ವಿಕೆ ನ್ಯೂಸ್ ಅಂಕಣಕಾರರಾದ ಡಾ.ಮುರಳೀ ಮೋಹನ್ ಸೇರಿ ಏಳು ವೈದ್ಯರುಗಳಿಗೆ ಸಾಹಿತ್ಯ ಸೇವೆಗೆ ಸನ್ಮಾನ


ಬೆಂಗಳೂರು (ವಿಶ್ವ ಕನ್ನಡಿಗ ನ್ಯೂಸ್):ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವ ವಿದ್ಯಾನಿಲಯ-ಕರ್ನಾಟಕ ಕನ್ನಡ ರಾಜ್ಯೋತ್ಸವ ಸಮಾರಂಭದ ಅಂಗವಾಗಿ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಕೊಡುಗೆ ನೀಡಿರುವ ವೈದ್ಯರಿಗೆ ಸನ್ಮಾನ ನಡೆಸಲಿದ್ದು ಡಾ.ಬಿ.ಡಿ ಸತ್ಯನಾರಾಯಣ(ವೈದ್ಯಕೀಯ),ಡಾ.ಮಹಾಬಲ ರಾಜು(ವೈದ್ಯಕೀಯ),ಡಾ. ಮುರಳೀ ಮೋಹನ(ದಂತ ವೈದ್ಯಕೀಯ), ಡಾ.ಸಂತೋಷ್ ಎನ್ ಬೆಳವಾಡಿ (ಆಯುರ್ವೇದ),ಡಾ.ಶಿವಪ್ರಸಾದ್.ಕೆ(ಹೋಮಿಯೋಪತಿ),ಡಾ. ವೃಂದ ಬೆಡೇಕರ್ (ಯೋಗ ಹಾಗು ನ್ಯಾಚುರೋಪತಿ),ಪ್ರೊ.ಕೃಷ್ಣ ಮೂರ್ತಿ (ಶುಶ್ರೂಷ) ಸನ್ಮಾನಿತ ವೈದ್ಯರುಗಳು.ವಿಶ್ವ ಕನ್ನಡಿಗ ನ್ಯೂಸ್ ನ ಅಂಕಣಕಾರರಾಗಿಯೂ ಸಾಹಿತ್ಯ ಸೇವೆ ಸಲ್ಲಿಸುತ್ತಿರುವ ಡಾ.ಮುರಳೀ ಮೋಹನ್ ಚೂಂತಾರು ಗೃಹ ರಕ್ಷಕ ದಳದ ಸಮಾದೇಷ್ಟರು ಮತ್ತು ದಕ ಜಿಲ್ಲಾ ನಾಗರಿಕ ರಕ್ಷಣಾ ಪಡೆ ಇದರ ಚೀಫ್ ವಾರ್ಡನ್ ಕೂಡ ಆಗಿದ್ದಾರೆ.

ಡಾ.ಮುರಳೀ ಮೋಹನ್ ಸುರಕ್ಷಾ(ದಂತ ಆರೋಗ್ಯ ಮಾರ್ಗದರ್ಶಿ),ಸಂಜೀವಿನಿ(ಆರೋಗ್ಯ ಮಾರ್ಗದರ್ಶಿ) ಭಾಗ-1/2,ಧನ್ವಂತರಿ,ಸಂಕಲ್ಪ-2020,ಅರಿವು (ಬಾಯಿ ಕ್ಯಾನ್ಸರ್ ಮಾರ್ಗದರ್ಶಿ),ಚಿತ್ರಾನ್ನ(32 ನೈಜ ದಂತ ಕಥೆಗಳು),ಸುಮುಖ(ದಂತ ಆರೋಗ್ಯ ಮಾರ್ಗದರ್ಶಿ),ರಕ್ತದಾನ ಜೀವದಾನ,ಕಚಗುಳಿ(ದಂತ ಹನಿಗವನಗಳು) ಮೊದಲಾದ ಕೃತಿಗಳನ್ನು ರಚಿಸಿದ್ದಾರೆ.ಹಲವು ಪತ್ರಿಕೆಗಳಿಗಳಲ್ಲಿ,ತಾಣಗಳಿಗಳಲ್ಲಿ ಸಮಕಾಲೀನ ವೈದ್ಯಕೀಯ ಬರಹಗಳು ಪ್ರಕಟವಾಗುತ್ತಿದೆ.


ಸಂಪಾದಕರು,
ವಿಶ್ವ ಕನ್ನಡಿಗ ನ್ಯೂಸ್

    Leave Your Comment

    Your email address will not be published.*

    Open chat
    1
    ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...