ತಾಷ್ಕೆಂಟ್ ರಾಯಭಾರಿಯಾಗಿ ಅಧಿಕಾರ ವಹಿಸಿದ ಮನೀಷ್ ಪ್ರಭಾತ್ ರನ್ನು ಅಭಿನಂದಿಸಿದ ಡಾ.ಆರತಿ ಕೃಷ್ಣ


ದೆಹಲಿ(ವಿಶ್ವ ಕನ್ನಡಿಗ ನ್ಯೂಸ್):ತಾಷ್ಕೆಂಟ್ ಗೆ ಭಾರತದ ರಾಯಭಾರಿಯಾಗಿ ಅಧಿಕಾರ ವಹಿಸಿದ ಮನೀಷ್ ಪ್ರಭಾತ್ ರನ್ನು ಕರ್ನಾಟಕ ಸರಕಾರದ ಅನಿವಾಸಿ ಫಾರಂ ನ ಮಾಜಿ ಉಪಾಧ್ಯಕ್ಷೆ ಡಾ. ಆರತಿ ಕೃಷ್ಣರವರು ಅಭಿನಂದಿಸಿದರು.ಮಧ್ಯ ಏಷ್ಯಾದ ಉಝ್ಬೆಕಿಸ್ತಾನ ಭಾರತದೊಂದಿಗೆ ರಾಜಕೀಯವಾಗಿಯೂ,ಸಾಂಸ್ಕೃತಿಕವಾಗಿಯೂ ಐತಿಹಾಸಿಕ ಸಂಬಂಧವನ್ನು ಹೊಂದಿದ್ದು ಮಹತ್ವ ಪೂರ್ಣ ದೇಶವಾಗಿದೆ.ಭಾರತದ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿಗಳು ಅಕಾಲಿಕ ನಿಧನ ಹೊಂದಿದ್ದೂ ಇದೇ ತಾಷ್ಕಂಟ್ ನಲ್ಲಾಗಿತ್ತು.ಈ ಮಹತ್ವಪೂರ್ಣ ಹುದ್ದೆಯನ್ನು ವಹಿಸುವ ಸಂದರ್ಭದಲ್ಲಿ ಸಕಲ ಯಶಸ್ಸೂ ತಮ್ಮದಾಗಲಿ ಎಂದು ಡಾ.ಆರತಿಯವರು ಹಾರೈಸಿದ್ದಾರೆ.

ಸಂಪಾದಕರು,
ವಿಶ್ವ ಕನ್ನಡಿಗ ನ್ಯೂಸ್

  Leave Your Comment

  Your email address will not be published.*

  ಚಾಟ್ ಮಾಡಿ
  1
  VK News Official Chat
  ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...