ಮುತ್ತಯ್ಯ ಜೀವನಾಧಾರಿತ ಚಿತ್ರದಿಂದ ಹಿಂದೆ ಸರಿದ ವಿಜಯ್ ಸೇತುಪತಿ.


ಚೆನ್ನೈ(ವಿಶ್ವ ಕನ್ನಡಿಗ ನ್ಯೂಸ್): ಶ್ರೀಲಂಕಾದ ಖ್ಯಾತ ಸ್ಪಿನ್ ಗಾರುಡಿಗ ಮುತ್ತಯ್ಯ ಮುರಳೀಧರನ್ ಜೀವನಾಧಾರಿತ ಚಲನಚಿತ್ರ “800” ದಿಂದ ಖ್ಯಾತ ತಮಿಳು ಚಿತ್ರ ನಟ ವಿಜಯ್ ಸೇತುಪತಿ ಹಿಂದೆ ಸರಿದಿದ್ದಾರೆ.2010 ರಲ್ಲಿ ಶ್ರೀಲಂಕಾದ ಕ್ರಿಕೆಟ್ ನಿಂದ ನಿವೃತ್ತಿಯಾಗಿದ್ದ ತಮಿಳು ಮೂಲದ ಮುರಳೀಧರನ್ ,ಶ್ರೀಲಂಕಾದಲ್ಲಿ ನಡೆದ ತಮಿಳರ-ಸಿಂಹಳೀಯರ ಶೀತಲ ಸಮರದಲಿ ತಟಸ್ಥ ನಿಲುವು ಹೊಂದಿದ್ದರು ಎಂದು ಎಂಡಿಎಂಕೆ ಪಕ್ಷ ಸೇರಿ ತಮಿಳರು ಆರೋಪಿಸುತ್ತಾರೆ.ಸೇತುಪತಿಯ ನಟನೆಯ ತೀರ್ಮಾನಕ್ಕೆ ವಿರುದ್ದವಾಗಿ ಶೇಮ್ ಆನ್ ಯೂ ವಿಜಯ್ ಸೇತುಪತಿ ಟ್ವಿಟರ್ ಚಳುವಳಿ ಟ್ರೆಂಡಿಂಗ್ ಆಗಿ ಮೂಡಿ ಬಂದಿತ್ತು.

ಭಾರತದಲ್ಲಿರುವ ತಮಿಳರಿಂದ ವಿರೋಧ ವ್ಯಕ್ತವಾಗಬಹುದು ಆದ್ದರಿಂದ ನೀವು ಈ ಯೋಜನೆಯಿಂದ ಹಿಂದೆ ಸರಿಯಿರಿ ಎಂದು ಸ್ವತಃ ಮುತ್ತಯ್ಯ ಮುರಳೀಧರನ್ ಮಾಡಿರುವುದನ್ನು ಪುರಸ್ಕರಿಸಿ ತಾವು ಹಿಂದೆ ಸರಿಯುವುದಾಗಿ ಟ್ವಿಟ್ಟರ್ ನಲ್ಲೇ ಘೋಷಿಸಿದ್ದಾರೆ..ಎಲ್ಟಿಟಿಯ ವಿರುದ್ದ ನಡೆದ ಸಂಘರ್ಷದಲ್ಲಿ ಕನಿಷ್ಠ 40000 ತಮಿಳಿಗರನ್ನು ಹತ್ಯೆಗೈಯ್ಯಲಾಗಿತ್ತು ಎಂದು ಅಂತರಾಷ್ಟ್ರೀಯ ಮಾನವಹಕ್ಕು ಸಂಸ್ಥೆಗಳು ಆರೋಪಿಸಿದೆ.

ಸಂಪಾದಕರು,
ವಿಶ್ವ ಕನ್ನಡಿಗ ನ್ಯೂಸ್

    Leave Your Comment

    Your email address will not be published.*

    Open chat
    1
    ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...