ತುರೈಫ್ ವಿಂಟರ್ ಬ್ಯಾಸ್ – 2020 ಕಪ್ ಜೀ ಯೀ ( GE) ವಾರಿಯರ್ಸ್‌ ಮಡಿಲಿಗೆ


ಸೌದಿ ಅರೇಬಿಯಾ(ವಿಶ್ವ ಕನ್ನಡಿಗ ನ್ಯೂಸ್): ತುರೈಫ್ ನಲ್ಲಿ ನಡೆದ ನಿಯಮಿತ ಓವರ್ ಗಳ ಕ್ರಿಕೆಟ್ ಪಂದ್ಯಾಟದ ಸೆಮಿ ಪೈನಲಿನಲ್ಲಿ ಬ್ಲ್ಯಾಕ್ ಪೈಟರ್ಸ್ ಮತ್ತು ರೋಯಲ್ ಸ್ಟ್ರೈಕರ್ಸ್ ನಡುವೆ ಮತ್ತು‌ ಬಾರಿಯ ಕಿಂಗ್ಸ್ ಮತ್ತು ಜೀ ಯೀ ವಾರಿಯರ್ಸ್‌ ನಡುವೆ ಪಂದ್ಯಾಟ ನಡೆಯಿತು,‌ ಪೈನಲ್ ನಲ್ಲಿ ರೋಯಲ್ ಸ್ಟ್ರೈಕರ್ಸ್ ಮತ್ತು ಜೀ ಯೀ ವಾರಿಯರ್ಸ್‌ ನಡುವೆ ನಡೆದ ರೋಚಕ ಪಂದ್ಯಾಟದಲ್ಲಿ ಜೀ ಯೀ ವಾರಿಯರ್ಸ್‌ ಗೆಲುವು ಸಾಧಿಸಿತು, ರೋಯಲ್ ಸ್ಟ್ರೈಕರ್ಸ್ ವಿನ್ನರ್ ಅಪ್ ಮತ್ತು ಹಲವು ಪ್ರಶಸ್ತಿಗಳನ್ನು ಪಡೆಯಿತು, ಎಲ್ಲಾ ಪಂದ್ಯಾಟಗಳು ಪ್ರೇಕ್ಷಕರನ್ನು ಕೊನೆತನಕ ಕಾತರದಲ್ಲಿ ಇರುವಂತೆ ನಡೆಯಿತು.


ಅಪ್ಜಲ್ ಗಂಟಲ್ ಕಟ್ಟೆ ಮ್ಯಾನ್ ಆಪ್ ದಿ ಸೀರೀಸ್ ಮತ್ತು ಮ್ಯಾನ್ ಆಪ್ ದಿ ಮ್ಯಾಚ್ ಪಡೆದರು, ಇಮ್ರಾನ್ ಅತ್ಯುತ್ತಮ ಬ್ಯಾಟ್ಸ್‌ಮನ್ , ಸೌಹಾನ್ ಅತ್ಯುತ್ತಮ ಪೀಲ್ಡರ್ , ಶಹೀರ್ ಬೋಂದೇಲ್ ಅತ್ಯುತ್ತಮ ಕೀಪರ್, ಅಲ್ತಾಪ್ ಅತ್ಯುತ್ತಮ ಬೌಲರ್ ಪ್ರಶಸ್ತಿಗಳನ್ನು ಪಡೆದರು.

ಅತ್ಯುತ್ತಮ ನ್ಯಾಯೋಚಿತ ತಂಡವಾಗಿ ಬ್ಲ್ಯಾಕ್ ಪೈಟರ್ಸ್ ನ‌ ಸಪ್ವಾನ್ ಬಜ್ಪೆ ಪ್ರಶಸ್ತಿ ಪಡೆದರು, ಪಂದ್ಯಾಟದಲ್ಲಿ ಪ್ರೇಕ್ಷಕರಿಗೆ ಕೂಪನ್ ಎತ್ತುವ ಮೂಲಕ ವಿವಿಧ ಆಕರ್ಷಕ ಬಹುಮಾನ ನೀಡಲಾಯಿತು, ಮುಹ್ಸಿನ್ ಕೊಡಗು ಮತ್ತು ಜುನೈದ್ ಪಾಯಿಝ್ ಪಂದ್ಯಾಟದ ಕಾಮೆಟಂರಿ ನಿರ್ವಹಿಸಿದರು, ಜುನೈದ್ ಪಾಯಿಝ್ ಪ್ರಶಸ್ತಿ ಪ್ರಧಾನ ಸಮಾರಂಭದ ನಿರ್ವಹಣೆ ನಡೆಸಿದರು.

ಪಂದ್ಯಾಟದ ಪ್ರಾಯೋಜಕರಾಗಿ ಗೋಲ್ಡನ್ ಡ್ಯೂನ್ & ಝೈದ್ ಹೋಟೆಲ್, ಮೆಕ್ ವೆಲ್, ಸುಮೋ (Sumouo) ಸೌದಿ ಅರೇಬಿಯಾ, ಟ್ರಾನ್ಸೆಂಟ್ ಅರೇಬಿಯಾ ಕಾಂಟ್ರಾಕ್ಟ್ ಕಂಪೆನಿಗಳು ಸಹಕರಿಸಿತು, ಪಂದ್ಯಾಟದ ಯ್ಯೂಟ್ಟೂಬ್ ಮತ್ತು ಪೇಸ್ ಬುಕ್ ಲೈವ್ ಮತ್ತು ಕಾರ್ಯಕ್ರಮದ ನಿರ್ವಹಣೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದು ವಿಷೇಶವಾಗಿತ್ತು.ಇಬ್ರಾಹಿಮ್ ಸಾಲೆತ್ತೂರು (TNET), ಶಿಹಾಬ್ ಜಾರಿಗೆಬೈಲು, ನೌಫಾಲ್ ಮೂಳೂರು, ಅಪ್ಜಲ್, ಶಹೀರ್ ಕಾರ್ಯಕ್ರಮದ ಆಯೋಜನೆ ನಡೆಸಿದರು.

ಸಂಪಾದಕರು,
ವಿಶ್ವ ಕನ್ನಡಿಗ ನ್ಯೂಸ್

    Leave Your Comment

    Your email address will not be published.*

    Open chat
    1
    ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...