ಶ್ರೀನಿವಾಸ್ ವಿಶ್ವವಿದ್ಯಾಲಯದ ೨ನೇ ವಾರ್ಷಿಕ ಘಟಿಕೋತ್ಸವ

ಮಂಗಳೂರು, ಅ. 20 (www.vknews.com): ಶ್ರೀನಿವಾಸ್‌ವಿಶ್ವವಿದ್ಯಾಲಯದ 2ನೇ ವಾರ್ಷಿಕ ಘಟಿಕೋತ್ಸವವು ನಗರದ ಪಾಂಡೇಶ್ವರದಲ್ಲಿರುವ ಶ್ರೀನಿವಾಸ್‌ವಿಶ್ವವಿದ್ಯಾಲಯ ಸಿಟಿ ಕ್ಯಾಂಪಸ್‌ನಲ್ಲಿ ಅಕ್ಟೋಬರ್‌20ರಂದು ಮಂಗಳವಾರ ನಡೆಯಿತು.

ಘಟಿಕೋತ್ಸವದಲ್ಲಿ ಉಡುಪಿಯ ಪಲಿಮಾರು ಮಠದ ಶ್ರೀ ಶ್ರೀ ಶ್ರೀ ವಿದ್ಯಾಧೀಶ ತೀರ್ಥ ಸ್ವಾಮಿಜಿಯವರು ಮಾತನಾಡಿ ವಿದ್ಯಾರ್ಥಿಗಳಿಗೆ ಬೇಕಾಗುವ ಎಲ್ಲಾ ಶಿಕ್ಷಣವನ್ನು ಸಮರ್ಪಕವಾಗಿ ಪೂರೈಸವಲ್ಲಿ ವಿಶ್ವವಿದ್ಯಾಲಯಗಳು ಬಹಳಷ್ಟು ಪಾತ್ರವನ್ನು ವಹಿಸುತ್ತವೆ. ವಿಶ್ವವಿದ್ಯಾಲಯಗಳ ಪರಿಕಲ್ಪನೆಯು ಅಂದಿನ ಕಾಲದ ನಳಂದಾ, ತಕ್ಷಶಿಲೆಗಳಿಂದ ಇಂದಿನವರೆಗೂ ಬೆಳೆದು ಬಂದಿದೆ. ವಿದ್ಯಾರ್ಥಿಗಳ ಬೆಳವಣಿಗೆಗೆ ವಿಶ್ವವಿದ್ಯಾಲಯಗಳು ಮಹತ್ತರವಾದ ಪಾತ್ರವನ್ನು ವಹಿಸುತ್ತದೆ ಎಂದರು.

ಚಿಕ್ಕ ಹಂತದಿಂದ ಪ್ರಾರಂಭವಾದ ಶ್ರೀನಿವಾಸ ಶಿಕ್ಷಣ ಸಂಸ್ಥೆಯು ಇಂದು ಶ್ರೀನಿವಾಸ್‌ವಿಶ್ವವಿದ್ಯಾಲಯವಾಗಿ ಬೆಳೆದು ನಿಂತಿದೆ. ಶ್ರೀನಿವಾಸ್‌ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳಿಗೆ ಎಲ್ಲಾ ಕ್ಷೇತ್ರಗಳಲ್ಲೂ ಕಲಿಯುವ ಅವಕಾಶಗಳಿವೆ. ದೇವರ ಅನುಗ್ರಹ ಮತ್ತು ಪ್ರಾಮಾಣಿಕವಾದ ಪ್ರಯತ್ನ ಎರಡೂ ಜೊತೆಗಿದ್ದರೆ, ವಿದ್ಯಾರ್ಥಿಗಳು ಜಯವನ್ನು ಸಾಧಿಸಲು ಸಾಧ್ಯ ಎಂದರು.

ಡಾ. ಸಿ. ಎನ್. ಅಶ್ವತ್ ನಾರಾಯಣ್ – ಕರ್ನಾಟಕ ಸರಕಾರದ ಉಪಮುಖ್ಯಮಂತ್ರಿ ಹಾಗೂ ಉನ್ನತ ಶಿಕ್ಷಣ ಸಚಿವ ಮುಖ್ಯ ಅತಿಥಿಯಾಗಿ ಭಾಗವಹಿಸಿ ವರ್ಚುವಲ್ ವೇದಿಕೆಯ ಮೂಲಕ ಘಟಿಕೋತ್ಸವವನ್ನುದ್ದೇಶಿಸಿ ಮಾತನಾಡಿ, ಶ್ರೀನಿವಾಸ್‌ವಿಶ್ವವಿದ್ಯಾಲಯವು ಉದ್ಯಮಶೀಲ ತರಗತಿವಾರು ಪಠ್ಯಕ್ರಮಗಳನ್ನು ಅನುಸರಿಸುತ್ತಿದ್ದು, ವಿದ್ಯಾರ್ಥಿಗಳ ಏಳಿಗೆ ಹಾಗೂ ಅವರ ಭವಿಷ್ಯಕ್ಕೆ ಉತ್ತಮ ರೀತಿಯಲ್ಲಿ ಸಹಕರಿಸುತ್ತಿದೆ ಎಂದರು.

