ಕೆಸಿಎಫ್ ದುಬೈ ನೊರ್ತ್ ಝೋನ್ ವತಿಯಿಂದ ಅಕ್ಟೊಬರ್ 23ಕ್ಕೆ ಬ್ರಹತ್ ಮೀಲಾದ್ ಸಮಾವೇಶ

ದುಬೈ(ವಿಶ್ವಕನ್ನಡಿಗ ನ್ಯೂಸ್): ಕನ್ನಡಿಗರ ಅನಿವಾಸಿ ಸಂಘಟನೆಯಾದ KCF ನ ಪ್ರಮುಖ ಝೋನ್ ಗಳಲ್ಲೊಂದಾದ ದುಬೈ ನೊರ್ತ್ ಝೋನ್ ಸಮಿತಿಯು ಲೋಕಾನುಗ್ರಹಿ ಪ್ರವಾದಿ ಮುಹಮ್ಮದ್ ಮುಸ್ತಫಾ ಸಲ್ಲಲ್ಲಾಹು ಅಲೈಹಿವಸಲ್ಲಮ ರವರ ಜನ್ಮ ದಿನಾಚರಣೆಯನ್ನು ” ಪ್ರವಾದಿ ಹಾಧಿಯಲ್ಲಿ ಗೆಲುವಿದೆ ” ಎಂಬ ಘೋಷ ವಾಕ್ಯದೊಂದಿಗೆ ಬ್ರಹತ್ ಮೀಲಾದ್ ಸಮಾವೇಶ ವನ್ನು 2020 ಅಕ್ಟೊಬರ್ 23ಕ್ಕೆ ನಡೆಸಲು ತೀರ್ಮಾನಿಸಿದ್ದು, ಕಾರ್ಯಕ್ರಮವು ಮೌಲಿದ್ ಹಾಗೂ ಬುರ್ದಾ ಆಲಾಪನೆ ಯೊಂದಿಗೆ ಪ್ರಾರಂಭ ಗೊಳ್ಳಲಿದೆ.

ಕಾರ್ಯಕ್ರಮದಲ್ಲಿ ಪ್ರಾರ್ಥನೆಗೆ ಬಹುಮಾನ್ಯರಾದ ಅಸ್ಸಯ್ಯಿದ್ ಶಿಹಾಬುದ್ದೀನ್ ತಂಘಳ್ ಕಿಲ್ಲೂರು ನೇತೃತ್ವ ನೀಡಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಉಡುಪಿ ಚಿಕ್ಕಮಗಳೂರು ಹಾಗು ಹಾಸನ ಜಿಲ್ಲಾ ಖಾಝಿಗಳಾದ ಝೆಯಿನುಲ್ ಉಲಮಾ ಮಾಣಿ ಉಸ್ತಾದ್ ರವರು ಭಾಗವಹಿಸಲಿದ್ದಾರೆ.
ಕನ್ನಡಿಗರ ಕಣ್ಮಣಿ, ಭಾಷಣ ಲೋಕದ ಮಿನುಗು ತಾರೆ ನೌಫಲ್ ಸಖಾಫಿ ಕಳಸ ಮುಖ್ಯ ಭಾಷಣ ಮಾಡಲಿದ್ದಾರೆ.

ಸಮಾರಂಭದಲ್ಲಿ KCF INC ಅಧ್ಯಕ್ಷರಾದ ಡಾ:ಶೇಖ್ ಭಾವ ಹಾಜಿ ಮಂಗಳೂರು, KCF UAE ರಾಷ್ಟ್ರೀಯ ಸಮಿತಿ ಅಧ್ಯಕ್ಷರಾದ ಜಲೀಲ್ ನಿಝಾಮಿ, KCF INC ಕೋಶಾಧಿಕಾರಿ ಅಬ್ದುಲ್ ಹಮೀದ್ ಸಹದಿ ಈಶ್ವರಮಂಗಲ, KCF UAE ರಾಷ್ಟ್ರೀಯ ಸಮಿತಿ ಪ್ರಧಾನ ಕಾರ್ಯದರ್ಶಿ ಮೂಸಾ ಹಾಜಿ ಬಸರ, KCF UAE ರಾಷ್ಟ್ರೀಯ ಸಮಿತಿ ಕೋಶಾಧಿಕಾರಿ ಇಬ್ರಾಹಿಂ ಹಾಜಿ ಬ್ರೈಟ್ ಮಾರ್ಬಲ್, ಅಬೂಬಕರ್ ಹಾಜಿ ಕೊಟ್ಟಮುಡಿ ಹಾಗೂ ಅಶ್ರಫ್ ಹಾಜಿ ಅಡ್ಯಾರ್ ,ಅಬ್ದುಲ್ ರಝಕ್ ಕಾಂತಡ್ಕ ಸ್ವಾಗತ ಸಮಿತಿ ಅಧ್ಯಕ್ಷರಾದ ಖಾದರ್ ಸಾಲೆತ್ತೂರು, ಕೋಶಾಧಿಕಾರಿ ಇಬ್ರಾಹಿಮ್ ಮದನಿ ಸಾಮಣಿಗೆ ರವರುಗಳನ್ನೊಳಗೊಂಡ ಹಲವಾರು ಉಲಮಾ ಉಮರಾ ನೇತಾರರು ಭಾಗವಹಿಸಲಿದ್ದಾರೆ ಎಂದು ಪ್ರಕಟನೆಯಲ್ಲಿ  ಸ್ವಾಗತ ಸಮಿತಿ ಸಂಚಾಲಕರಾದ ರಾಶಿದ್ ಕುಂಬ್ರರವರು ತಿಳಿಸಿದ್ದಾರೆ.

ಪ್ರಸ್ತುತ ಕಾರ್ಯಕ್ರಮಕ್ಕೆ ಪ್ರವಾದಿ ಪ್ರೇಮಿಗಳಾದ ತಮ್ಮನ್ನು ಆದರ ಪೂರ್ವಕವಾಗಿ ಆಹ್ವಾನಿಸುತ್ತಿದ್ದೇವೆ ಎಂದು ಸಂಘಟಕರು ತಿಳಿಸಿದ್ದಾರೆ.

 

    Leave Your Comment

    Your email address will not be published.*

    Open chat
    1
    ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...