ಕೇಲ್ತಾಜೆ (www.Vknews.in): ಮಸೀದಿ ಆಡಳಿತ ಮಂಡಳಿಯ ನಿಯೋಗದಿಂದ ಶಾಸಕರಾದ ಮಾನ್ಯ ಶ್ರೀ ಹರೀಶ್ ಪೂಂಜ ರನ್ನು ಭೇಟಿ ಮಾಡಲಾಯಿತು. ಕೇಲ್ತಾಜೆ ಮಸೀದಿಯ ಹತ್ತಿರ ಜನಸಂದಣಿಯ ಪ್ರದೇಶವಾಗಿದ್ದು, ರಾತ್ರಿ ಸಮಯದಲ್ಲಿ ಬೆಳಕಿನ ವ್ಯವಸ್ಥೆ ಇಲ್ಲದೆ ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ.
ಇದನ್ನು ಮನಗಂಡು ಶಾಸಕರಿಗೆ ಹೈಮಾಸ್ಕ್ ಅಳವಡಿಸಲು ಮನವಿ ಸಲ್ಲಿಸಲಾಯಿತು. ಡಿಸೆಂಬರ್ ತಿಂಗಳಲ್ಲಿ ನಡೆಸಲು ಉದ್ದೇಶಿಸಿರುವ ಕಟ್ಟಡ ಉದ್ಘಾಟನೆಗೆ ಶಾಸಕರನ್ನು ಆಹ್ವಾನಿಸಲಾಯಿತು. ಶೀಘ್ರದಲ್ಲಿ ಹೈಮಾಸ್ಕ್ ಅಳವಡಿಸುವುದಾಗಿ ಶಾಸಕರು ಭರವಸೆ ನೀಡಿದರು. ಭೇಟಿ ನೀಡಿದ ನಿಯೋಗದಲ್ಲಿ ಅಧ್ಯಕ್ಷರಾದ ಅಬ್ದುಲ್ ಹಮೀದ್ ಟಿ, ಪ್ರ. ಕಾರ್ಯದರ್ಶಿ ಹನೀಫ್ ಕೆ, ಕೋಶಾಧಿಕಾರಿ ಅಬುಸಾಲಿ ಕೆ, ಸದಸ್ಯರಾದ ಅಶ್ರಫ್ ಪಾರ್ನಡ್ಕ ಉಪಸ್ಥಿತರಿದ್ದರು.
– ಅಬೂ ಶಝಾ ಪಾರ್ನಡ್ಕ