ಶ್ರೀನಿವಾಸ್ ವಿಶ್ವವಿದ್ಯಾಲಯದ ಕುಲಾಧಿಪತಿ ಶ್ರೀ ಸಿಎ. ಎ. ರಾಘವೇಂದ್ರ ರಾವ್‌ರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಕಳೆದ 25 ವರ್ಷಗಳಿಂದ ಸ್ವಾಮಿಜಿಗಳನ್ನು ನೋಡುತ್ತಿದ್ದೇನೆ. ಅವರು ಯಾವುದೇ ಕೆಲಸಗಳನ್ನು ಮಾಡುವಾಗ ಶ್ರದ್ಧಾ ಭಕ್ತಿಯಿಂದ ಮಾಡುತ್ತಿರುತ್ತಾರೆ. ಉಡುಪಿ ರಥಬೀದಿಯಲ್ಲಿ, ರಾಜಾಂಗಣದಲ್ಲಿ ನಗುಮುಖದಿಂದ ಜನರಿಗೆ ಸೇವೆಯನ್ನು ನೀಡುತ್ತಾ ಬರುತ್ತಿದ್ದಾರೆ ಎಂದರು.

ಘಟಿಕೋತ್ಸವದಲ್ಲಿ 232 ಪದವಿ ಹಾಗೂ 87 ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು, 1 ಸಂಶೋಧನಾ ವಿದ್ಯಾರ್ಥಿಗೆ ಪಿ. ಹೆಚ್.ಡಿ ಪದವಿ, 1 ಡಿ.ಲಿಟ್ ಪದವಿಯಂತೆ, ಒಟ್ಟು 38  ರ‍್ಯಾಂಕ್‌ಗಳೊAದಿಗೆ 11 ಚಿನ್ನದ ಪದಕಗಳನ್ನು ವಿದ್ಯಾರ್ಥಿಗಳಿಗೆ ನೀಡಲಾಯಿತು.

 

ಕುಲಾಧಿಪತಿ ಸಿಎ. ಎ. ರಾಘವೇಂದ್ರ ರಾವ್‌ ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಭೋಧಿಸಿದರು. ಸಹ ಕುಲಾಧಿಪತಿ, ಡಾ ಎ. ಶ್ರೀನಿವಾಸ್‌ ರಾವ್‌ ಸ್ವಾಗತಿಸಿದರು. ಕುಲಪತಿ ಡಾ. ಪಿ. ಎಸ್. ಐತಾಳ್‌ ಶ್ರೀನಿವಾಸ್‌ ವಿಶ್ವವಿದ್ಯಾಲಯದ ವರದಿ ವಾಚಿಸಿದರು. ಕುಲಸಚಿವ (ಅಭಿವೃದ್ಧಿ) ಡಾ. ಅಜಯ್‌ ಕುಮಾರ್‌ ಕರ್ನಾಟಕ ಸರಕಾರದ ಉಪಮುಖ್ಯಮಂತ್ರಿ ಹಾಗೂ ಉನ್ನತ ಶಿಕ್ಷಣ ಸಚಿವ ಡಾ ಸಿ. ಎನ್. ಅಶ್ವತ್ ನಾರಾಯಣ್ರವರ ಪರಿಚಯ ನೀಡಿದರು. ಕುಲಸಚಿವ ಡಾ. ಅನಿಲ್‌ ಕುಮಾರ್‌ ವಂದಿಸಿದರು. ಆಡಳಿತ ಮಂಡಳಿಯ ಟ್ರಸ್ಟಿ ಸದಸ್ಯರುಗಳಾದ ಶ್ರೀಮತಿ ವಿಜಯಲಕ್ಷ್ಮಿ ಆರ್. ರಾವ್, ಪ್ರೊ. ಎ. ಮಿತ್ರಾ ಎಸ್. ರಾವ್, ಕುಲಸಚಿವ ಆದಿತ್ಯ ಕುಮಾರ್ (ಶೈಕ್ಷಣಿಕ ಮತ್ತು ಅಭಿವೃದ್ಧಿ) ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಶ್ರೀನಿವಾಸ್‌ ವಿಶ್ವವಿದ್ಯಾಲಯ, ಕಾಲೇಜ್‌ ಆಫ್‌ ಇಂಜಿನಿಯರಿಂಗ್‌ ಆಂಡ್‌ ಟೆಕ್ನಾಲಜಿಯ ರೋಹನ್‌ ಫೆರ್ನಾಂಡಿಸ್‌ ಕಾರ್ಯಕ್ರಮ ನಿರೂಪಿಸಿದರು.

  Leave Your Comment

  Your email address will not be published.*

  ಚಾಟ್ ಮಾಡಿ
  1
  VK News Official Chat
  ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...