ಸೌದಿ ಅರೇಬಿಯಾ: ಪ್ರಾಯೋಜಕತ್ವ (ಸ್ಪೋನ್ಸರ್ ಶಿಫ್) ರದ್ದತಿಗೆ ಸೌದಿ ಸರಕಾರದ ತೀರ್ಮಾನ

ಜೆದ್ದಾ(www.vknews.in): ಸೌದಿ ಅರೇಬಿಯಾದಲ್ಲಿ ಅನೇಕ ದಶಕಗಳಿಂದ ಪ್ರಾಬಲ್ಯದಲ್ಲಿರುವ ಸ್ಪೋನ್ಸರ್ ಶಿಫ್ (ಕಫಾಲ) ಪದ್ದತಿಯನ್ನು ರದ್ದುಗೊಳಿಸಿ ಪರ್ಯಾಯ ವ್ಯವಸ್ಥೆಯನ್ನು ಜಾರಿಗೊಳಿಸಲು ಸೌದಿ ಮಾನವ ಸಂಪನ್ಮೂಲ ಮಂತ್ರಾಲಯ ತೀರ್ಮಾನಿಸಿದೆ ಎಂದು ಅಧಿಕೃತ ಮೂಲಗಳಿಂದ ತಿಳಿದು ಬಂದಿದೆ. ಈ ಕುರಿತಂತೆ ಸಚಿವಾಲಯವು ಶೀಘ್ರವೇ ಅಧಿಸೂಚನೆ ಹೊರಡಿಸಲಿದೆ.

ಪ್ರಸಕ್ತ ಸ್ಪೋನ್ಸರ್ ಶಿಫ್ ಪದ್ದತಿಯ ಪ್ರಕಾರ ಸೌದಿ ಅರೇಬಿಯಾದಲ್ಲಿರುವ ವಿದೇಶಿ ನೌಕರರು ವ್ಯಾಪಾರ ಪ್ರಾರಂಭಿಸಲು ಸೌದಿ ಪ್ರಜೆಯ ಪ್ರಾಯೋಜಕತ್ವವು ಕಡ್ಡಾಯವಾಗಿದ್ದು, ಈ ಪದ್ದತಿಯನ್ನು ರದ್ದುಗೊಳಿಸಲು ಸೌದಿ ಮಾನವ ಸಂಪನ್ಮೂಲ ಮಂತ್ರಾಲಯ ಮುಂದಾಗಿದೆ. ಈ ಕುರಿತ ಮಾರ್ಗಸೂಚಿ ಮುಂದಿನ ಒಂದೆರಡು ವಾರಗಳಲ್ಲಿ ಹೊರಬೀಳಲಿದ್ದು, ಮುಂದಿನ ವರ್ಷದ ಮದ್ಯಭಾಗದಲ್ಲಿ ಈ ಹೊಸ ಕಾನೂನು ಜಾರಿಗೆ ಬರಲಿದೆ.

  Leave Your Comment

  Your email address will not be published.*

  ಚಾಟ್ ಮಾಡಿ
  1
  VK News Official Chat
  ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...