದಿಗೆ ಒಂದು ಮಾತು ಹೇಳಿದ್ದೆ. *ಮುಂದೊಂದು ದಿನ ಬರುತ್ತದೆ. ಅಂದು ಹೇಗಿರುತ್ತದೆ ಎಂದರೆ ಎಲ್ಲಾ RANK ನಮ್ಮ ಮಕ್ಕಳಿಗೆ ಬರುತ್ತವೆ. ಆ ಸುಂದರ ಕ್ಷಣಗಳನ್ನು ನೋಡಲಿಕ್ಕೆ ಸರ್ವಶಕ್ತನು ನಿಮಗೆ ಆಯುಷ್ಯ ಕೊಡಲಿ”*

ಬಹುಶ: ಆವತ್ತಿನ ನನ್ನ ಪ್ರಾರ್ಥನೆ ನಿಜವಾಗುತ್ತಿದೆ ಅಲ್ ಹಮ್ದುಲಿಲ್ಲಾಹ್. ಆ ಹೇಳಿಕೆ ಕೊಟ್ಟವರು ಮತ್ತು ಪ್ರತಿಕ್ರಿಯೆ ಕೊಟ್ಟ ನಾನು ಇಬ್ಬರು ಜೀವಂತವಾಗಿದ್ದೇವೆ.

1. ನಮ್ಮ ದೇಶದ ಪ್ರತಿಷ್ಠಿತ ನೀಟ್ ಪರೀಕ್ಷೆಯಲ್ಲಿ 720/720 ಅಂಕಗಳನ್ನು ಪಡೆದು ದೇಶಕ್ಕೆ ಪ್ರಥಮರಾಗಿ ಇತಿಹಾಸವನ್ನು ಬರೆದವರು
ಶೋಯೆಬ್ ಅಫ್ತಾಬ್

2. ನಮ್ಮ ದೇಶದ ಅತಿ ಕಿರಿಯ ಐಎಎಸ್ ಅಧಿಕಾರಿ ಅನ್ಸಾರ್ ಅಹ್ಮದ್ ಶೇಖ್. (21 ವರ್ಷ)

3. ನಮ್ಮ ದೇಶದ ಅತಿ ಕಿರಿಯ ಐಪಿಎಸ್ ಅಧಿಕಾರಿ
ಸಫಿನ್ ಹಸನ್ (22 ವರ್ಷ )

4. ಈ ಜಗತ್ತಿನ ಅತ್ಯಂತ ಕಿರಿಯ ಪ್ರಾಂಶುಪಾಲ ಮುರ್ಶಿದಾಬಾದ್ ನ ಬಾಬರ್ ಅಲಿ. (16 ವರ್ಷ )

5.ಎಂಬಿಬಿಎಸ್ ನಲ್ಲಿ ದಾಖಲೆಯ 8 ಚಿನ್ನದ ಪದಕವನ್ನು ಪಡೆದವರು ಉಜ್ಮಾ ಬಾನು ವಿಜಯಪುರ

6. ವಿಟಿಯು ಯುನಿವರ್ಸಿಟಿಯಲ್ಲಿ ದಾಖಲೆಯ 12 ಚಿನ್ನದ ಪದಕಗಳನ್ನು ಪಡೆದವರು
ನಬೀಲ್ ಮುಸ್ತಫಾ

7.ಅತಿ ಕಿರಿಯ ಪ್ರಾಯದಲ್ಲಿ ಸಹಾಯಕ ಪ್ರೊಫೆಸರಾಗಿ ಇತಿಹಾಸ ಬರೆದವರು
ಮೊಹಮ್ಮದ್ ಸ್ವರೂಪ್ (21ವರ್ಷ)
ಹೀಗೆ ಈ ಪಟ್ಟಿ ಬೆಳೆಯುತ್ತದೆ.

ಬಹುಶಃ ನಮ್ಮಲ್ಲೂ ಕೂಡ ಸಾಧನೆಯ ಕಿಚ್ಚು ಹೊತ್ತಿಕೊಂಡಿದೆ. ದೇಶದ ಮುಖ್ಯವಾಹಿನಿಗೆ ಬರಬೇಕೆಂಬ ತುಡಿತ ಶುರುವಾಗಿದೆ. ಗುಜರಿ ಹೆಕ್ಕುವವರು, ಟಯರ್ ಪಂಕ್ಚರ್ ಹಾಕುವವರು ಎಂದೆಲ್ಲಾ ಕರೆಯಲ್ಪಡುವವರು ಸಾಧನೆ,ಪ್ರತಿಭೆಯ ಮೂಲಕ ದೇಶದಲ್ಲೇ ಮಿಂಚುತ್ತಿದ್ದಾರೆ.

ಬಹುಶಃ ಇದು ಪ್ರಾರಂಭ ಮಾತ್ರ.ನಮ್ಮ ಸಾಧನೆಯ ವೇಗ ಇನ್ನಷ್ಟು ಹೆಚ್ಚಲಿ. ನಾವು ದೇಶದ ಮುಖ್ಯವಾಹಿನಿಗೆ ಬರೋಣ.
ದೇಶಕ್ಕೆ ಕೀರ್ತಿ ತರೋಣ. ದೇಶದ ಮುನ್ನಡೆಯ ಮುಖ್ಯ ಭಾಗ ಆಗೋಣ.
ಟೀಕೆಗಳಿಗೆ ಸಾಧನೆಯ ಮೂಲಕ ಉತ್ತರಿಸೋಣ.
ನನ್ನ ಪ್ರಾರ್ಥನೆಗೆ ಉತ್ತರ ಸಿಗುತ್ತಿದೆ. ಅಲ್ಲಾಹನಿಗೆ ಸಾವಿರ ಸಾವಿರ ಸ್ತುತಿಗಳು.

✒️ರಫೀಕ್ ಮಾಸ್ಟರ್

    Leave Your Comment

    Your email address will not be published.*

    Open chat
    1
    ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...