ಬಹರೈನ್: ಇಂಡಿಯನ್ ಸೋಷಿಯಲ್ ಫಾರಮ್ ಗೆ ಕೃತಜ್ಞತೆಗಳು ಸಲ್ಲಿಸಿ ತಾಯ್ನಾಡಿಗೆ ಮರಳಿದ ಯಾಸ್ಮೀನ್ ಬಾನು

ಬಹರೈನ್(ವಿಶ್ವಕನ್ನಡಿಗ ನ್ಯೂಸ್): ಮೂಲತಃ ಕರ್ನಾಟಕ ರಾಜ್ಯದ ಚಿಕ್ಕಬಳ್ಳಾಪುರ ಬಾಗೆಪಲ್ಲಿ ನಿವಾಸಿಯಾದ ಶ್ರೀಮತಿ ಯಾಸ್ಮೀನ್ ಬಾನು ರವರು ಸುಮಾರು 15 ವರ್ಷಗಳಿಂದ ಬಹರೈನ್ ನ ಬೂರಿ ಎಂಬಲ್ಲಿ ಟೈಲರಿಂಗ್ ಮತ್ತು ಮನೆ ದಾದಿ ಕೆಲಸವನ್ನು ಮಾಡುತ್ತಾ ಬಂದಿರುತ್ತಾರೆ.

ಆದರೆ ಜಗತ್ತಿನಾದ್ಯಂತ ಉದ್ಭವಿಸಿದ ಕೋವಿಡ್ ಸಮಸ್ಯೆ ಯ ಪರಿಣಾಮದಿಂದ ಯಾಸ್ಮೀನ್ ಬಾನು ತನ್ನ ಉದ್ಯೋಗ ಕಳೆದು ಕೊಳ್ಳುವುದರ ಜೊತೆಗೆ ತನ್ನ ಆರೋಗ್ಯದಲ್ಲಿ ಏರುಪೇರನ್ನು ಕಂಡು ಸಂಕಷ್ಟಕ್ಕೆ ಒಳಗಾಗಿ ಸಲ್ಮಾನೀಯ ಮೆಡಿಕಲ್ ಆಸ್ಪತ್ರೆಗೆ ದಾಖಲಾಗುತ್ತಾರೆ.

ಹಲವು ವೈದ್ಯಕೀಯ ಪರೀಕ್ಷೆ ಗೆ ಒಳಪಟ್ಟ ಸದ್ರಿಯವರನ್ನು ಪರೀಕ್ಷಿಸಿದ ಡಾ। ಆಯಿಶಾರವರು ರಕ್ತ ಕ್ಯಾನ್ಸರ್ ಲಕ್ಷಣಗಳನ್ನು ಸಂಶಯಿಸಿ ಉನ್ನತ ಚಿಕಿತ್ಸೆ ಗೆ ಸೂಚಿಸುತ್ತಾರೆ.
ದಿನದಿಂದ ದಿನಕ್ಕೆ ಉದ್ಭವಿಸುತ್ತಿರುವ ಆರೋಗ್ಯ ಸಮಸ್ಯೆಗೆ ಯಾಸ್ಮೀನ್ ಅವರಿಂದಾಗಲೀ, ಕುಟುಂಬದಿಂದಾಗಲೀ ಸರಿಯಾದ ಪ್ರತಿಕ್ರಿಯೆ ಬೆಂಬಲ ದೊರಕದೇ ಇದ್ದಾಗ ಊರಿಗೆ ಕಳುಹಿಸುವ ಅನಿವಾರ್ಯತೆ ಬರುತ್ತದೆ. ಈ ಸಮಯದಲ್ಲಿ ಯಾಸ್ಮೀನ್ ಬಾನು ಸಂಬಂದಿಯೊಬ್ಬರು ಟಿಕೆಟ್ ವ್ಯವಸ್ಥೆ ಮಾಡಿಸಿದರು .ಇಂಡಿಯನ್ ಸೋಷಿಯಲ್ ಫಾರಂ ಕಾರ್ಯಕರ್ತರು ಔಷಧಿಗಳನ್ನು ಮತ್ತು ಇತರ ಅಗತ್ಯ ವಸ್ತುಗಳನ್ನು , ಅವರ ಬಟ್ಟೆ ಬರೆಗಳ ತಯಾರಿ ನಡೆಸಿ ಯಾತ್ರೆ ಸಿದ್ಧತೆಗಳಿಸಿದರು.
ಎಸ್ ಎಂ ಸಿ ಸಿಬ್ಬಂದಿಗಳು ಸುಮಾರು 90/- ದಿನಾರ್ ಮೊತ್ತವನ್ನು ಖರ್ಚಿಗೆ ಹೊಂದಿಸಿದರು ಹಾಗೂ ಕೆಲವು ಬಟ್ಟೆಗಳನ್ನು ದಾನ ಮಾಡಿದರು .
ಅಲ್ ಹಮ್ದು ಲಿಲ್ಲಾ
ಶುಕ್ರವಾರ ದಂದು ಯಾಸ್ಮೀನ್ ಬಾನು ರವರು ತಮ್ಮ ತಾಯ್ನಾಡಿಗೆ ತಲುಪುವಲ್ಲಿ ಯಶಸ್ವಿ ಆಗಿರುತ್ತಾರೆ
.
ಈ ಘನ ಕಾರ್ಯಕ್ಕೆ ಕೈ ಜೋಡಿಸಿದ ಶ್ರೀ ಜೊನ್ ಫಿಲಿಪ್,
ಶ್ರೀ ಝುಬೈರ್, ಶ್ರೀ ಸಲೀಮ್ , ವಾರ್ಡ್ ಸಂಖ್ಯೆ 12 ನ ಡಾಕ್ಟರ್ ಆಯಿಶಾ ಮತ್ತು ಅವರ ಸಿಬ್ಬಂದಿಗಳು , ಇಂಡಿಯನ್ ಸೋಷಿಯಲ್ ಫಾರಮ್ ಬಹರೈನ್ ಅಧ್ಯಕ್ಷರಾದ ಶ್ರೀ ಜವಾದ್ ಪಾಶಾ ಚಿಕ್ಕಬಳ್ಳಾಪುರ , ಐ ಎಸ್ ಎಫ್ ಕರ್ನಾಟಕ ಅಧ್ಯಕ್ಷರಾದ ಶ್ರೀ ಇರ್ಫಾನ್ ಅಬ್ದುಲ್ ರಹ್ಮಾನ್, ಸ್ವಯಂ ಸೇವಕರಾದ ಜನಾಬ್ ತಾಬಿಷ್ ಬಿಹಾರ್ , ಜನಾಬ್ ಮೀರಾಜುದ್ದೀನ್ ಹೈದರಾಬಾದ್ ಸಹಕರಿಸಿದ ಸರ್ವರಿಗೂ ಇಂಡಿಯನ್ ಸೋಶಿಯಲ್ ಫಾರಮ್ ವತಿಯಿಂದ ಕೃತಜ್ಞತೆಗಳು.

  Leave Your Comment

  Your email address will not be published.*

  ಚಾಟ್ ಮಾಡಿ
  1
  VK News Official Chat
  ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...