ಜೆದ್ದಾ(www.Vknews.in): ಸೌದಿ ಅರೇಬಿಯಾವು ಬಿಡುಗಡೆ ಗೊಳಿಸಲಿರುವ 20 ರಿಯಾಲ್ ಮುಖಬೆಲೆಯ ಹೊಸ ಕರೆನ್ಸಿ ನೋಟಿಗೆ ಭಾರತವು ತೀವೃ ವಿರೋಧ ವ್ಯಕ್ತಪಡಿಸಿದ್ಜು, ಕರೆನ್ಸಿಯಲ್ಲಿ ಮುದ್ರಿತವಾಗಿರುವ ಭಾರತದ ಭೂಪ್ರದೇಶವನ್ನು ಸರಿಪಡಿಸುವಂತೆ ಸೌದಿ ಸರಕಾರವನ್ನು ಆಗ್ರಹಿಸಿದೆ.
ಸೌದಿಯ ಹೊಸ ಕರೆನ್ಸಿಯಲ್ಲಿ ಮುದ್ರಿತವಾಗಿರುವ ವಿಶ್ವನಕ್ಷೆಯಲ್ಲಿ ಭಾರತದ ರಾಜ್ಯವಾಗಿರುವ ಜಮ್ಮು ಕಾಶ್ಮಿರದ ಕೇಂದ್ರ ಪ್ರದೇಶಗಳನ್ನು ಹಾಗೂ ಲಡಾಖನ್ನು ಭಾರತದ ಭೂಪ್ರದೇಶದ ಹೊರಗೆ ಇಟ್ಟಿರುವುದು ಭಾರತದ ತೀವೃ ಆಕ್ರೋಶಕ್ಕೆ ಕಾರಣವಾಗಿದೆ.