ಕೋವಿಡ್ ವಾಕ್ಸಿನ್ ಸುರಕ್ಷಿತ ಎಂದು ಧೃಡಪಟ್ಟ ಬಳಿಕವೇ ಪ್ರಯೋಗ:ಸೌದಿ ಅರೇಬಿಯಾ


ರಿಯಾದ್(ವಿಶ್ವ ಕನ್ನಡಿಗ ನ್ಯೂಸ್):ಕೋವಿಡ್ ವಾಕ್ಸಿನ್ ಸುರಕ್ಷಿತ ಹಾಗು ಪರಿಣಾಮಕಾರಿ ಎಂದು ಧೃಡಪಟ್ಟ ಬಳಿಕವೇ ಪ್ರಯೋಗ ನಡೆಸುವುದಾಗಿಯೂ, ಈ ಬಗ್ಗೆ ಸರಕಾರ ನಿರಂತರ ಶ್ರಮಿಸುತ್ತಿರುವುದಾಗಿಯೂ ಆರೋಗ್ಯ ಸಚಿವರಾದ ಡಾ.ತೌಫೀಕ್ ಅಲ್ ರಾಬಿಹ್ ತಿಳಿಸಿದ್ದಾರೆ.ಕೋವಿಡ್ ನಿಯಂತ್ರಣಕ್ಕೆ ಬರುತ್ತಿದ್ದು ಇದಕ್ಕೆ ದೇವನಿಗೆ ಸ್ತುತಿಗಳು ಹಾಗು ವಾಕ್ಸಿನ್ ಅಭಿವೃದ್ದಿ ಪಡಿಸುವ ವಿಚಾರದಲ್ಲಿ ಸರಕಾರ ಸೂಕ್ಷ್ಮ ಹೆಜ್ಜೆಯನ್ನಿಡುತ್ತಿರುವುದಾಗಿ ಅವರು ತಿಳಿಸಿದರು.ಅನೇಕ ದೇಶಗಳಲ್ಲಿ ಎರಡನೇ ಅಲೆಯೂ ಸಂಕಷ್ಟಕ್ಕೆ ತಳ್ಳಿದ್ದು ಇದಕ್ಕೆ ಕೋವಿಡ್ ಮಾರ್ಗಸೂಚಿಗಳ ನಿರ್ಲಕ್ಷ್ಯ ಕಾರಣ,ಆದ್ದರಿಂದ ದೇಶದಲ್ಲಿ ಈ ತಪ್ಪು ಸಂಭವಿಸದಂತೆ ಯತ್ನಿಸುವುದಾಗಿ ಅವರು ಆಶಾವಾದ ವ್ಯಕ್ತಪಡಿಸಿದ್ದಾರೆ.ದೇಶದಾದ್ಯಂತ 230 ತತ್ಮಾನ್ ಕ್ಲಿನಿಕ್ ಗಳನ್ನು ಸ್ಥಾಪಿಸಿದ್ದು ಯಾವುದೇ ಲಕ್ಷಣಗಳು ಕಂಡುಬಂದರೆ ಅಲ್ಲಿ ಚಿಕಿತ್ಸೆ ಪಡೆಯಬಹುದು ಮಾತ್ರವಲ್ಲ ಯಾವುದೇ ಸಂದರ್ಭದಲ್ಲೂ 937 ಕ್ಕೆ ಕರೆ ಮಾಡಬಹುದು ಎಂದು ಅವರು ತಿಳಿಸಿದರು.

ಸಂಪಾದಕರು,
ವಿಶ್ವ ಕನ್ನಡಿಗ ನ್ಯೂಸ್

    Leave Your Comment

    Your email address will not be published.*

    Open chat
    1
    ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...