ಎನ್.ಐ.ಎ ಬಿಜೆಪಿ ಏಜೆನ್ಸಿಯಾಗಿ ಕಾರ್ಯ ನಿರ್ವಹಿಸುತ್ತಿದೆ: ಎನ್.ಜಿ.ಒ ದಾಳಿ ಖಂಡಿಸಿ ಟ್ವೀಟ್ ಮಾಡಿದ ಮೆಹಬೂಬಾ ಮುಫ್ತಿ


ಜಮ್ಮು ಕಾಶ್ಮೀರ (ವಿಶ್ವ ಕನ್ನಡಿಗ ನ್ಯೂಸ್): ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕ ಮತ್ತು ಪ್ರತ್ಯೇಕತಾವಾದಿ ಚಟುವಟಿಕೆಗಳಿಗಾಗಿ ದೇಶ, ವಿದೇಶಗಳಿಂದ ಹಣ ಸಂಗ್ರಹಿಸಲಾಗುತ್ತಿತ್ತು ಎಂಬ ಆರೋಪದ ಹಿನ್ನಲೆಯಲ್ಲಿ ವಿವಿಧ ಎನ್‌ಜಿಒ ಮತ್ತು ಟ್ರಸ್ಟ್‌ಗಳ ಮೇಲೆ ಎನ್‌ಐಎ ದಾಳಿ ನಡೆಸಿದೆ.ಈ ಸಂಬಂಧ ಕಾಶ್ಮೀರ ಕಣಿವೆಯ 10 ಸಂಸ್ಥೆಗಳು ಮತ್ತು ಬೆಂಗಳೂರಿನಲ್ಲಿ 1 ಸ್ಥಳದ ಮೇಲೆ ದಾಳಿ ನಡೆಸಿರುವುದಾಗಿ,ದೆಹಲಿಯ 6 ಎನ್‌ಜಿಒ ಮತ್ತು ಟ್ರಸ್ಟ್‌ಗಳ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಲಾಗುತ್ತಿದೆ.

ಜಮ್ಮು ಕಾಶ್ಮೀರ ಒಕ್ಕೂಟದ ಸಿವಿಲ್ ಸೊಸೈಟಿಯ ಖುರ್ರಾಮ್ ಪರ್ವೇಜ್, ಎಎಫ್‌ಪಿ ಪತ್ರಕರ್ತ ಪರ್ವೇಜ್ ಅಹ್ಮದ್ ಬುಖಾರಿ, ಪರ್ವೇಜ್ ಅಹ್ಮದ್ ಮಟ್ಟಾ ,ಬೆಂಗಳೂರು ಮೂಲದ ಸ್ವಾತಿ ಶೇಷಾದ್ರಿ , ಕಣ್ಮರೆಯಾದ ವ್ಯಕ್ತಿಗಳ ಪೋಷಕರ ಸಂಘದ (APDP) ಅಧ್ಯಕ್ಷ ಪರ್ವೀನಾ ಅಹಂಗರ್ , ಎನ್‌ಜಿಒ ಅಥ್ರೌಟ್ ಮತ್ತು ಗ್ರೇಟರ್ ಕಾಶ್ಮೀರ ಟ್ರಸ್ಟ್‌ನ ಕಚೇರಿಗಳ ಮೇಲೆ ಎನ್‌ಐಎ ದಾಳಿ ನಡೆಸಿದೆ.

ರಾಷ್ಟ್ರೀಯ ತನಿಖಾ ಸಂಸ್ಥೆಯು ಎನ್‌ಜಿಒಗಳಿಂದ ಹಲವಾರು ದೋಷಾರೋಪಣೆ ದಾಖಲೆಗಳು ಮತ್ತು ಎಲೆಕ್ಟ್ರಾನಿಕ್ ಸಾಧನಗಳನ್ನು ವಶಪಡಿಸಿಕೊಂಡಿದೆ ಎಂದು ತಿಳಿಸಿದೆ. ದಾಳಿಗೊಳಗದ ಎಡಿಪಿಡಿ ಸಂಸ್ಥೆ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ,ಇದು ಕಾಶ್ಮೀರದಲ್ಲಿ ಮಾನವ ಹಕ್ಕುಗಳ ರಕ್ಷಕರ ಮೇಲಿನ ಪ್ರತಿಕಾರ ಮತ್ತು ದಮನವಾಗಿದೆ,ನಮ್ಮ ಧ್ವನಿಯನ್ನು ಕ್ರೂರವಾಗಿ ಹತ್ತಿಕ್ಕಲಾಗುತ್ತಿದೆ.ನ್ಯಾಯಕ್ಕಾಗಿ ನಾವು ಇಡುವ ನಮ್ಮ ಬೇಡಿಕೆಗಳನ್ನು ಅಪರಾಧೀಕರಿಸಲಾಗುತ್ತಿದೆ ಎಂದಿದೆ.

