ಎಸ್ಡಿಎಂಸಿ ಸಮನ್ವಯ ವೇದಿಕೆ ವತಿಯಿಂದ ಪಶ್ಚಿಮ ಪದವೀದರ ಕ್ಷೇತ್ರ ಅಭ್ಯರ್ಥಿ ಬಸವರಾಜ್ ಗುರಿಕಾರ್ ಪರ ಮತ ಯಾಚನೆ

(www.vknews.in). ಪಶ್ಚಿಮ ಪದವೀಧರ ಕ್ಷೇತ್ರ ಅಭ್ಯರ್ಥಿಯಾಗಿ ರುವ ಮಾನ್ಯ ಬಸವರಾಜ್ ಗುರಿಕಾರ್ ಪರ ರಾಜ್ಯ ಎಸ್ಡಿಎಂಸಿ ಸಮನ್ವಯ ವೇದಿಕೆ ಯ ಪರವಾಗಿ ಬಿರುಸಿನ ಮತ ಯಾಚನೆ ಯು ಇಂದು ಉತ್ತರಕನ್ನಡ ಜಿಲ್ಲೆಯ  ಅಂಕೋಲಾ ದಲ್ಲಿ ನಡೆಯಿತು.

ಮಾನ್ಯ ಬಸವರಾಜ್ ಗುರಿಕಾರ್ ರವರು ಪದವೀಧರ ಕ್ಷೇತ್ರ ದ ಪ್ರತಿನಿಧಿಯಾಗಿ ಈ ಸಲದ ಚುನಾವಣೆಯಲ್ಲಿ ಜಾತ್ಯಾತೀತ ಹಾಗೂ ಪಕ್ಷಾತೀತ ನೆಲೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ದ್ದು ಅವರಿಗೆ ಎಸ್ ಡಿ ಎಂ ಸಿ ಸಮನ್ವಯ ವೇದಿಕೆಯು ಬೆಂಬಲವನ್ನು ಸೂಚಿಸಿರುವ ಕಾರಣ ಅವರ ಪರವಾಗಿ ಮತ ಯಾಚಿಸಿದರು  ನಿಯೋಗದಲ್ಲಿ ರಾಜ್ಯ ಎಸ್ಡಿಎಂಸಿ ಸಮನ್ವಯ ವೇದಿಕೆ  ರಾಜ್ಯಾಧ್ಯಕ್ಷ ರಾದ ಮೊಯಿದಿನ್ ಕುಟ್ಟಿ, ಕಾರವಾರ ಜಿಲ್ಲಾ ಕಾರ್ಯದರ್ಶಿ ಬೀರನ್ನ ನಾಯಕ್, ರವಿಕುಮಾರ್ ಜಮಖಂಡಿ,ಹಾಗೂ ಉಡುಪಿ ಜಿಲ್ಲೆಯ ರಾಘವೇಂದ್ರ ಗಾಣಿಗ,ಜ್ಯೋತಿ ಶೆಟ್ಟಿ,ಹರೀಶ್ ಕೆ ಯವರು ಭಾಗವಹಿಸಿದ್ದರು

    Leave Your Comment

    Your email address will not be published.*

    Open chat
    1
    ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...