ಭಾರತ ಶೀಘ್ರದಲ್ಲೇ ಪ್ರಜಾಪ್ರಭುತ್ವ ಸ್ಥಾನವನ್ನು ಕಳೆದುಕೊಳ್ಳಲಿದೆ: ವಿ ಡೆಮ್ ಸಂಸ್ಥೆಯ ಆಘಾತಕಾರಿ ವರದಿ


ದೆಹಲಿ(ವಿಶ್ವ ಕನ್ನಡಿಗ ನ್ಯೂಸ್): ಮಾಧ್ಯಮಗಳ ಮೇಲೆ ಹೆಚ್ಚುತ್ತಿರುವ ನಿಯಂತ್ರಣ,ನಾಗರಿಕ ಸಮಾಜದ ಮೇಲಿನ ದಬ್ಬಾಳಿಕೆ,ವಿರೋಧ ಪಕ್ಷಗಳ ಸದ್ದಡಗಿಸುವಿಕೆ ಹೀಗೆ ಪ್ರಧಾನಿ ನರೇಂದ್ರ ಮೋದಿ ಸರಕಾರ ಅಧಿಕಾರಕ್ಕೇರಿದ ಬಳಿಕ ನಡೆಯುತ್ತಿದ್ದು ಭಾರತ ಪ್ರಜಾಪ್ರಭುತ್ವ ಸ್ಥಾನಮಾನವನ್ನು ಶೀಘ್ರದಲ್ಲೇ ಕಳೆದುಕೊಳ್ಳಲಿದೆ ಎಂದು ಸ್ವೀಡನ್ ಮೂಲದ ವಿ ಡೆಮ್ ಸಂಸ್ಥೆ ವರದಿ ಮಾಡಿದೆ.ಗೋಟೆನ್ ಬರ್ಗ್ ವಿಶ್ವವಿದ್ಯಾನಿಯಲದಲ್ಲಿ ಕಾರ್ಯ ನಿರ್ವಹಿಸುವ ವಿ ಡೆಮ್ ಸಂಸ್ಥೆ 2017 ರಿಂದ ವಿಶ್ವದಾದ್ಯಂತ ಇರುವ ಪ್ರಜಾಪ್ರಭುತ್ವ ಡಾಟಾ ಹೊರತರುತ್ತಿದ್ದು,ವಿಶ್ವದಲ್ಲೇ ಅತೀ ದೊಡ್ಡ ಪ್ರಜಾಪ್ರಭುತ್ವ ಸಂಬಂಧ ಮಾಹಿತಿ ಸಂಗ್ರಹಿಸುವ ಸಂಸ್ಥೆಯಾಗಿ ತನ್ನನ್ನು ಗುರುತಿಸಿಕೊಂಡಿದೆ.

2020 ರ ವರದಿ “ಅಟೋಕ್ರಾಟಿಸೇಷನ್ ಸರ್ಜಸ್-ರೆಸಿಸ್ಟೆನ್ಸ್ ಗ್ರೋಸ್” ಎನ್ನುವ ತಲೆಬರಹದಲ್ಲಿ ಬಿಡುಗಡೆಯಾದ ಮಾಹಿತಿ ಪುಸ್ತಕದಲ್ಲಿ ಭಾರತದ ಕುರಿತು ವಿವರಿಸುತ್ತಾ ಭಾರತ ಪ್ರಜಾಪ್ರಭುತ್ವದ ದಿಕ್ಕಿನಲ್ಲಿ ತೀವ್ರ ಕುಸಿತ ಕಾಣುತ್ತಿದೆ,ಶೀಘ್ರದಲ್ಲೇ ಪ್ರಜಾ ಪ್ರಭುತ್ವ ಪತನ ಕಾಣಲಿದೆ ಎಂದಿದೆ.2019 ರಲ್ಲಿ ಎಕನಾಮಿಸ್ಟ್ ಗ್ರೂಪ್ ಹೊರತಂದ ಡೆಮಾಕ್ರಸಿ ಇಂಡೆಕ್ಸ್ ನಲ್ಲೂ ಭಾರತ 10 ಸ್ಥಾನಗಳಷ್ಟು ಕುಸಿದು 51 ನೇ ಸ್ಥಾನಕ್ಕೆ ತಳ್ಳಲ್ಪಟ್ಟಿತ್ತು ಎನ್ನುವುದು ಗಮನಾರ್ಹ

ಸಂಪಾದಕರು,
ವಿಶ್ವ ಕನ್ನಡಿಗ ನ್ಯೂಸ್

  Leave Your Comment

  Your email address will not be published.*

  ಚಾಟ್ ಮಾಡಿ
  1
  VK News Official Chat
  ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...