ಶೂರಾ ಕೌನ್ಸಿಲ್ ನ ಉಪಾಧ್ಯಕ್ಷೆಯಾಗಿ ಡಾ. ಹನಾನ್:ಸೌದಿ ಅರೇಬಿಯಾ ಸರಕಾರದ ಐತಿಹಾಸಿಕ ಹೆಜ್ಜೆ


ರಿಯಾದ್(ವಿಶ್ವ ಕನ್ನಡಿಗ ನ್ಯೂಸ್): ಸೌದಿ ರಾಜ ಸಲ್ಮಾನ್ ಹೊರಡಿಸಿದ ಸುತ್ತೋಲೆಯಲ್ಲಿ ಶೂರಾ ಕೌನ್ಸಿಲ್ ನ ಉಪಾಧ್ಯಕ್ಷೆಯಾಗಿ ಮೊದಲ ಬಾರಿಗೆ ಮಹಿಳೆಯೊಬ್ಬರು ಅಧಿಕಾರಕ್ಕೇರಿದ್ದಾರೆ.ಡಾ ಹನಾನ್ ಬಿನ್ತ್ ಅಬ್ದುಲ್ ರಹೀಂ ಅಲ್ ಅಹ್ಮದಿ ಯವರು ತಮ್ಮ ಭಡ್ತಿಯ ಕುರಿತು ಸಂತಸ ವ್ಯಕ್ತಪಡಿಸಿದ್ದು ತಮ್ಮನ್ನು ಆಯ್ಕೆಮಾಡಿದ ರಾಜರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

ಶೂರಾ ಕೌನ್ಸಿಲ್ ದೇಶದ ಆರ್ಥಿಕ -ಸಾಮಾಜಿಕ-ರಾಜಕೀಯ ರಂಗದಲ್ಲಿ ಪ್ರಭಾವ ಹೊಂದಿದ್ದು ದೇಶದ ಪ್ರಮುಖ ತೀರ್ಮಾನಗಳಲ್ಲಿ,ಸರಕಾರದ ನಿರ್ವಹಣೆಯಲ್ಲಿ,ಅಂತರಾಷ್ಟ್ರೀಯ ಮಟ್ಟದಲ್ಲಿ ದೇಶದ ಪಾತ್ರದ ಬಗ್ಗೆ ಕೂಡ ವಿಶೇಷ ಪ್ರಭಾವ ಬೀರುತ್ತದೆ.2014 ರಲ್ಲಿ ಶೂರಾ ಕೌನ್ಸಿಲ್ ಸದಸ್ಯೆಯಾಗಿ ಆಯ್ಕೆ ಮಾಡುವ ಮೂಲಕ ಐತಿಹಾಸಿಕ ಹೆಜ್ಜೆಯೆಂದು ಬಣ್ಣಿಸಲಾಗಿತ್ತು,ಇದೀಗ ಉಪಾಧ್ಯಕ್ಷೆ ಹುದ್ದೆಯ ಮೂಲಕ ಸೌದಿ ಸರಕಾರ ಸರಕಾರ ಜಾಗತಿಕ ಗಮನಸೆಳೆದಿದೆ.

ಡಾ ಹನ್ನಾನ್ ಕಿಂಗ್ ಸೌದ್ ವಿಶ್ವವಿದ್ಯಾನಿಲಯದಿಂದ ಎಕನಾಮಿಕ್ಸ್ ಪದವಿ ಪಡೆದಿದ್ದು,ಅಮೇರಿಕಾದ ಟುಲಾನೆ ವಿಶ್ವವಿದ್ಯಾನಿಲಯದಲ್ಲಿ ಪಬ್ಲಿಕ್ ಹೆಲ್ತ್ ಆಂಡ್ ಟ್ರಾಪಿಕಲ್ ಮೆಡಿಸಿನ್ ನಲ್ಲಿ ಮಾಸ್ಟರ್ಸ್ ಪದವಿ ಪಡೆದರು.ಅಮೇರಿಕಾದ ಪಿಟ್ಸ್ ಬರ್ಗ್ ವಿಶ್ವವಿದ್ಯಾನಿಲಯದಿಂದ ಪಬ್ಲಿಕ್ ಹೆಲ್ತ್ ಅಡ್ಮಿನಿಸ್ಟ್ರ‍ೇಷನ್ ವಿಷಯದಲ್ಲಿ ಡಾಕ್ಟರೇಟ್ ಕೂಡ ಪಡೆದಿದ್ದಾರೆ.

ಸಂಪಾದಕರು,
ವಿಶ್ವ ಕನ್ನಡಿಗ ನ್ಯೂಸ್

    Leave Your Comment

    Your email address will not be published.*

    Open chat
    1
    ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...