ಎಪಿಡಿಪಿ ಎನ್‌ಜಿಒ ಅಧ್ಯಕ್ಷೆ ಪರ್ವೀನಾ ಅಹಂಗರ್ ಅವರ ಜತೆ ಬೆಂಗಳೂರಿನ ಮೂಲದ ಸಂಶೋದಕಿ ಸ್ವಾತಿ ಅವರಿಗೆ ನಿಕಟ ಸಂಪರ್ಕ ಇತ್ತು ಎಂದು ಹೇಳಲಾಗಿದೆ.ಅವರ ನಿವಾಸಕ್ಕೆ ಭೇಟಿ ನೀಡಿದ ಎನ್‍ಐಎ ಅಧಿಕಾರಿಗಳು ಶೋಧ ನಡೆಸಿದರು.

ಪಿಡಿಪಿ ಪಕ್ಷದ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಈ ದಾಳಿಗಳನ್ನು ಖಂಡಿಸಿ ಟ್ವೀಟ್ ಮಾಡಿದ್ದಾರೆ ಮತ್ತು ದಾಳಿಯನ್ನು ಭಿನ್ನಾಭಿಪ್ರಾಯದ ಮೇಲೆ ಕೆಟ್ಟ ದಬ್ಬಾಳಿಕೆ ಎಂದು ಕರೆದಿದ್ದಾರೆ.ಶ್ರೀನಗರದ ಮಾನವ ಹಕ್ಕುಗಳ ಕಾರ್ಯಕರ್ತ ಖುರ್ರಾಮ್ ಪರ್ವೇಜ್ ಮತ್ತು ಗ್ರೇಟರ್ ಕಾಶ್ಮೀರ ಕಚೇರಿಯ ಮೇಲೆ ಎನ್ಐಎ ದಾಳಿ ನಡೆಸಿದ್ದು, ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಭಿನ್ನಾಭಿಪ್ರಾಯದ ಮೇಲೆ ಕೇಂದ್ರ ಸರ್ಕಾರದ ಕೆಟ್ಟ ದಮನಕ್ಕೆ ಮತ್ತೊಂದು ಉದಾಹರಣೆಯಾಗಿದೆ. ದುಃಖಕರವೆಂದರೆ, ಎನ್‌ಐಎ ಬಿಜೆಪಿಯ ಏಜೆನ್ಸಿಯಾಗಿ ಮಾರ್ಪಟ್ಟಿದೆ ಎಂದು ಆರೋಪಿಸಿದ್ದಾರೆ.ಅಂತೆಯೇ ಈ ಘಟನೆಯನ್ನು ಹಲವು ಮಂದಿ ಖಂಡಿಸಿದ್ದಾರೆ. ಜೊತೆಗೆ ಕೇಂದ್ರ ಸರ್ಕಾರ ರಾಷ್ಟ್ರೀಯ ತನಿಖಾ ದಳವನ್ನು ತನ್ನ ಅಜೆಂಡಾಗಳಿಗಾಗಿ ಬಳಸುತ್ತಿದೆ ಎಂದು ಸಾಮಾಜಿಕ ಕಾರ್ಯಕರ್ತರು, ಹೋರಾಟಗಾರರು ಆರೋಪಿಸಿದ್ದಾರೆ.

ಸಂಪಾದಕರು,
ವಿಶ್ವ ಕನ್ನಡಿಗ ನ್ಯೂಸ್

  • https://www.facebook.com/233795873624727/posts/788061991531443/?sfnsn=wiwspwa&funlid=IQGU2UZKrNx0ATh7
    October 30, 2020 at 11:09 pm

    ಯಾರ ಉದ್ದಾರಕ್ಕೆ ಸ್ವಾತಂತ್ರ್ಯ, ಪ್ರಜಾಪ್ರಭುತ್ವ ಸ್ಥಾಪಿಸಲಾಯಿತೋ ಅದೇ ಜನ ತಮ್ಮ ಅಜ್ಜ್ಞಾನ ಮತ್ತು ಐಕ್ಯತೆ ಯ ಕೊರತೆಯಿಂದ ತಾವು ಸಮಾನತೆಯ ಸುಖ ಅನುಭವಿಸಲು ಇನ್ನೂ ಸಾಮರ್ಥ್ಯ ಪಡೆದಿಲ್ಲ ಎಂದು ಜಗತ್ತಿನೆದುರು ತೋರಲು ಹೊರಟಿದ್ದಾರೆ.

ಚಾಟ್ ಮಾಡಿ
1
VK News Official Chat
ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...