ಮಂಗಳೂರು(www.Vknews.in): ನಂದಾವರ ಸೇತುವೆಯ ಬಳಿ ತ್ಯಾಜ್ಯಗಳ ರಾಶಿ ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಜನ ಸಂಚಾರಕ್ಕೇ ತೊಂದರೆ ಉಂಟಾಗುತ್ತಿದೆ. ಇಂದು ಲೋಕ ಪ್ರವಾದಿ ಮುಹಮ್ಮದ್ ಮುಸ್ತಫಾ(ಸ.ಅ)ರ ಜನ್ಮ ದಿನಾಚರಣೆಯ ಪ್ರಯುಕ್ತ ಎಸ್ಡಿಪಿಐ ನಂದಾವರ ಶಾಖೆಯ ವತಿಯಿಂದ ಈ ತ್ಯಾಜ್ಯಗಳನ್ನು ಸ್ವಚ್ಛ ಮಾಡಿ ಜನ ಸಂಚಾರಕ್ಕೇ ಅನುಕೂಲ ಮಾಡಿಕೊಟ್ಟರು.
ಎಸ್ಡಿಪಿಐ ನಂದಾವರ ಸಮಿತಿ ಅಧ್ಯಕ್ಷ ಆಸೀಫ್ ನಂದಾವರ, ಎಸ್ಡಿಪಿಐ ಬೆಂಬಲಿತ ಸದಸ್ಯ ಶಮೀರ್ ನಂದಾವರ,
ಸಿದ್ದೀಕ್ ಅರಫಾ ಹಾಗೂ ಜಮಾಲ್ ರಾಯಲ್ ಸ್ವಚ್ಛತಾ ಕಾರ್ಯದಲ್ಲಿ ಭಾಗಿಯಾಗಿದ್ದರು.